ನವದೆಹಲಿ: ಕೋಲ್ಕತಾ ಮೂಲದ ಲೈಫ್‌ಸ್ಟೈಲ್ ಸ್ಟೋರ್ ಪ್ರವರ್ತಕರು 10.5 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ ಎ) ಅಡಿ ಪ್ರಕರಣ ದಾಖಲಿಸಿದೆ.
ಪಿಎಂಎಲ್‌ಎ ಅಡಿ ಮದನ್ ಚಂದ್ ಜೈನ್ ಮತ್ತು ಭಗವತಿ ಲೈಫ್‌ಸ್ಟೈಲ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಗೌರವ್ ಜೈನ್ ಅವರ ತಂದೆ-ಮಗ ಕೋಲ್ಕತ್ತಾದ ಬ್ಯಾಂಕ್ ಠೇವಣಿ, ಷೇರುಗಳು ಮತ್ತು 15 ಫ್ಲ್ಯಾಟ್‌ಗಳನ್ನು ಪ್ರಕರಣಡಿ ಜೋಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಬಿಐ ಚಾರ್ಜ್‌ಶೀಟ್‌ನ ಆಧಾರದ ಮೇಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿಯ ನಿರ್ದೇಶಕರು 2012ರಲ್ಲಿ ನಕಲಿ ಕರಾರು ಪತ್ರಗಳ ಆಧಾರದ ಮೇಲೆ ಕೋಲ್ಕತ್ತಾದ ಎಸ್‌ಬಿಐ ವಾಣಿಜ್ಯ ಶಾಖೆಯಿಂದ 35 ಕೋಟಿ ರೂ. ಸಾಲ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಪೂರ್ವ ಭಾರತದಲ್ಲಿ ಭಾಗವತಿ ಲೈಫ್‌ಸ್ಟೈಲ್ ಬ್ರಾಂಡ್ ಹೆಸರಿನಲ್ಲಿ 13 - 15 ಶೋ ರೂಂಗಳನ್ನು ತೆರೆದರು. ಸುಮಾರು ಎರಡು ವರ್ಷಗಳ ಕಾಲ ಶೋ ರೂಂಗಳನ್ನು ನಡೆಸಿದ ನಂತರ, ಹಣವನ್ನು ನಕಲಿ ಖಾತೆಗಳಿಗೆ ತಿರುಗಿಸಿ ಮತ್ತು ಅವುಗಳನ್ನು ನಗದು ರೂಪದಲ್ಲಿ ಹಿಂತೆಗೆದುಕೊಳ್ಳುವ ಮೂಲಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಇಡಿ ಆರೋಪಿಸಿದೆ.
ಮದನ್ ಚಂದ್ ಸುರಾನಾ, ಗೌರವ್ ಕುಮಾರ್ ಸುರಾನಾ, ವಿಶಾಲ್ ಕೊಠಾರಿ, ಶಿವೇಕ್ ಜೈನ್ ಮತ್ತು ಹೇಮಂತ್ ಕೊಚಾರ್ ಅವರಂತಹ ವಿವಿಧ ನಕಲಿ ಗುರುತುಗಳ ಮೂಲಕ ಕೋಲ್ಕತಾ ಮತ್ತು ಹೌರಾದಾದ್ಯಂತ ವಿವಿಧ ಬ್ಯಾಂಕ್ಗಳಲ್ಲಿ ವಂಚನೆ ಎಸಗಿದ್ದಾರೆ ಎಂದು ಹೇಳಿದೆ.
ಈ ಎಲ್ಲ ವಂಚನೆಗಳನ್ನು ಅವರ ಸ್ನೇಹಿತರು ಮತ್ತು ನೌಕರರ ಸಹಾಯದಿಂದ ಸಂಘಟಿತ ಮತ್ತು ಯೋಜಿತ ರೀತಿಯಲ್ಲಿ ನಡೆಸಲಾಗಿದೆ ಎಂದು ಅದು ಹೇಳಿದೆ.
ಗೌರವ್ ಜೈನ್ ಅವರ ತಂದೆಯೊಂದಿಗೆ ಅನೇಕ ನಕಲಿ ಗುರುತುಗಳನ್ನು ಹೊಂದಿದ್ದರು. 100ಕ್ಕೂ ಹೆಚ್ಚು ನಕಲಿ ಮತ್ತು ಕಾಲ್ಪನಿಕ ಬ್ಯಾಂಕ್ ಖಾತೆಗಳನ್ನು ವೈಯಕ್ತಿಕ ಹೆಸರಿನಲ್ಲಿ ಅಥವಾ ನಕಲಿ ಸಂಸ್ಥೆಗಳ ಹೆಸರಿನಲ್ಲಿ ತೆರೆಯಲು ಪಾನ್ ಕಾರ್ಡ್‌ಗಳು, ಚಾಲನಾ ಪರವಾನಗಿ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಪಡೆದಿದ್ದರು ಎಂಬುದು ಇಡಿ ತನಿಖೆಯಿಂದ ಬೆಳಕಿಗೆ ಬಂದಿದೆ.