ETV Bharat / business

11,350 ಕಾರ್ಮಿಕರಿಗೆ ಕೆಲಸದಿಂದ ಗೆಟ್​ಪಾಸ್: ಡಿಸ್ನಿ ವರ್ಲ್ಡ್ ಪ್ರಕಟಣೆಗೆ 18,000 ನೌಕರರು ಕಂಗಾಲು! - ಮನೋರಂಜನಾ ಕ್ಷೇತ್ರದ ಮೇಲೆ ಕೊರೊನಾ ಪ್ರಭಾವ

ಫ್ಲೋರಿಡಾದಲ್ಲಿ ಇನ್ನೂ 6,400 ಕಾರ್ಮಿಕರು ಸಹ ತಮ್ಮ ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ಕಂಪನಿಯ ಅಧಿಕಾರಿಗಳು ಈ ಹಿಂದೆ ಹೇಳಿದ್ದರು. ಈ ವಾರದಲ್ಲಿ 720 ಡಿಸ್ನಿ ವರ್ಲ್ಡ್ ನಟರು ಮತ್ತು ಗಾಯಕರನ್ನು ವಜಾಗೊಳಿಸಲಾಗಿದೆ. ಫ್ಲೋರಿಡಾ ರೆಸಾರ್ಟ್‌ನಲ್ಲಿನ ಅನೇಕ ಲೈವ್ ಮನರಂಜನಾ ಪ್ರದರ್ಶನಗಳು ನಡೆಯುತ್ತಿಲ್ಲ. ಎಂದು ಪ್ರದರ್ಶಕರನ್ನು ಪ್ರತಿನಿಧಿಸುವ ಈಕ್ವಿಟಿ ಅಸೋಸಿಯೇಷನ್ ಕಾರ್ಮಿಕ ಸಂಘ ತಿಳಿಸಿದೆ.

Disney World
ಡಿಸ್ನಿ ವರ್ಲ್ಡ್
author img

By

Published : Oct 31, 2020, 4:36 PM IST

ಒರ್ಲ್ಯಾಂಡೊ (ಯುಎಸ್): ಹೊಸ ಕೊರೊನಾ ವೈರಸ್ ಹೆಚ್ಚಳದಿಂದಾಗಿ 11,000ಕ್ಕೂ ಅಧಿಕ ಕಾರ್ಮಿಕರನ್ನು ವಜಾಗೊಳಿಸಲು ಯೋಜಿಸಲಾಗಿದೆ ಎಂದು ವಾಲ್ಟ್ ಡಿಸ್ನಿ ವರ್ಲ್ಡ್ ಹೇಳಿದೆ.

ಫ್ಲೋರಿಡಾ ರೆಸಾರ್ಟ್‌ನಲ್ಲಿ ಒಟ್ಟು ಸಾಂಕ್ರಾಮಿಕ ಸಂಬಂಧಿತ ಉದ್ಯೋಗ ಕಡಿತದ ಭೀತಿ ಸುಮಾರು 18,000 ನೌಕರರಲ್ಲಿ ಮೂಡಿದೆ.

11,350 ಕಾರ್ಮಿಕರು ಅರೆಕಾಲಿಕ ಕೆಲಸಗಾರರಾಗಿದ್ದು, ವರ್ಷದ ಕೊನೆಯಲ್ಲಿ ವಜಾಗೊಳಿಸಲಾಗುವುದು ಎಂದು ಡಿಸ್ನಿ ವರ್ಲ್ಡ್ ಗುರುವಾರ ರಾಜ್ಯ ಮತ್ತು ಸ್ಥಳೀಯ ಮುಖಂಡರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಫ್ಲೋರಿಡಾದಲ್ಲಿ ಇನ್ನೂ 6,400 ಕಾರ್ಮಿಕರು ಸಹ ತಮ್ಮ ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ಕಂಪನಿಯ ಅಧಿಕಾರಿಗಳು ಈ ಹಿಂದೆ ಹೇಳಿದ್ದರು. ಈ ವಾರದಲ್ಲಿ 720 ಡಿಸ್ನಿ ವರ್ಲ್ಡ್ ನಟರು ಮತ್ತು ಗಾಯಕರನ್ನು ವಜಾಗೊಳಿಸಲಾಗಿದೆ. ಫ್ಲೋರಿಡಾ ರೆಸಾರ್ಟ್‌ನಲ್ಲಿನ ಅನೇಕ ಲೈವ್ ಮನರಂಜನಾ ಪ್ರದರ್ಶನಗಳು ನಡೆಯುತ್ತಿಲ್ಲ. ಎಂದು ಪ್ರದರ್ಶಕರನ್ನು ಪ್ರತಿನಿಧಿಸುವ ಈಕ್ವಿಟಿ ಅಸೋಸಿಯೇಷನ್ ಕಾರ್ಮಿಕ ಸಂಘ ತಿಳಿಸಿದೆ.

ಸಾಂಕ್ರಾಮಿಕ ರೋಗದಿಂದಾಗಿ ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾದ ತನ್ನ ಉದ್ಯಾನ ವಿಭಾಗದಲ್ಲಿನ 28,000 ಉದ್ಯೋಗಗಳನ್ನು ಕಡಿತ ಮಾಡುವುದಾಗಿ ದಿ ವಾಲ್ಟ್ ಡಿಸ್ನಿ ಕಂಪನಿ ಕಳೆದ ತಿಂಗಳು ನಿರ್ಧಾರ ತೆಗೆದುಕೊಂಡಿತ್ತು. ಅದರ ಒಂದು ಭಾಗವಾಗಿ ಈ ಕಡಿತ ಮುಂದುವರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.