ETV Bharat / business

ಬ್ಯಾಂಕ್​ ಆಫ್ ಬರೋಡಾಕ್ಕೆ ಆಸರೆಯಾದ ಕನ್ನಡಿಗರ ವಿಜಯಾ ಬ್ಯಾಂಕ್​..! - undefined

ಸಾರ್ವಜನಿಕ ಸಾಲದಾತ ಬ್ಯಾಂಕ್ ಆಫ್ ಬರೋಡಾ, ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹ 991 ಕೋಟಿ ನಿವ್ವಳ ನಷ್ಟ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹ 3,102.3 ಕೋಟಿ ನಷ್ಟವಾಗಿತ್ತು ಎಂದು ಆರ್​ಬಿಐ ಫೆಬ್ರವರಿಯಲ್ಲಿ ತಿಳಿಸಿತ್ತು.

ಸಾಂದರ್ಭಿಕ ಚಿತ್ರ
author img

By

Published : May 22, 2019, 7:22 PM IST

ನವದೆಹಲಿ: ಎರಡನೇ ಹಂತದ ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆಯಲ್ಲಿ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್​ಗಳು ಬ್ಯಾಂಕ್ ಆಫ್​ ಬರೋಡಾ ಜತೆಗೆ ಸೇರ್ಪಡೆಯಾದ ಬಳಿಕ ಅದರ ನಷ್ಟದ ಪ್ರಮಾಣ ತಗ್ಗಿದೆ.

2019ರ ಏಪ್ರಿಲ್​ 1ರಂದು ಈ ಎರಡೂ ಬ್ಯಾಂಕ್​ಗಳು ಬ್ಯಾಂಕ್ ಆಫ್​ ಬರೋಡಾದೊಂದಿಗೆ ವಿಲೀನಗೊಂಡು, ಇದರಡಿ ವಹಿವಾಟಿನ ಕಾರ್ಯಾಚರಣೆ ಆರಂಭಿಸಿದ್ದವು. ಮಾರ್ಚ್​ ಅಂತ್ಯಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್ ಆಫ್ ಬರೋಡಾ ₹ 991 ಕೋಟಿ ನಷ್ಟ ಅನುಭವಿಸಿದೆ. ಕಳೆದ ವರ್ಷದಲ್ಲಿ ವಿಜಯಾ ಬ್ಯಾಂಕ್​ ಒಟ್ಟು ₹ 727 ಕೋಟಿ ಲಾಭ ಗಳಿಸಿತ್ತು.

ಸಾರ್ವಜನಿಕ ಸಾಲದಾತ ಬ್ಯಾಂಕ್ ಆಫ್ ಬರೋಡಾ, ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹ 991 ಕೋಟಿ ನಿವ್ವಳ ನಷ್ಟ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹ 3,102.3 ಕೋಟಿ ನಷ್ಟವಾಗಿತ್ತು ಎಂದು ಆರ್​ಬಿಐ ಫೆಬ್ರವರಿಯಲ್ಲಿ ತಿಳಿಸಿತ್ತು. ಬ್ಯಾಂಕ್ ಆಫ್ ಬರೋಡಾ ನಷ್ಟದಲ್ಲಿ ಸಾಗುತ್ತಿದ್ದರೂ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ನಷ್ಟದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಬ್ಯಾಂಕಿನ ಪ್ರಸ್ತುತ ಅನುತ್ಪಾದಕ ಆಸ್ತಿ (ಎನ್​ಪಿಎ- ನಾನ್ ಪರ್ಫಾಮಿಂಗ್ ಅಸೆಟ್) ಶೇ 9.61ರಷ್ಟಿಇದೆ. ಈ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 1.49ರಷ್ಟು ಕಡಿಮೆಯಾಗಿದ್ದು, ಇದು ಶೇ 11.01ರಷ್ಟಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 12.26ರಷ್ಟು ಎನ್​ಪಿಎ ಇತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.