ಡೆಹ್ರಾಡೂನ್: ಕೋವಿಡ್ -19 ಲಾಕ್‌ಡೌನ್ ಮಧ್ಯೆ ಅನುಭವಿಸಿದ ಆರ್ಥಿಕ ನಷ್ಟವನ್ನು ಎದುರಿಸಲು ಅಂಬಾನಿ ಕುಟುಂಬವು ಉತ್ತರಾಖಂಡ್ನ ಚಾರ್ಧಾಮ್ ದೇವಸ್ಥಾನಂ ಮಂಡಳಿಗೆ ಐದು ಕೋಟಿ ರೂ. ದೇಣಿಗೆ ನೀಡಿದೆ.
ಮಂಡಳಿಯ ಹೆಚ್ಚುವರಿ ಸಿಇಒ ಬಿ ಡಿ ಸಿಂಗ್ ಅವರ ಕೋರಿಕೆಯ ಮೇರೆಗೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಈ ದೇಣಿಗೆ ನೀಡಿದ್ದಾರೆ ಎಂದು ಮಂಡಳಿಯ ಮಾಧ್ಯಮ ಘಟಕ ತಿಳಿಸಿದೆ.
ತನ್ನ ಉದ್ಯೋಗಿಗಳಿಗೆ ಸಂಬಳ ನೀಡಲು ಮಂಡಳಿಗೆ ಸಹಾಯ ಹಸ್ತ ನೀಡುವಂತೆ ಸಿಂಗ್ ಅವರು ಅಂಬಾನಿ ಕುಟುಂಬಸ್ಥರಿಗೆ ಮನವಿ ಮಾಡಿದ್ದರು. ಅವರ ಮನವಿಗೆ ತಕ್ಷಣವೇ ಸ್ಪಂದಿಸಿ ದೇಣಿಗೆ ಕೊಟ್ಟಿದ್ದಾರೆ.
ಚಾರ್ಧಾಮ್ ಎಂದರೆ ನಾಲ್ಕು ಹಿಂದೂ ಧಾರ್ಮಿಕ ಸ್ಥಳಗಳಾಗಿವೆ. ಬದರೀನಾಥ, ಕೇದಾರನಾಥ, ಯಮನೋತ್ರಿ, ಗಂಗೋತ್ರಿ ದೇವಸ್ಥಾನಗಳಿಗೆ ಚಾರ್ಧಾಮ್ ಎಂದು ವ್ಯವಹಾರಿಕವಾಗಿ ಕರೆಯಲಾಗುತ್ತದೆ.