ETV Bharat / business

ವಾಣಿಜ್ಯ ದೈತ್ಯ ಅಮೆಜಾನ್ ದಾಖಲೆ; ನವೀಕರಿಸಲ್ಪಡುವ ಇಂಧನ ಯೋಜನೆ ಖರೀದಿ

3.4 ಗಿಗಾ ವ್ಯಾಟ್ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯ ಹೊಂದಿರುವ 26 ಪವನ ಶಕ್ತಿ ಹಾಗೂ ಸೋಲಾರ್‌ ವಿದ್ಯುತ್ ಯೋಜನೆಗಳನ್ನು ಅಮೆಜಾನ್‌ ಖರೀದಿಸಿದೆ. ಆ ಮೂಲಕ ನವೀಕರಿಸಲ್ಪಟ್ಟ ಇಂಧನವನ್ನು ಖರೀದಿಸುತ್ತಿರುವ ಅತಿ ದೊಡ್ಡ ವಾಣಿಜ್ಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಅಮೆಜಾನ್‌ ಪಾತ್ರವಾಗಿದೆ ಎಂದು ಸಿಇಒ ಜೆಫ್‌ ಬೆಜೊಸ್‌ ತಿಳಿಸಿದ್ದಾರೆ.

amazon-now-biggest-corporate-buyer-of-renewable-energy-bezos
ವಿಶ್ವದ ದೈತ್ಯ ವಾಣಿಜ್ಯ ಸಂಸ್ಥೆ ಹೊಸ ದಾಖಲೆ; ನವೀಕರಿಸಲ್ಪಡುವ ಇಂಧನ ಯೋಜನೆ ಖರೀದಿಸಿದ ಅಮೆಜಾನ್
author img

By

Published : Dec 11, 2020, 5:21 PM IST

ಸ್ಯಾನ್‌ ಫ್ರಾನ್ಸಿಸ್ಕೋ: ವಿಶ್ವದ ಅತಿ ದೊಡ್ಡ ಇ - ಕಾರ್ಮಸ್‌ ಸಂಸ್ಥೆ ಅಮೆಜಾನ್‌ ಮತ್ತೊಂದು ಹೊಸ ದಾಖಲೆ ಬರೆದಿದೆ. ನವೀಕರಿಸಲ್ಪಡುವ ಇಂಧನ ಖರೀದಿಸುವ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಮೆಜಾನ್‌ ಸಂಸ್ಥಾಪಕ ಹಾಗೂ ಸಿಇಒ ಜೆಫ್‌ ಬೆಜೊಸ್, 3.4 ಗಿಗಾ ವ್ಯಾಟ್ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯ ಹೊಂದಿರುವ 26 ಪವನ ಶಕ್ತಿ ಹಾಗೂ ಸೋಲಾರ್‌ ವಿದ್ಯುತ್ ಯೋಜನೆಗಳನ್ನು ಅಮೆಜಾನ್‌ ಖರೀದಿಸಿದೆ. ಇದು ಅತಿ ದೊಡ್ಡ ವಾಣಿಜ್ಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದಿದ್ದಾರೆ.

ಆಸ್ಟ್ರೇಲಿಯಾ, ಫ್ರಾನ್ಸ್‌, ಜರ್ಮನಿ, ಇಟಲಿ, ದಕ್ಷಿಣ ಆಫ್ರಿಕಾ, ಸ್ವಿಡನ್‌, ಬ್ರಿಟನ್‌ ನಲ್ಲಿ 26 ಯೋಜನೆಗಳು ಹಾಗೂ ಅಮೆರಿಕದಲ್ಲಿ 26 ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಅಮೆರಿಕದಲ್ಲಿ 127 ನವೀಕರಿಸಲ್ಪಡುವ ಇಂಧನ ಯೋಜನೆಗಳನ್ನು ಅಮೆಜಾನ್‌ ಕೈಗೆತ್ತಿಕೊಂಡಿದೆ. ಇದರಿಂದ 1.7 ಮಿಲಿಯನ್‌ ಅಮೆರಿಕನ್ನರ ಮನೆಗಳಿಗೆ 1 ವರ್ಷ ವಿದ್ಯುತ್‌ ಪೂರೈಕೆಯಾಗಲಿದೆ. 6.5 ಗಿಗಾವ್ಯಾಟ್ಸ್‌ ನಷ್ಟು ವಿದ್ಯುತ್‌ ಉತ್ಪಾದನೆಗಾಗಿ ಹೂಡಿಕೆ ಮಾಡಲಾಗುತ್ತಿದೆ.

