ನವದೆಹಲಿ: ಹಣಕಾಸು ಬಿಕ್ಕಟ್ಟಿನಿಂದ ಬಳಲುತ್ತಿರುವ ಖಾಸಗಿ ವಲಯದ ಬ್ಯಾಂಕಿನಲ್ಲಿ ಶೇ 49ರಷ್ಟು ಪಾಲ ಅನ್ನು ಎಸ್‌ಬಿಐ ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೂಪಿಸಿದ ಯೆಸ್ ಬ್ಯಾಂಕ್ ಪುನಶ್ಚೇತನದ ಕರುಡು ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.
ಎಲ್ಲಾ ಹೂಡಿಕೆದಾರರಿಗೆ ಬಂಡವಾಳ ಹೂಡುವ ದಿನಾಂಕದಿಂದ ಮೂರು ವರ್ಷಗಳವರೆಗೆ ಹಿಡುವಳಿ ಅವಧಿ ನೀಡಲಾಗಿದೆ. ಎಸ್‌ಬಿಐಗೆ ಶೇ 26ಕ್ಕಿಂತ ಕಡಿಮೆ ಮೊದಲ ಹಿಡುವಳಿ ಇರುತ್ತದೆ. ಸಾಲಗಾರನ ಅಧಿಕೃತ ಬಂಡವಾಳ 1,100 ಕೋಟಿ ರೂ.ಗಳಿಂದ 6,200 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದರು.
ಠೇವಣಿದಾರರ ಹಿತಾಸಕ್ತಿಯನ್ನು ರಕ್ಷಿಸುವ ಹಾಗೂ ಯೆಸ್ ಬ್ಯಾಂಕ್ ಜೊತೆಗೆ ಇಡೀ ಹಣಕಾಸು ವ್ಯವಸ್ಥೆಗೆ ಸ್ಥಿರತೆಯನ್ನು ಒದಗಿಸುವ ಉದ್ದೇಶದಿಂದ ಈ ಅನುಮೋದನೆ ಪಡೆಯಲಾಗಿದೆ ಎಂದು ತಿಳಿಸಿದರು.
ಪುನಶ್ಚೇತನ ಯೋಜನೆ ಅಧಿಸೂಚನೆಯಾದ 3 ದಿನಗಳಲ್ಲಿ ಬ್ಯಾಂಕಿನ ಮೇಲಿರುವ ವಹಿವಾಟಿನ ನಿಷೇಧವನ್ನು ತೆಗೆದುಹಾಕಲಾಗುವುದು. ಅದರ ಮಂಡಳಿಯು 7 ದಿನಗಳ ಕಾಲ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದರು.