ಮುಂಬೈ: ಜೆಟ್ ಏರ್ವೇಸ್ ಸಂಸ್ಥೆಯ 22 ಸಾವಿರ ಉದ್ಯೋಗಗಳ ವೃತ್ತಿ ಭದ್ರತೆಯ ದೃಷ್ಟಯಿಂದ ಸಂಸ್ಥೆಯನ್ನು ಕೇಂದ್ರ ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಬ್ಯಾಂಕ್ಗಳ ಒಕ್ಕೂಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಸರ್ಕಾರವು ನಿರ್ಬಂಧಿತ ವಿಮಾನಯಾನ ಸಂಸ್ಥೆಗಳಿಗೆ ಸಾಲ ನೀಡದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಹಾಗೂ ನೌಕರರ ಹಿತಕಾಯಲು ಮುಂದಾಗಬೇಕು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ ಪತ್ರ ಮುಖೇನ ಪ್ರಧಾನಿ ಅವರನ್ನು ಕೋರಿದ್ದಾರೆ.
ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಜೆಟ್‌ಗೆ ತುರ್ತಾಗಿ ₹ 400 ಕೋಟಿ ನೀಡುವ ಲೈಫ್ ಲೈನ್ ಪ್ರಸ್ತಾವವನ್ನು ಬ್ಯಾಂಕುಗಳು ತಿರಸ್ಕರಿಸಿವೆ. 25 ವರ್ಷಗಳ ಕಾಲ ಹಾರಾಟ ಸೇವೆ ಸಲ್ಲಿಸಿದ ಜೆಟ್ ಇಂದು ಸ್ಥಗಿತಗೊಂಡಿದ್ದು, ಬ್ಯಾಂಕ್ ನೌಕರ ಸಂಘಟನೆ ಉಳಿಸಿಕೊಳ್ಳಲು ಯತ್ನಿಸುತ್ತಿದೆ.
ವಿಮಾನಯಾನ ಸಂಸ್ಥೆಗಳಿಗೆ ಒತ್ತಾಯ ಪೂರ್ವಕವಾಗಿ ಬ್ಯಾಂಕ್ಗಳು ನೀಡುತ್ತಿರುವ ಸಾಲದ ಕ್ರಮವನ್ನು ಒಕ್ಕೂಟ ವಿರೋಧಿಸಿದೆ. 'ಸಾಲದಾತರೇ ಮಾಲೀಕರಾಗಿದ್ದರೂ ಸಂಸ್ಥೆ ಬ್ಯಾಂಕ್ ಸಾಲದಿಂದ ಹೊರಬರುವುದನ್ನೇ ಎದುರು ನೋಡುತ್ತಿದ್ದಾರೆ. ಜೆಟ್ ಏರ್ವೇಸ್ ಸಾಲ ಪ್ರಕರಣದ ಪಾಲುದಾರರನ್ನು ತನಿಖೆ ಒಳಪಡಿಸಬೇಕು' ಎಂಬ ಬೇಡಿಕೆಯನ್ನು ಒಕ್ಕೂಟ ಇರಿಸಿದೆ.
ಸಂಸ್ಥೆಯ ಮಾಜಿ ಮುಖ್ಯಸ್ಥ ನರೇಶ್ ಗೋಯಲ್ ಅವರು ಶೇ 51ರಷ್ಟು ಷೇರುಗಳ ಪಾಲುದಾರಿಕೆ ಹೊಂದಿದ್ದಾರೆ. ಕಂಪನಿ ಮುನ್ನಡೆಸಲು ಹಾಗೂ ಮಾರಾಟ ಮಾಡಲು ನರೇಶ್ ತಲೆನೋವಾಗಿ ಪರಿಣಮಿಸಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ.