ನವದೆಹಲಿ: ವಿಶ್ವದ ಎರಡು ದಿಗ್ಗಜ ಕಂಪನಿಗಳು ಮಾರುಕಟ್ಟೆಯ ಪ್ರಾಬಲ್ಯಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿವೆ. ಈಗ ಹೊರ ಹೋಗುವ ಕರೆಗಳ ರಿಂಗಣ ಅವಧಿಯಲ್ಲೂ ಸ್ಪರ್ಧೆಗೆ ಇಳಿಯಲಿವೆ.
ರಿಲಯನ್ಸ್ ಜಿಯೋ ತನ್ನ ಗ್ರಾಹಕರ ಕಾಲಿಂಗ್ ರಿಂಗ್ ಅವಧಿಯನ್ನು ಕಡಿತಗೊಳಿಸುವ ಮುನ್ನ ಭಾರ್ತಿ ಏರ್‌ಟೆಲ್ ಕರೆಗಳ ರಿಂಗಿಂಗ್ ಸಮಯವನ್ನು 45 ಸೆಕೆಂಡ್ಗಳಿಂದ 25 ಸೆಕೆಂಡ್‌ಗಳಿಗೆ ಕಡಿತಗೊಳಿಸಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್), ಅತಿದೊಡ್ಡ ಟೆಲಿಕಾಂ ಆಪರೇಟರ್ ಆದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ಗೆ ಮೂಲ ಅವಧಿಯ 45 ಸೆಕೆಂಡ್ ಬದಲಾವಣೆಯ ಬಗ್ಗೆ ನಿರ್ದೇಶನ ನೀಡಿದೆ ಎಂಬುದರ ಬಗ್ಗೆ ನಮಗೆ ತಿಳಿದಿಲ್ಲ. ಬಹುತೇಕ ಆಪರೇಟ್ರಗಳು ಕಾಲ್ ಟೈಮರ್ ಅನ್ನು 30 ಸೆಕೆಂಡ್‌ಗಳಿಗೆ ಹೊಂದಿಸಬೇಕೆಂಬ ಪ್ರಸ್ತಾಪ ಇಟ್ಟಿವೆ ಎಂದು ಭಾರ್ತಿ ಏರ್‌ಟೆಲ್ ಹೇಳಿದೆ.
ಗ್ರಾಹಕರ ಅನುಕೂಲಕ್ಕಾಗಿ ನಾವು ನಮ್ಮ ನೆಟ್‌ವರ್ಕ್‌ನಲ್ಲಿ ರಿಂಗಿಂಗ್ ಟೈಮರ್ ಅನ್ನು 25 ಸೆಕೆಂಡ್‌ಗಳಿಗೆ ಇಳಿಸಿದ್ದೇವೆ ಎಂದು ಏರ್‌ಟೆಲ್ ಸೆ. 28ರಂದು ಟ್ರಾಯ್‌ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.