ಸ್ಯಾನ್ಫ್ರಾನ್ಸಿಸ್ಕೋ: ಜೆಫ್ ಬೆಝೋಸ್, ಟಿಮ್ ಕುಕ್, ಮಾರ್ಕ್ ಜುಕರ್ ಬರ್ಗ್ ಮತ್ತು ಸುಂದರ್ ಪಿಚೈ ಅವರು ಇದೇ ಮೊದಲ ಬಾರಿಗೆ ಅಮೆರಿಕ ಸಂಸತ್ತಿನೆದುರು ಹಾಜರಾಗಿ ಅವರು ಕೇಳುವ ಕಠಿಣ ಪ್ರಶ್ನೆಗಳಿಗೆ ಉತ್ತರಿಸಲು ಸಜ್ಜಾಗಿದ್ದಾರೆ.
ಇ-ರಿಟೇಲ್, ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್, ಸೋಷಿಯಲ್ ಮೀಡಿಯಾ ಮತ್ತು ಸರ್ಚ್ ಎಂಜಿನ್ ಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿರುವ ಜಾಗತಿಕ ದಿಗ್ಗಜ ಕಂಪನಿಗಳನ್ನು ವಿಚಾರಣೆಗೆ ಒಳಪಡಿಸಲು ಯುಎಸ್ ಪ್ಯಾನಲ್ ಸಜ್ಜಾಗಿದೆ. ಇದಕ್ಕೂ ಮುಂಚಿತವಾಗಿ ತಾವು ಸೂಕ್ತ ಉತ್ತರಗಳನ್ನು ನೀಡಲು ತಯಾರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಆ್ಯಪಲ್ ಕಂಪನಿಯ ಉತ್ತರ:
ಆ್ಯಪಲ್ ಸಿಇಒ ಟಿಮ್ ಕುಕ್, ಸ್ಮಾರ್ಟ್‌ಫೋನ್ ಮಾರುಕಟ್ಟೆ ತೀವ್ರ ಸ್ಪರ್ಧಾತ್ಮಕವಾಗಿದೆ. ಸ್ಯಾಮ್‌ಸಂಗ್, ಎಲ್‌ಜಿ, ಹುವಾಯ್ ಮತ್ತು ಗೂಗಲ್‌ನಂತಹ ಕಂಪನಿಗಳು ವಿಭಿನ್ನ ವಿಧಾನಗಳ ಫೀಚರ್ ಪರಿಚಯಿಸುವಲ್ಲಿ ಅತ್ಯಂತ ಯಶಸ್ವಿ ವ್ಯವಹಾರ ಮಾಡುತ್ತಿವೆ ಎಂದು ಸ್ಪಷ್ಟಪಡಿಸಿದರು.
'ನಾವು ವ್ಯಾಪಾರ ಮಾಡುವ ಯಾವುದೇ ಮಾರುಕಟ್ಟೆಯಲ್ಲಿ ಆ್ಯಪಲ್ ಪ್ರಬಲ ಮಾರುಕಟ್ಟೆ ಪಾಲನ್ನು ಹೊಂದಿಲ್ಲ' ಎಂದರು. ಆ್ಯಪ್ ಸ್ಟೋರ್‌ನಲ್ಲಿ ಕಂಪನಿಯ 30 ಪ್ರತಿಶತದಷ್ಟು ಡಿಜಿಟಲ್ ವಹಿವಾಟಿನ ಶುಲ್ಕ ರಕ್ಷಣೆಗೆ ಸಿದ್ಧವಾಗಿದೆ ಎಂದು ಹೇಳಿದರು.
ಆ್ಯಪಲ್ ತನ್ನ ಆ್ಯಪ್ ಸ್ಟೋರ್ ಬಗ್ಗೆ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಇದು ಐಫೋನ್‌ನಲ್ಲಿ ಗ್ರಾಹಕ ಸಾಫ್ಟ್‌ವೇರ್ ಸ್ಥಾಪಿಸುವ ಏಕೈಕ ಮಾರ್ಗವಾಗಿದೆ.
ಫೇಸ್ಬುಕ್ನ ವಿವರಣೆ:
ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್, ಫೇಸ್‌ಬುಕ್ ನಮ್ಮ ಕುಟುಂಬದ ಅಪ್ಲಿಕೇಷನ್‌ಗಳ ಭಾಗವಾಗಿ ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್ಆ್ಯಪ್ ಅನ್ನು ಯಶಸ್ವಿಯಾಗಿ ತೆಗೆದುಕೊಂಡಿದೆ ಎಂದು ಬರೆದಿದ್ದಾರೆ.
