ETV Bharat / business

ಸಿಪ್ಲಾದಿಂದ 1.20 ಲಕ್ಷ ರೂ.ಗೆ ಕೊರೊನಾ ಔಷಧ: ಕಾಕ್ಟೈಲ್​ ಡೋಸ್​ನ ಕಾರ್ಯವೈಖರಿ ಹೇಗೆ​?

ಕಾಕ್ಟೈಲ್ ಜಬ್‌ಗಳ ಎರಡನೇ ಬ್ಯಾಚ್ ಜೂನ್ ಮಧ್ಯದ ವೇಳೆಗೆ ಲಭ್ಯವಾಗಲಿದೆ. ಭಾರತದಲ್ಲಿ ಲಭ್ಯವಾಗಲಿರುವ 1,00,000 ಪ್ಯಾಕ್‌ಗಳಲ್ಲಿ ಪ್ರತಿಯೊಂದೂ ಇಬ್ಬರು ರೋಗಿಗಳಿಗೆ ಚಿಕಿತ್ಸೆಗೆ ನೀಡಲಾಗುತ್ತದೆ. 2,00,000 ರೋಗಿಗಳಿಗೆ ಪ್ರಯೋಜನ ಪಡೆಯಬಹುದು ಎಂದು ಸಿಪ್ಲಾ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

Cipla
Cipla
author img

By

Published : May 24, 2021, 3:38 PM IST

ಮುಂಬೈ: ರೋಚೆ ಇಂಡಿಯಾ ತನ್ನ ಮೊದಲ ಬ್ಯಾಚ್​ನ ಆಂಟಿಬಾಡಿ ಕಾಕ್ಟೈಲ್ (ಕ್ಯಾಸಿರಿ ವಿಮಾಬ್ ಮತ್ತು ಇಮ್ಡೆವಿಮಾಬ್) ಅನ್ನು ಕೊರೊನಾ ಸೋಂಕಿನ ಚಿಕಿತ್ಸೆಗೆ ಬಳಸುವಿದಾಗಿ ತಿಳಿಸಿದೆ. ಈ ಕಾಕ್ಟೈಲ್ ಔಷಧವನ್ನು ದೇಶಾದ್ಯಂತ ಸಿಪ್ಲಾ ಮಾರಾಟ ಮಾಡುತ್ತದೆ.

ಕಾಕ್ಟೈಲ್ ಜಬ್‌ಗಳ ಎರಡನೇ ಬ್ಯಾಚ್ ಜೂನ್ ಮಧ್ಯದ ವೇಳೆಗೆ ಲಭ್ಯವಾಗಲಿದೆ. ಭಾರತದಲ್ಲಿ ಲಭ್ಯವಾಗಲಿರುವ 1,00,000 ಪ್ಯಾಕ್‌ಗಳಲ್ಲಿ ಪ್ರತಿಯೊಂದೂ ಇಬ್ಬರು ರೋಗಿಗಳಿಗೆ ಚಿಕಿತ್ಸೆಗೆ ನೀಡಲಾಗುತ್ತದೆ. 2,00,000 ರೋಗಿಗಳಿಗೆ ಪ್ರಯೋಜನ ಪಡೆಯಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿ ರೋಗಿಯ ಡೋಸ್‌ಗೆ 1,200 ಎಂಜಿ (600 ಎಂಜಿ ಕ್ಯಾಸಿರಿ ವಿಮಾಬ್ ಮತ್ತು 600 ಎಂಜಿ ಇಮ್ಡೆವಿಮಾಬ್) ಒಟ್ಟು 59,750 ರೂ. ನೀಡಬೇಕಾಗುತ್ತದೆ. ಮಲ್ಟಿ-ಡೋಸ್ ಪ್ಯಾಕ್‌ನ ಗರಿಷ್ಠ ಚಿಲ್ಲರೆ ಬೆಲೆ (ಪ್ರತಿ ಪ್ಯಾಕ್ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಬಲ್ಲದು) 1,19,500 ರೂ. ಆಗುತ್ತದೆ.

ಕ್ಯಾಸಿರಿವಿಮಾಬ್-ಇಮ್ಡೆವಿಮಾಬ್ ಇಂಜೆಕ್ಷನ್ ಎರಡು ಮೊನೊಕ್ಲೋನಲ್ ಪ್ರತಿಕಾಯಗಳ ಕಾಕ್ಟೈಲ್ ಆಗಿದೆ. ಇದನ್ನು ಕೋವಿಡ್ -19ಗೆ ಕಾರಣವಾಗುವ ವೈರಸ್ SARS-CoV-2 ನ ಸಾಂಕ್ರಾಮಿಕತೆ ತಡೆಯಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಮರು ಸಂಯೋಜಕ ಡಿಎನ್‌ಎ ತಂತ್ರಜ್ಞಾನದಿಂದ ಮೊನೊಕ್ಲೋನಲ್ ಪ್ರತಿಕಾಯಗಳು ಉತ್ಪತ್ತಿ ಮಾಡುತ್ತದೆ ಎಂದು ಔಷಧದ ಕಾರ್ಯವೈಖರಿ ಹಾಗೂ ವೈರಸ್ ನಿಯಂತ್ರಣದ ಬಗ್ಗೆ ತಿಳಿಸಿದೆ.

ಪ್ರತಿಕಾಯ ಕಾಕ್ಟೈಲ್ ಜಬ್ ಅನ್ನು ವಯಸ್ಕರು ಮತ್ತು 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಕರು ಹಾಗೂ ಕನಿಷ್ಠ 40 ಕೆ.ಜಿ. ತೂಕದ ಮಕ್ಕಳಲ್ಲಿ ಸೌಮ್ಯದಿಂದ ಮಧ್ಯಮ ಕಾಯಿಲೆಯ ಚಿಕಿತ್ಸೆಗಾಗಿ ನೀಡಬಹುದು. ತೀವ್ರವಾದ ರೋಗದ ಹೆಚ್ಚಿನ ಅಪಾಯದಲ್ಲಿ ಇರುವವರು ಮತ್ತು ಆಮ್ಲಜನಕ ಅಗತ್ಯವಿಲ್ಲ ಎಂದು ಕಂಪನಿ ಹೇಳಿದೆ.

ಕಾಕ್ಟೈಲ್ ಔಷಧವು ಹೆಚ್ಚು ಅಪಾಯಕಾರಿಯಾದ ರೋಗಿಗಳ ಸ್ಥಿತಿ ಹದಗೆಡುವ ಮೊದಲು ಅವರಿಗೆ ಸಹಾಯ ಮಾಡುತ್ತದೆ ಎಂಬುದು ಸಾಬೀತುಪಡಿಸಿದೆ. ಆಸ್ಪತ್ರೆಗೆ ದಾಖಲು ಮತ್ತು ಮಾರಣಾಂತಿಕ ಅಪಾಯವನ್ನು ಶೇ 70ರಷ್ಟು ಕಡಿಮೆ ಮಾಡುತ್ತದೆ. ರೋಗಲಕ್ಷಣಗಳ ಅವಧಿಯನ್ನು ನಾಲ್ಕು ದಿನಗಳವರೆಗೆ ಕಡಿಮೆ ಮಾಡುತ್ತದೆ ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.