ETV Bharat / business

ಮತ್ತೆ ರಸ್ತೆಗಿಳಿದ ಬೈಕ್​ ಟ್ಯಾಕ್ಸಿ ರ್ಯಾಪಿಡೊ: ಈ ನಿಯಮ ಪಾಲಿಸಿದರಷ್ಟೇ ರೈಡ್​ - ಬೈಕ್ ಟ್ಯಾಕ್ಸಿ ರ್ಯಾಪಿಡೊ

ಬೈಕ್​ ಟ್ಯಾಕ್ಸಿ ಸೇವೆಗಳು ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಕಾರ್ಯನಿರ್ವಹಿಸಲಿವೆ. ಲಾಕ್‌ಡೌನ್ ಮಾರ್ಗಸೂಚಿಗಳ ಪ್ರಕಾರ ಕೆಂಪು ವಲಯಗಳಿಗೆ ಸೇವೆ ವಿಸ್ತರಿಸಲಾಗುವುದಿಲ್ಲ. ಆ್ಯಪ್​ನಲ್ಲಿ ವಿವಿಧ ನಗರಗಳ ಸ್ಥಿತಿ ಮತ್ತು ಸುರಕ್ಷತಾ ಸೂಚನೆಗಳ ಅನುಸಾರ ನವೀಕರಿಸುವುದಾಗಿ ರ್ಯಾಪಿಡೊ ಪ್ರಕಟಣೆಯಲ್ಲಿ ತಿಳಿಸಿದೆ.

Bike taxi
ರ್ಯಾಪಿಡೊ
author img

By

Published : May 20, 2020, 4:03 PM IST

ನವದೆಹಲಿ: ಲಾಕ್‌ಡೌನ್ 4.0 ಹೊಸ ಮಾರ್ಗಸೂಚಿಗಳನ್ನು ಅನುಸರಿಸಿ 11 ರಾಜ್ಯಗಳ 35ಕ್ಕೂ ಅಧಿಕ ನಗರಗಳಲ್ಲಿ ಕಾರ್ಯಾಚರಣೆ ಪುನರಾರಂಭಿಸುತ್ತಿದ್ದೇವೆ ಎಂದು ಬೈಕ್ ಟ್ಯಾಕ್ಸಿ ಸೇವಾ ಪೂರೈಕೆದಾರ ರ್ಯಾಪಿಡೊ ಹೇಳಿದೆ.

ಸದ್ಯಕ್ಕೆ, ನಮ್ಮ ಬೈಕ್​ ಟ್ಯಾಕ್ಸಿ ಸೇವೆಗಳು ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಕಾರ್ಯನಿರ್ವಹಿಸಲಿವೆ. ಲಾಕ್‌ಡೌನ್ ಮಾರ್ಗಸೂಚಿಗಳ ಪ್ರಕಾರ ಕೆಂಪು ವಲಯಗಳಿಗೆ ಸೇವೆ ವಿಸ್ತರಿಸಲಾಗುವುದಿಲ್ಲ. ಆ್ಯಪ್​ನಲ್ಲಿ ವಿವಿಧ ನಗರಗಳ ಸ್ಥಿತಿ ಮತ್ತು ಸುರಕ್ಷತಾ ಸೂಚನೆಗಳ ಅನುಸಾರ ನವೀಕರಿಸುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಚಾಲಕರು ಬೈಕ್​ ಪಡೆಯುವ ಮೊದಲು ಆರೋಗ್ಯ ಸೇತು ಅಪ್ಲಿಕೇಷನ್ ಡೌನ್​ಲೋಡ್​ ಮಾಡಿಕೊಂಡಿರಬೇಕು. ಎಲ್ಲ ವೇಳೆಯಲ್ಲೂ ಮುಖಗವಸು ಧರಿಸಿರಬೇಕು. ಸ್ಯಾನಿಟೈಸರ್​​‌ಗಳು, ಹೇರ್ ನೆಟ್ ಕೊಂಡೊಯ್ಯಬೇಕು ಜೊತೆಗೆ ಹೆಲ್ಮೆಟ್ ಕಡ್ಡಾಯ ಎಂದು ಹೇಳಿದೆ.

ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಲು ಮತ್ತು ನಿಯಮಿತವಾಗಿ ತಮ್ಮ ಬೈಕ್​ಗಳನ್ನು ಸ್ವಚ್ಛಗೊಳಿಸುವಂತೆ ಸವಾರರನ್ನು ನಿರ್ದೇಶನ ನೀಡಲಾಗುತ್ತದೆ. ಬೋರ್ಡಿಂಗ್ ಗ್ರಾಹಕರು ಹತ್ತುವ ಮೊದಲು ಪಿಲಿಯನ್ ಆಸನ ಸ್ವಚ್ಛಗೊಳಿಸಿಕೊಳ್ಳಬೇಕು ಎಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.