ETV Bharat / business

ಆರ್ಥಿಕ ಹಿಂಜರಿತದ ಕರಾಳ ಛಾಯೆ... 5 ದಿನ ಉತ್ಪಾದನೆ ಸ್ಥಗಿತಗೊಳಿಸಿದೆಯಾ ಅಶೋಕ್ ಲೇಲ್ಯಾಂಡ್‌?

ವಾಣಿಜ್ಯ ವಾಹನ ತಯಾರಕಾ ಚೆನ್ನೈ ಘಟಕದ ಕೆಲಸಗಾರರು ಐದು ದಿನಗಳ ರಜೆಯ ಸೂಚನೆಯು ಅಶೋಕ್ ಲೇಲ್ಯಾಂಡ್‌ನಿಂದ ಸ್ವೀಕರಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿನ ಜಡತೆ ಮತ್ತು ಸಂಕೋಚಿತ ಬೆಳವಣಿಗೆಯೇ ಈ ಕ್ರಮಕ್ಕೆ ಕಾರಣ ಎಂದಿವೆ.

ಸಾಂದರ್ಭಿಕ ಚಿತ್ರ
author img

By

Published : Sep 6, 2019, 10:52 AM IST

ಚೆನ್ನೈ: ಆರ್ಥಿಕ ಕುಸಿತದಿಂದ ಆಟೊಮೊಬೈಲ್​ ವಲಯದ ಲಗು ಮತ್ತು ಬೃಹತ್ ಗಾತ್ರದ ವಾಣಿಜ್ಯ ವಾಹನಗಳ ತಯಾರಿಕಾ ಕಂಪನಿಯಾದ ಅಶೋಕ್​ ಲೇಲ್ಯಾಂಡ್‌​, ಚೆನ್ನೈ ಘಟಕದಲ್ಲಿ 5 ದಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗುತ್ತಿದೆ.

ವಾಣಿಜ್ಯ ವಾಹನ ತಯಾರಕಾ ಚೆನ್ನೈ ಘಟಕದ ಕಾರ್ಮಿಕರಿಗೆ ಐದು ದಿನ ರಜೆ ಘೋಷಿಸಲಾಗಿದೆ ಎಂದು ಮೂಲಗಳು ಹೇಳುತ್ತಿವೆ. ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿನ ಜಡತೆ ಮತ್ತು ಸಂಕೋಚಿತ ಬೆಳವಣಿಗೆಯೇ ಈ ಕ್ರಮಕ್ಕೆ ಕಾರಣ ಎಂದಿವೆ.

ಆಶೋಕ್​ ಲೇಲ್ಯಾಂಡ್​ ಆಡಳಿತ ಮಂಡಳಿಯ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, 'ಉತ್ಪಾದನೆ ಸ್ಥಗಿತಗೊಳಿಸುವಂತಹ ಯಾವುದೇ ಅಧಿಸೂಚನೆ ಕಂಪನಿ ವತಿಯಿಂದ ಹೊರಬಿದಿಲ್ಲ' ಎಂದಿದ್ದಾರೆ. ಒಂದು ವೇಳೆ ಉತ್ಪಾದನೆ ಕಡಿತ ಜಾರಿಯಾದರೆ ಘಟಕದಲ್ಲಿ ಕಾರ್ಯನಿರ್ವಹಿಸುವ 3,000 ಗುತ್ತಿಗೆ ಕಾರ್ಮಿಕರು ಸೇರಿ ಒಟ್ಟು 5,000 ನೌಕರರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.