ನವದೆಹಲಿ: ಕೋಕಾಕೋಲಾ ಇಂಡಿಯಾ, ಕೋವಿಡ್-19 ಬಿಕ್ಕಟ್ಟನ್ನು ಎದುರಿಸಲು ಆರೋಗ್ಯ ಆರೈಕೆ ವ್ಯವಸ್ಥೆ ಮತ್ತು ಸಮುದಾಯಗಳಿಗೆ ನೆರವಾಗಲು 100 ಕೋಟಿ ರೂ. ಬೆಂಬಲ ನೀಡುವುದಾಗಿ ಘೋಷಿಸಿದೆ.
ಭಾರತದಲ್ಲಿ ಕೋಕಾಕೋಲಾ ಆರಂಭಿಸಿರುವ ಪರಿಹಾರ ಕಾರ್ಯಕ್ರಮಗಳಿಂದ ದೇಶದಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆರೋಗ್ಯ ಕಾರ್ಯಕರ್ತರಿಗೆ ಪರೀಕ್ಷಾ ಸೌಲಭ್ಯ ಮತ್ತು ವೈಯಕ್ತಿಕ ರಕ್ಷಣಾ ಉಪಕರಣ (ಪಿಪಿಐ) ಸೇರಿದಂತೆ ದೇಶದ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಈ ತಕ್ಷಣವೇ ಬೆಂಬಲ ನೀಡುತ್ತಿದ್ದೇವೆ ಎಂದಿದೆ.
ಎನ್ಜಿಒ ಮತ್ತು ಬಾಟಲರ್ಸ್ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ. ಲಾಕ್ಡೌನ್ ಅವಧಿಯಲ್ಲಿ ತೀವ್ರ ಪ್ರಭಾವಕ್ಕೆ ಒಳಗಾಗಿರುವ ಸಮುದಾಯಗಳಾದ ನಿರುದ್ಯೋಗಿಗಳು ಮತ್ತು ವಲಸಿಗ ಕಾರ್ಮಿಕರಿಗೆ ಊಟ ಮತ್ತು ಪಾನೀಯ ಹಂಚುವ ಮೂಲಕ ನೆರವು ನೀಡಲು ಶ್ರಮಿಸುತ್ತಿದ್ದೇವೆ. ಬಾಟಲರ್ಸ್ಗಳ ಸಹಭಾಗಿತ್ವದಲ್ಲಿ 10 ರಾಜ್ಯಗಳಾದ್ಯಂತ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಕ್ರಿಯವಾಗಿದೆ ಎಂದು ಹೇಳಿದೆ.
ಕೋಕಾಕೋಲಾ ಇಂಡಿಯಾ ಪಾಲುದಾರ ಸಂಘಟನೆ ಹಾಗೂ ಎನ್ಜಿಒಗಳಾದ ಅಕ್ಷಯ ಪಾತ್ರೆ ಫೌಂಡೇಷನ್, ವನರಾಯ್, ಚಿಂತನ್, ಹಸಿರುದಳ, ಮಂಥನ್ ಸಂಸ್ಮರಣೆ ಮತ್ತು ಅಮೆರಿಕನ್ ಇಂಡಿಯಾ ಫೌಂಡೇಷನ್ ಕಾರ್ಯನಿರ್ವಹಿಸುತ್ತಿದೆ. ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಉಚಿತ ಊಟ ಮತ್ತು ಪಡಿತರ ಧಾನ್ಯ, ಮತ್ತು ತುರ್ತು ವೈದ್ಯಕೀಯ ನೆರವು ನೀಡುತ್ತಿದೆ.