2025ರ ವೇಳೆಗೆ ನವೀಕರಿಸಲ್ಪ ವಿದ್ಯುತ್‌ನಿಂದ ವ್ಯವಹಾರವನ್ನು ಶೇ100 ರಷ್ಟು ನಡೆಸುವ ಗುರಿ ಹೊಂದಲಾಗಿದ್ದು, ಅದಕ್ಕೆ ಬೇಕಾಗಿರುವ ಎಲ್ಲ ಮಾರ್ಗಗಳನ್ನು ಸುಗಮಗೊಳಿಸುತ್ತಿದ್ದೇವೆ. 5 ವರ್ಷಗಳ ಹಾದಿಯಲ್ಲಿ 2030 ನಮ್ಮ ಮುಖ್ಯ ಗುರಿಯಾಗಿದೆ. ಇದು ನಾವು ಪ್ರತಿಜ್ಞೆ ಮಾಡಿರುವ ಹವಾಮಾನ ವೈಪರೀತ್ಯ ತಡೆಯಲು ಸಹಕಾರಿಯಾಗಲಿದೆ ಎಂದು ಜೆಫ್‌ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಅಮೆಜಾನ್‌ ಮತ್ತು ಗ್ಲೋಬಲ್‌ ಆಪ್ಟಿಮೈಸೆಮ್‌ ಸಹ ಸಂಸ್ಥಾಪಕ ಹವಾಮಾನ ವೈಪರೀತ್ಯ ತಡೆಯುವ ಪ್ರತಿಜ್ಞೆ ಮಾಡಿದ್ದರು. ಪ್ಯಾರಿಸ್‌ ಒಪ್ಪಂದದಂತೆ 10 ವರ್ಷಗಳಿಗೂ ಮೊದಲೇ ಹವಾಮಾನ ವೈಪರೀತ್ಯ ತಡೆಯುವ ಗುರಿ ಹಾಗೂ 2040ರ ವೇಳೆಗೆ ಸಂಪೂರ್ಣವಾಗಿ ಕಾರ್ಬನ್‌ ಮುಕ್ತ ಮಾಡುವ ಪಣಕ್ಕೆ ಕೈ ಜೋಡಿಸಿದ್ದಾರೆ. ಯೂನಿಲಿವರ್‌, ವೆರಿಜೋನ್‌, ಸೈಮನ್ಸ್, ಮೈಕ್ರೋಸಾಫ್ಟ್‌ ಹಾಗೂ ಬೆಸ್ಟ್‌ ಬೈ ಸೇರಿದಂತೆ 31 ಸಂಸ್ಥೆಗಳು ಸಹಿ ಹಾಕಿವೆ.

ಅಮೆಜಾನ್‌ ಹೂಡಿಕೆ ಮಾಡಿರುವ 35 ಯೋಜನೆಗಳು 2020ರ ಅಂತ್ಯದ ವೇಳೆಗೆ ಪೂರ್ಣವಾಗಲಿವೆ. ಇವು 4 ಗಿಗಾ ವ್ಯಾಟ್‌ಗೂ ಅಧಿಕ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯ ಹೊಂದಿವೆ. ಕಾರ್ಪೋರೇಟ್‌ ಸಂಸ್ಥೆಗಳು, ಅಮೆಜಾನ್‌ ವೆಬ್‌ ಸರ್ವೀಸಸ್‌ ಹಾಗೂ ಡೇಟಾ ಸೆಂಟರ್‌ಗಳಿಗೆ ‌ಅಮೆಜಾನ್‌ ವಿದ್ಯುತ್‌ ಪೂರೈಕೆ ಮಾಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.