ನವದೆಹಲಿ: ಅಮೆಜಾನ್ ಇಂಡಿಯಾ ‘ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ’ (ಐಆರ್‌ಸಿಟಿಸಿ) ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.
ಅಮೆಜಾನ್ ಗ್ರಾಹಕರು ತಮ್ಮ ಮೊದಲ ರೈಲ್ವೆ ಟಿಕೆಟ್ ಬುಕ್ಕಿಂಗ್‌ನಲ್ಲಿ ಶೇ 100ರಿಂದ ಶೇ 10ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಪಡೆಯಬಹುದು. ಪ್ರೈಮ್ ಸದಸ್ಯರು ಈ ಬುಕಿಂಗ್‌ಗೆ ಶೇ 12ರಿಂದ ಶೇ 120ರ ವರೆಗೆ ಕ್ಯಾಶ್‌ಬ್ಯಾಕ್ ಕೊಡುಗೆ ಪಡೆಯಬಹುದು. ಈ ಪ್ರಸ್ತಾಪವು ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ.
ಅಮೆಜಾನ್.ಇನ್, ಸೇವೆ ಮತ್ತು ಪಾವತಿ ವಹಿವಾಟು ಶುಲ್ಕಗಳನ್ನು ಸಹ ಮನ್ನಾ ಮಾಡಿದೆ. ಹೊಸ ಸೇವೆ ಪ್ರಾರಂಭಿಸುವುದರೊಂದಿಗೆ ಅಮೆಜಾನ್ ಇಂಡಿಯಾ ಗ್ರಾಹಕರು ಇನ್ನುಮುಂದೆ ಅಮೆಜಾನ್ ಪೇ ಬಳಸಿ ವಿಮಾನ, ಬಸ್ ಹಾಗೂ ರೈಲು ಸೀಟುಗಳನ್ನು ಕಾಯ್ದಿರಿಸಬಹುದು.
ಅಮೆಜಾನ್.ಇನ್ ರೈಲ್ವೆಗೆ ಸಂಬಂಧಿಸಿದ ಇತರ ಸೇವೆಗಳನ್ನು ಸಹ ಒದಗಿಸುತ್ತದೆ. ಅಮೆಜಾನ್ ಅಪ್ಲಿಕೇಷನ್‌ನಲ್ಲಿ ಗ್ರಾಹಕರು ರೈಲುಗಳ ಎಲ್ಲ ವರ್ಗದ ಸೀಟ್ ಮತ್ತು ಕೋಟಾ ಲಭ್ಯತೆ ಪರಿಶೀಲಿಸಬಹುದು. ಕಾಯ್ದಿರಿಸಿದ ಟಿಕೆಟ್‌ನ ಪಿಎನ್‌ಆರ್ ಸ್ಥಿತಿ ಪರಿಶೀಲಿಸಬಹುದಾಗಿದೆ.
ಇತರ ಮಾಧ್ಯಮಗಳ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳ ಪಿಎನ್‌ಆರ್ ಸ್ಥಿತಿಯನ್ನು ಅಮೆಜಾನ್‌ನಲ್ಲಿ ಪರಿಶೀಲಿಸಲಾಗುವುದಿಲ್ಲ. ಬಳಕೆದಾರರು ಅಮೆಜಾನ್ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ರದ್ದುಗೊಳಿಸಬಹುದು. ರದ್ದತಿ ಅಥವಾ ಬುಕ್ಕಿಂಗ್ ವೈಫಲ್ಯಗಳ ಸಂದರ್ಭದಲ್ಲಿ ತ್ವರಿತ ಮರುಪಾವತಿ ಪಡೆಯಲು ಅಮೆಜಾನ್ ಪೇ ಬ್ಯಾಲೆನ್ಸ್ ಬಳಸಸಬಹುದು.
ಹೊಸ ವೈಶಿಷ್ಟ್ಯವು ಆ್ಯಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಅಮೆಜಾನ್ ಅಪ್ಲಿಕೇಷನ್‌ಗೆ ಮುಕ್ತವಾಗಿದೆ. ಅಮೆಜಾನ್ ಪೇ ಟ್ಯಾಬ್ ಅಡಿಯಲ್ಲಿ ರೈಲು / ಪ್ರಯಾಣ ವಿಭಾಗವನ್ನು ಕ್ಲಿಕ್ ಮಾಡುವುದರ ಮೂಲಕ ಗ್ರಾಹಕರು ತಮ್ಮ ಟಿಕೆಟ್ ಕಾಯ್ದಿರಿಸಬಹುದು. ಮಾರ್ಗ / ಪ್ರಯಾಣದ ದಿನಾಂಕ ಆಯ್ಕೆ ಮಾಡಬಹುದು. ಲಭ್ಯವಿರುವ ಎಲ್ಲಾ ರೈಲುಗಳ ಪಟ್ಟಿ ಪಡೆಯಬಹುದು. ಗ್ರಾಹಕರು ಯಾವುದೇ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಬಹುದು. ಫೋನ್ ಮತ್ತು ಚಾಟ್ ಮೂಲಕ ಅಮೆಜಾನ್ ಸಹಾಯವಾಣಿ 24x7 ನೆರವು ಲಭ್ಯವಿದೆ.