ನವದೆಹಲಿ: ಭಾರತದ ಮೂರನೇ ಅತಿದೊಡ್ಡ ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್, 2020ರ ಡಿಸೆಂಬರ್ 15ರಂದು ಅಥವಾ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಕಾಯ್ದಿರಿಸಿದ ಎಲ್ಲಾ ನೂತನ ಚಿಲ್ಲರೆ ಅವಧಿಯ ಠೇವಣಿಗಳ ಅಕಾಲಿಕವಾಗಿ ಸ್ಥಗಿತಗೊಳಿಸುವ ಮೇಲಿನ ದಂಡ ಪಾವತಿ ತೆಗೆದುಹಾಕುವುದಾಗಿ ತಿಳಿಸಿದೆ.
ಗ್ರಾಹಕ ಸ್ನೇಹಿ ಈ ನಿರ್ಧಾರವು ಚಿಲ್ಲರೆ ಗ್ರಾಹಕರ ಹಠಾತ್ ದ್ರವ್ಯತೆಯ ಅಗತ್ಯತೆಯ ಬಗ್ಗೆ ಚಿಂತಿಸದೆ, ದೀರ್ಘಕಾಲೀನ ಉಳಿತಾಯಕ್ಕಾಗಿ ಪ್ರೋತ್ಸಾಹಿಸುವುದಾಗಿ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ವೈಶಿಷ್ಟ್ಯವು ಎಲ್ಲಾ ಹೊಸ ಸ್ಥಿರ ಠೇವಣಿ ಮತ್ತು ಮರು ಠೇವಣಿಗಳಿಗೆ ಅನ್ವಯಿಸುತ್ತದೆ. 2 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಕಾಯ್ದಿರಿಸಿದ ಹೊಸ ಠೇವಣಿಗಳಿಗೆ, 15 ತಿಂಗಳ ಬುಕಿಂಗ್ ನಂತರ ಸಂಪೂರ್ಣ ಠೇವಣಿ ಅಕಾಲಿಕವಾಗಿ ಹಿಂತೆಗೆದುಕೊಂಡರೆ ದಂಡ ವಿಧಿಸಲಾಗುವುದಿಲ್ಲ ಎಂದು ಚಿಲ್ಲರೆ ಹೊಣೆಗಾರಿಕೆ ಮತ್ತು ನೇರ ಬ್ಯಾಂಕಿಂಗ್ ಉತ್ಪನ್ನ ವಿಭಾಗದ ಮುಖ್ಯಸ್ಥ ಪ್ರವೀಣ್ ಭಟ್ ಹೇಳಿದರು.
ಇದನ್ನೂ ಓದಿರಿ: ಮೋದಿಯ ಆ ಒಂದು ಘೋಷಣೆಗೆ ಗೂಳಿ ಗುಟುರು: ಹಳೆ ದಾಖಲೆ ಕುಟ್ಟಿ ಪುಡಿಪುಡಿ ಮಾಡಿದ ಸೆನ್ಸೆಕ್ಸ್!
ನಾವು 15 ತಿಂಗಳ ನಂತರ ಮುಚ್ಚಿದ ಎಲ್ಲಾ ಅವಧಿಯ ಠೇವಣಿಗಳ ಮೇಲಿನ ದಂಡವನ್ನು ಮನ್ನಾ ಮಾಡಿದ್ದೇವೆ. ಈ ಹೊಸ ವೈಶಿಷ್ಟ್ಯವು ಅನುಕೂಲತೆಯನ್ನು ನೀಡುವ ಮೂಲಕ ಗ್ರಾಹಕ ಕೇಂದ್ರಿತ ಪ್ರಯೋಜನಗಳನ್ನು ಪರಿಚಯಿಸುವ ಉದ್ದೇಶ ಹೊಂದಿದೆ. ಇದರಿಂದ ನಮ್ಮ ಪುಸ್ತಕದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದರು.
ಟರ್ಮ್ ಠೇವಣಿಯ ಪ್ರಿನ್ಸಿಪಲ್ ಮೌಲ್ಯದ ಶೇ 25ರವರೆಗೆ ಮೊದಲ ವಾಪಸಾತಿಗೆ ಹೊಸ ವೈಶಿಷ್ಟ್ಯವು ಯಾವುದೇ ದಂಡ ಇರುವುದಿಲ್ಲ.