ಫೇಸ್‌ಬುಕ್, 2012ರಲ್ಲಿ ಇನ್‌ಸ್ಟಾಗ್ರಾಮ್ ಅನ್ನು 1 ಬಿಲಿಯನ್ ಮತ್ತು 2014ರಲ್ಲಿ ವಾಟ್ಸ್ಆ್ಯಪ್ ಅನ್ನು 19 ಬಿಲಿಯನ್ ಡಾಲರ್ ಪಾವತಿಸಿ ಸ್ವಾಧೀನಪಡಿಸಿಕೊಂಡಿತು.
ನಾವು ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್ಆ್ಯಪ್ಗ್ಗಾಗಿ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಫೇಸ್‌ಬುಕ್‌ಗೆ ಹೊಸ ಆಲೋಚನೆಗಳನ್ನು ತರಲು ನಾವು ಆ ಕಂಪನಿಗಳಿಂದ ಕಲಿತಿದ್ದೇವೆ. ಜನರು ಮತ್ತು ಜಾಹೀರಾತುದಾರರಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ಉತ್ತಮ ಸೇವೆಗಳನ್ನು ನೀಡುವುದು ಫೇಸ್‌ಬುಕ್ ಸ್ವಾಧೀನ ತಂತ್ರದ ಪ್ರಮುಖ ಗುರಿಯಾಗಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಅಮೆಜಾನ್ ಸ್ಪಷನೆ:
ಅಮೆಜಾನ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಅಮೆಜಾನ್ ಸಿಇಒ ಜೆಫ್ ಬೆಝೋಸ್ ಹೇಳಿದ್ದಾರೆ.
ಅಮೆಜಾನ್ 25 ಟ್ರಿಲಿಯನ್ ಜಾಗತಿಕ ಚಿಲ್ಲರೆ ಮಾರುಕಟ್ಟೆ ಪೈಕಿ ಶೇ 1ಕ್ಕಿಂತ ಮತ್ತು ಅಮೆರಿಕದಲ್ಲಿ ಶೇ 4ಕ್ಕಿಂತ ಕಡಿಮೆ ವ್ಯಾಪಾರ ಪಾಲು ಹೊಂದಿದೆ. ಗೆಲ್ಲುವ ಅರ್ಹತೆ ಇರುವವರು ಜಯಿಸಬೇಕಾದ ಎಲ್ಲ ಉದ್ಯಮಗಳಂತಲ್ಲದೆ ಅನೇಕ ಚಿಲ್ಲರೆ ವ್ಯಾಪಾರಿಗಳಿಗೆ ಇದರಲ್ಲಿ ಅವಕಾಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಉದಾಹರಣೆಗೆ: ಅಮೆರಿಕದಲ್ಲಿ ಕೇವಲ 80ಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳು ವಾರ್ಷಿಕ 1 ಬಿಲಿಯನ್ ಡಾಲರ್ ಆದಾಯ ಗಳಿಸುತ್ತಾರೆ.
ಪ್ರತಿದಿನ ಅಮೆಜಾನ್ ಟಾರ್ಗೆಟ್, ಕಾಸ್ಟ್ಕೊ, ಕ್ರೊಗರ್ ಮತ್ತು ವಾಲ್ಮಾರ್ಟ್ ನಂತಹ ದೊಡ್ಡ ಉದ್ಯಮಿಗಳ ವಿರುದ್ಧ ಸ್ಪರ್ಧಿಸುತ್ತಿದೆ. ಅಮೆಜಾನ್ ಗಾತ್ರಕ್ಕಿಂತ ಅವು ಎರಡು ಪಟ್ಟು ಹೆಚ್ಚು ದೊಡ್ಡ ಕಂಪನಿಗಳಾಗಿವೆ ಎಂದರು.
ವಾಲ್ಮಾರ್ಟ್‌ನ ಆನ್‌ಲೈನ್ ಮಾರಾಟವು ಮೊದಲ ತ್ರೈಮಾಸಿಕದಲ್ಲಿ ಶೇ 74ರಷ್ಟು ಏರಿಕೆಯಾಗಿದೆ. ಇತರ ಅಂಗಡಿಗಳ ಸೇವೆಗಳಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಆಗುತ್ತಿದ್ದಾರೆ. ಅಮೆಜಾನ್ ಇತರ ದೊಡ್ಡ ಕಂಪನಿಗಳ ಪ್ರಮಾಣದಲ್ಲಿ ಹೊಂದಿಕೆಯಾಗುವುದಿಲ್ಲ ಎಂದರು.
