ETV Bharat / business

Jio ಫೈಬರ್​ಗೆ Airtel ವಿ-ಫೈಬರ್​ ಟಕ್ಕರ್​​: 1,000 ಜಿಬಿ ಡೇಟಾ ಪ್ಲಾನ್​ ಪಡೆಯುವುದೇಗೆ? - ನೆಟ್‌ಫ್ಲಿಕ್ಸ್

ಹೆಚ್ಚುವರಿ ಡೇಟಾ ಬೇಸಿಕ್​, ಮನರಂಜನೆ ಮತ್ತು ಪ್ರೀಮಿಯಂ ಯೋಜನೆಗಳಲ್ಲಿ ಆರು ತಿಂಗಳ ಮಾನ್ಯತೆ ಹೊಂದಿರಲಿದೆ. ವಾಯ್ದೆ ಮುಗಿದ ಬಳಿಕ ಬಳಕೆಯಾಗದ ಡೇಟಾ ಕಡಿತವಾಗಲಿದೆ. ಏರ್‌ಟೆಲ್ ವಿ-ಫೈಬರ್ ಯೋಜನೆಗಳಿಗೆ ಮಾತ್ರವೇ ಈ ಪ್ಲಾನ್ ಅನ್ವಯವಾಗಲಿದೆ.

ಸಾಂದರ್ಭಿಕ ಚಿತ್ರ
author img

By

Published : Aug 23, 2019, 9:40 PM IST

ನವದೆಹಲಿ: ಏರ್‌ಟೆಲ್ ತನ್ನ ವಿ- ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯ ಮೂಲಕ ಮೂರು ಬ್ರಾಡ್‌ಬ್ಯಾಂಡ್ ಪ್ಲಾನ್​ಗಳಡಿ 1,000 ಜಿಬಿವರೆಗೆ ಹೆಚ್ಚುವರಿ ಡೇಟಾ ನೀಡುವುದಾಗಿ ಘೋಷಿಸಿದೆ.

ಹೆಚ್ಚುವರಿ ಡೇಟಾ ಬೇಸಿಕ್​, ಮನರಂಜನೆ ಮತ್ತು ಪ್ರೀಮಿಯಂ ಯೋಜನೆಗಳಲ್ಲಿ ಆರು ತಿಂಗಳ ಮಾನ್ಯತೆ ಹೊಂದಿರಲಿದೆ. ವಾಯ್ದೆ ಮುಗಿದ ಬಳಿಕ ಬಳಕೆಯಾಗದ ಡೇಟಾ ಕಡಿತವಾಗಲಿದೆ. ಏರ್‌ಟೆಲ್ ವಿ-ಫೈಬರ್ ಯೋಜನೆಗಳಿಗೆ ಮಾತ್ರವೇ ಈ ಪ್ಲಾನ್ ಅನ್ವಯವಾಗಲಿದೆ.

ಏರ್‌ಟೆಲ್ ಬೇಸಿಕ್ ಯೋಜನೆ ₹ 799 ಲಭ್ಯವಿದ್ದು, 100ಜಿಬಿ ನಿಗದಿತ ಡೇಟಾ ಜತೆಗೆ ಹೆಚ್ಚುವರಿಯಾಗಿ 200ಜಿಬಿ ಸಿಗಲಿದೆ. ಇದು ಆರು ತಿಂಗಳ ಮಾನ್ಯತೆ ಮಾತ್ರ ಪಡೆದಿರುತ್ತಿದೆ. 40ಎಂಬಿಪಿಎಸ್​ ವೇಗ, ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು, ಏರ್‌ಟೆಲ್ ಟಿವಿ ಪ್ರೀಮಿಯಂ ಚಂದಾದಾರಿಕೆ ಸಹ ಒಳಗೊಂಡಿದೆ.

ಏರ್‌ಟೆಲ್ ಎಂಟರ್‌ಟೈನ್‌ಮೆಂಟ್ ಯೋಜನೆ ₹ 1,099 ಲಭ್ಯವಿದ್ದು, ಆರು ತಿಂಗಳವರೆಗೆ ಮಾನ್ಯತೆ ಪಡೆದ 500 ಜಿಬಿ ಹೆಚ್ಚುವರಿ ಡೇಟಾ ಸಿಗಲಿದೆ. 300 ಜಿಬಿಯವರೆಗೆ 100ಎಂಬಿಪಿಎಸ್​ ವೇಗದ ಡೇಟಾ ಚಾಲ್ತಿಯಲ್ಲಿರುತ್ತದೆ. ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು, ಒಂದು ವರ್ಷಕ್ಕೆ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆ, ಮೂರು ತಿಂಗಳವರೆಗೆ ನೆಟ್‌ಫ್ಲಿಕ್ಸ್, ಝೀ5 ಪ್ರೀಮಿಯಂ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಂ ಚಂದಾದಾರಿಕೆ ಪಡೆಯಬಹುದು.

₹ 1,599ಯ ಏರ್‌ಟೆಲ್ ಪ್ರೀಮಿಯಂ ಯೋಜನೆಯು ಆರು ತಿಂಗಳವರೆಗೆ ಮಾನ್ಯವಾಗಿದ್ದು, 1000ಜಿಬಿ ಹೆಚ್ಚುವರಿ ಡೇಟಾ ಲಭ್ಯವಾಗಲಿದೆ. 600ಜಿಬಿ ಡೇಟಾವರೆಗೆ 300ಎಂಬಿಪಿಎಸ್​ ವೇಗ ಸಹ ದೊರೆಯುತ್ತದೆ. ಎಂಟರ್​ಟೈನ್​ಮೆಂಟ್​ ಪ್ಲಾನ್​ಗಳು ಇದರಲ್ಲೂ ಲಭ್ಯವಾಗಲಿವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.