ನವದೆಹಲಿ: ದೇಶದ 27 ಕೋಟಿ ಜನರಿಗೆ ಕೋವಿಡ್-19 ಲಸಿಕೆ ನೀಡುವ ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನದ 2ನೇ ಹಂತ ಮಾರ್ಚ್ 1ರಿಂದ ಶುರುವಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಮೊದಲ ಡೋಸ್ ಪಡೆದು ಜನತೆಯಲ್ಲಿ ಲಸಿಕೆಯ ಬಗ್ಗೆ ವಿಶ್ವಾಸ ಮೂಡಿಸುತ್ತಿದ್ದಾರೆ.
-
We made this offer quite a while ago. Just awaiting permission. Should come soon. @drharshvardhan @PrakashJavdekar https://t.co/2JmKjA7ll0
— anand mahindra (@anandmahindra) March 3, 2021 " class="align-text-top noRightClick twitterSection" data="
">We made this offer quite a while ago. Just awaiting permission. Should come soon. @drharshvardhan @PrakashJavdekar https://t.co/2JmKjA7ll0
— anand mahindra (@anandmahindra) March 3, 2021We made this offer quite a while ago. Just awaiting permission. Should come soon. @drharshvardhan @PrakashJavdekar https://t.co/2JmKjA7ll0
— anand mahindra (@anandmahindra) March 3, 2021
ಭಾರತದ ಪ್ರಮುಖ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ತಗುಲುವ ಕೋವಿಡ್ ಲಸಿಕೆಯ ವೆಚ್ಚವನ್ನು ಸರ್ಕಾರ ಭರಿಸಿದಲ್ಲಿ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ಟ್ವಿಟರ್ನಲ್ಲಿ ಸುಹೇಲ್ ಸೇಥ್ ಎಂಬುವವರು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ, ನಾವು ಕೆಲವು ದಿನಗಳ ಹಿಂದೆಯೇ ಈ ಪ್ರಸ್ತಾಪ ಮಾಡಿದ್ದೇವೆ. ಅನುಮತಿಗಾಗಿ ಎದುರು ನೋಡುತ್ತಿದ್ದೇವೆ. ಅದು ಶೀಘ್ರದಲ್ಲೇ ಬರಬೇಕಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೆಸರು ನಮೂದಿಸಿದ್ದಾರೆ.