ಕೋಲ್ಕತಾ: ಕೊರೊನಾ ವೈರಸ್ ಪ್ರೇರಿತ ಲಾಕ್ಡೌನ್ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯಾಂಕ್ ನೌಕರರು ಎಂದಿನಂತೆಯೇ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ನಡೆಸಲಾದ ತಪಾಸಣೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ), ಉದ್ಯೋಗ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಕೋಲ್ಕತ್ತಾದ ಸ್ಥಳೀಯ ಪ್ರಧಾನ ಕಚೇರಿಯ (ಎಲ್‌ಎಚ್‌ಒ) ಒಂದು ಶಾಖೆಯನ್ನು ಮುಚ್ಚಲಾಗಿದೆ. ಈ ನೌಕರನು ಎಲ್ಎಚ್ಒನ 'ಇ' ವಿಭಾಗದಲ್ಲಿರುವ ಹೊಣೆಗಾರಿಕೆ ಕೇಂದ್ರೀಕೃತ ಸಂಸ್ಕರಣಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ.
ಕಳೆದ ಒಂದೂವರೆ ವಾರದಿಂದ ಎಸ್‌ಬಿಐನ ಈ ಉದ್ಯೋಗಿ ಕಚೇರಿಗೆ ಹಾಜರಾಗಲಿಲ್ಲ. ತಪಾಸಣೆಯ ಬಳಿಕ ಮಾರಣಾಂತಿಕ ವೈರಸ್‌ಗೆ ತುತ್ತಾಗಿರುವುದು ಕಂಡುಬಂದಿದೆ. ಸೋಂಕು ಇರುವಿಕೆ ದೃಢಪಡುತ್ತಿದ್ದಂತೆ, ಆ ದಿನದಿಂದ ನಾವು ಸಂಪೂರ್ಣ ಕಟ್ಟಡವನ್ನೇ ಸ್ವಚ್ಛಗೊಳಿಸಿದ್ದೇವೆ. ಮೇ 11ರವರೆಗೆ ಈ ವಿಭಾಗವನ್ನು ಮುಚ್ಚಲಾಗಿದೆ. ಇತರೆ ಇಲಾಖೆಗಳು ಎಂದಿನಂತೆಯೇ ಕಾರ್ಯನಿರತ ಆಗಲಿವೆ ಎಂದು ಎಸ್‌ಬಿಐ ಅಧಿಕಾರಿ ಹೇಳಿದ್ದಾರೆ.
ಉದ್ಯೋಗಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜವಾಬ್ದಾರಿಯುತವಾಗಿ ನಾವು ಎಲ್ಲಾ ಉದ್ಯೋಗಿಗಳ ಸುರಕ್ಷತೆಯ ಕಡೆ ಗಮನಹರಿಸಬೇಕು. ಇಂತಹ ಸವಾಲಿನ ವೇಳೆಯಲ್ಲೂ ಪ್ರೋಟೋಕಾಲ್ ಅನುಸರಿಸಬೇಕಾಗುತ್ತದೆ ಎಂದಿದ್ದಾರೆ.
ವಿದೇಶಕ್ಕೆ ಪ್ರಯಾಣಿಸಿದ ಇನ್ನೊಬ್ಬ ಎಸ್‌ಬಿಐ ಸಿಬ್ಬಂದಿ ಸಹ ಪಾಸಿಟಿವ್ ವರದಿ ಬಂದಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರು ಚೇತರಿಸಿಕೊಂಡಿದ್ದಾರೆ.