ನವದೆಹಲಿ: ಚೀನಾ ಮೂಲದ ಬೈಟ್ ಡ್ಯಾನ್ಸ್ ಸಹೋದರ ಕಂಪನಿಯಾದ ಜನಪ್ರಿಯ ಕಿರು ವಿಡಿಯೋ ಅಪ್ಲಿಕೇಷನ್ ಟಿಕ್ಟಾಕ್ನಿಂದಾಗಿ ಭಾರತದಲ್ಲಿ ಪ್ರಥಮ ಬಾರಿಗೆ ಸೋಷಿಯಲ್ ಮೀಡಿಯಾದ ಅಂತಾರಾಷ್ಟ್ರೀಯ ಡೇಟಾ ಕೇಂದ್ರ ತಲೆಯತ್ತಲಿದೆ.
ನಮ್ಮ ಪ್ರಬಲ ಮಾರುಕಟ್ಟೆಗಳಲ್ಲಿ ಭಾರತ ಪ್ರಮುಖವಾದ ಸ್ಥಾನ ಪಡೆದಿದೆ. 15 ಭಾಷೆಗಳಲ್ಲಿ ಡಿಜಿಟಲ್ ಇಂಡಿಯಾದ ಮೇನ್‌ಫ್ರೇಮ್‌ನ ಭಾಗವಾಗಲು ನಮಗೆ ಸಂತೋಷವಾಗಿದೆ. ಭಾರತದಲ್ಲಿ ಟಿಕ್ಟಾಕ್ ಸೇವೆ ಆರಂಭಿಸಿದಾಗಿನಿಂದ ಇಲ್ಲಿನ ಬಳಕೆದಾರರ ಡೇಟಾವನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟಿದ್ದೇವೆ. ಭಾರತೀಯ ಬಳಕೆದಾರರ ಡೇಟಾ ಪ್ರಥಮ ಸ್ಥಾನದಲ್ಲಿದ್ದು, ಅಮೆರಿಕ ಮತ್ತು ಸಿಂಗಾಪುರ ನಂತರದಲ್ಲಿವೆ. ಈಗ ಮಹತ್ವದ ಹೆಜ್ಜೆ ಇರಿಸುವ ಕಾಲ ಸನಿಹವಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
10- 18 ತಿಂಗಳ ಒಳಗೆ ಭಾರತದಲ್ಲಿ ಡೇಟಾ ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನು ಕಂಪನಿ ಇರಿಸಿಕೊಂಡಿದೆ. ಭಾರತದಲ್ಲಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ₹ 6,886 ಕೋಟಿಗೆ (1 ಬಿಲಿಯನ್ ಡಾಲರ್) ತೆಗೆದುಕೊಂಡು ಹೋಗುವ ಗುರಿ ಇರಿಸಿಕೊಂಡಿದೆ. ಹೀಗಾಗಿ, ಸ್ಥಳೀಯವಾಗಿ ಡೇಟಾ ಕೇಂದ್ರವನ್ನು ಸ್ಥಾಪಿಸುವ ಇಚ್ಚೆ ಹೊಂದಿದೆ.