ನವದೆಹಲಿ: ಬ್ಯಾಂಕ್ ಆಫ್ ಇಂಡಿಯಾ ಆರು ತಿಂಗಳವರೆಗಿನ ಎಂಸಿಎಲ್ಆರ್ ಬಡ್ಡಿ ದರವನ್ನು 10 ಎಂಬಿಪಿಎಸ್ ನಷ್ಟು ಕಡಿತ ಮಾಡಿದೆ.
ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಮೇಲಿನ ಬಡ್ಡಿ ದರ ಸಹ ತಗ್ಗಿಸಿದ್ದು, ವಾರ್ಷಿಕ ಬಡ್ಡಿದರ ಇನ್ನು ಮುಂದೆ ಶೇ 8ರಷ್ಟು ಇರಲಿದೆ. ವಾಹನಗಳ ಮೇಲಿನ ಬಡ್ಡಿ ದರ ಶೇ 8.5ರಷ್ಟು ಇರಲಿದೆ. ಪರಿಷ್ಕೃತ ಬಡ್ಡಿ ದರ ಫೆಬ್ರವರಿ 10ರಿಂದ ಅನ್ವಯ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಿನ್ನೆ (ಶುಕ್ರವಾರ) ದೇಶದ ಅತಿದೊಡ್ಡ ಬ್ಯಾಂಕ್ ಆದ ಎಸ್ಬಿಐ 5 ಬೇಸಿಸ್ ಪಾಯಿಂಟ್ಗಳಷ್ಟು ಎಂಸಿಎಲ್ಆರ್ ಇಳಿಸಿತ್ತು. ಇದು ಫೆಬ್ರವರಿ 10ರಿಂದ ಜಾರಿಗೆ ಬರಲಿದೆ.
ಆರ್ಬಿಐನ ವಿತ್ತೀಯ ನೀತಿ ಪರಾಮರ್ಶೆ ಸಭೆಯಲ್ಲಿ ರೆಪೊ ದರವನ್ನು ಯಥಾವತ್ತಾಗಿ ಈ ಹಿಂದಿನ ಶೇ 5.15 ದರದಲ್ಲಿ ಉಳಿಸಿಕೊಳ್ಳುವುದಾಗಿ ನಿರ್ಧರಿಸಿತ್ತು. ಈ ಬಳಿಕ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿ ದರವನ್ನು ಪರಿಷ್ಕೃತಗೊಳಿಸಿದೆ.