ಗೂಗಲ್ ಸಮರ್ಥನೆ:
ಆಲ್ಪಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರು, ಕಂಪನಿಯ ಸರ್ಚ್‌ನಂತಹ ಸೇವೆಗಳು ಗ್ರಾಹಕರಿಗೆ ಮತ್ತು ಸಣ್ಣ ಉದ್ಯಮಗಳಿಗೆ ಪ್ರಮುಖ ಪ್ರಯೋಜನಗಳನ್ನು ನೀಡುತ್ತಿದೆ ಎಂದು ಹೇಳಿದರು.
ಗೂಗಲ್‌ನ ಮುಂದುವರಿದ ಯಶಸ್ಸು ಖಚಿತವಿಲ್ಲ ಎಂಬುದು ನಮಗೆ ತಿಳಿದಿದೆ. ಗೂಗಲ್ ಹೆಚ್ಚು ಸ್ಪರ್ಧಾತ್ಮಕ ಮತ್ತು ಕ್ರಿಯಾತ್ಮಕ ಜಾಗತಿಕ ಮಾರುಕಟ್ಟೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಉತ್ಪನ್ನಗಳ ಬೆಲೆಗಳ ಮುಕ್ತತೆ ಅಥವಾ ಕುಸಿತವು ನಿರಂತರವಾಗಿ ಸುಧಾರಿಸುತ್ತಿವೆ. ಇಂದಿನ ಸ್ಪರ್ಧಾತ್ಮಕ ಜಾಗತಿಕ ಚಿತ್ರಣವೂ 5 ವರ್ಷಗಳ ಹಿಂದೆ ಹಿದಂತೆ ಕಾಣುತ್ತಿಲ್ಲ. 21 ವರ್ಷಗಳು ಹಿಂದೆ, ಗೂಗಲ್ ತನ್ನ ಮೊದಲ ಉತ್ಪನ್ನವಾದ ಗೂಗಲ್ ಹುಡುಕಾಟವನ್ನು ಪ್ರಾರಂಭಿಸಿದಾಗ ಬೇರೆಯದೇ ವಾತಾವರಣವಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಉಲ್ಲೇಖಿಸಿ, ನಾವು ಉದ್ದೇಶಪೂರ್ವಕವಾಗಿ ಇತರರ ಆವಿಷ್ಕಾರವನ್ನು ಬೆಂಬಲಿಸುವ ಪ್ಲ್ಯಾಟ್‌ಫಾರ್ಮ್‌ಗಳನ್ನು ಸಹ ನಿರ್ಮಿಸುತ್ತೇವೆ ಎಂದು ಹೇಳಿದರು.
ಏನಿದು ವಿಚಾರಣೆ?
ಜಾಹೀರಾತು ತಂತ್ರಜ್ಞಾನ, ಸರ್ಚ್ ಎಂಜಿನ್ ಮಾರುಕಟ್ಟೆಯಲ್ಲಿ ಗೂಗಲ್ ಹೊಂದಿರುವ ನಿಯಂತ್ರಣ. ಸಣ್ಣ-ಪುಟ್ಟ ಕಂಪನಿಗಳನ್ನು ಫೇಸ್ ಬುಕ್ ಸ್ವಾಧೀನಪಡಿಸಿಕೊಳ್ಳುತ್ತಿರುವುದು. ಆ್ಯಪ್ ಸ್ಟೋರ್ ಹೊಸ ಡೆವಲಪರ್‌ಗಳಿಗೆ ಮುಳುವಾಗುತ್ತಿರುವ ರೀತಿ. ಜಾಹೀರಾತು ತಂತ್ರಜ್ಞಾನ, ಸರ್ಚ್ ಎಂಜಿನ್ ಮಾರುಕಟ್ಟೆಯಲ್ಲಿ ಗೂಗಲ್ ಹೊಂದಿರುವ ನಿಯಂತ್ರಣ. ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವ ದ್ವೇಷ ಭಾಷಣಗಳ ಕುರಿತು ಅಮೆರಿಕದ ಸಂಸತ್ ಸದಸ್ಯರು ತಂತ್ರಜ್ಞಾನ ದಿಗ್ಗಜರಿಗೆ ಖಡಕ್ ಪ್ರಶ್ನೆಗಳನ್ನು ಕೇಳಲಿದ್ದಾರೆ. ಇದೊಂದು ರೀತಿಯಲ್ಲಿ ಅಮೆರಿಕದ ಸಂಸತ್ ಸದಸ್ಯರು ಮತ್ತು ತಂತ್ರಜ್ಞಾನ ದಿಗ್ಗಜ ಕಂಪನಿಗಳ 'ಮುಖಾಮುಖಿ' ಎಂದೇ ಬಣ್ಣಿಸಲಾಗುತ್ತಿದೆ.