ETV Bharat / business

ಗ್ರಾಹಕರ ಜೇಬಿಗೆ ಹೊರೆ: airtel ಪ್ರಿಪೇಯ್ಡ್​ ಕರೆ, ಡೇಟಾ ಶುಲ್ಕ ಹೆಚ್ಚಳ..ಹೊಸ ದರ ಹೀಗಿದೆ..

ಏರ್‌ಟೆಲ್ ತನ್ನ ಗ್ರಾಹಕರ ಮೇಲೆ ದರ ಏರಿಕೆ ಬರೆ ಎಳೆದಿದೆ. ಶೇಕಡಾ 20-25 ರಷ್ಟು ಬೆಲೆ ಹೆಚ್ಚಿಸಿ ಆದೇಶ ಹೊರಡಿಸಿದೆ.

Airtel announces 20-25 per cent tariffs hikes for prepaid offerings

author img

By

Published : Nov 22, 2021, 9:07 AM IST

Updated : Nov 22, 2021, 3:47 PM IST

ನವದೆಹಲಿ: ಟೆಲಿಕಾಂ ಆಪರೇಟರ್ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಬೆಲೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಅನಿಯಮಿತ ಧ್ವನಿ ಕರೆಗಳ ಗುಚ್ಚ ಮತ್ತು ಡೇಟಾ ಟಾಪ್ಅಪ್‌ಗಳು ಸೇರಿದಂತೆ ವಿವಿಧ ಪ್ರಿಪೇಯ್ಡ್ ಕೊಡುಗೆಗಳಿಗಾಗಿ ಶೇಕಡಾ 20-25 ರಷ್ಟು ಬೆಲೆ ಹೆಚ್ಚಳವನ್ನು ಘೋಷಿಸಿದೆ.

ಆರಂಭಿಕ ಕರೆಗಳ ಟಾರಿಫ್​ ಯೋಜನೆಯ ದರವನ್ನು ಸುಮಾರು 25 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಆದರೆ, ಅನಿಯಮಿತ ಕರೆಗಳ ಗುಚ್ಚದ ಹೆಚ್ಚಳವು ಶೇ 20 ರಷ್ಟಿದೆ. ಪ್ರತಿ ಬಳಕೆದಾರರ ಸರಾಸರಿ ಮೊಬೈಲ್ ಬಳಕೆ ಆದಾಯ (ARPU) 200 ರೂ. ಮತ್ತು ಅಂತಿಮವಾಗಿ 300 ಆಗಿರಬೇಕು ಎಂಬುದು ಕಂಪನಿಯ ಉದ್ದೇಶವಾಗಿದೆ. ಪ್ರತಿ ಬಳಕೆದಾರ ಸರಾಸರಿ ಇಷ್ಟೊಂದು ಪ್ರಮಾಣದಲ್ಲಿ ಮಾತ್ರ ಆರೋಗ್ಯಕರ ವ್ಯವಹಾರ ಹಾಗೂ ಸಮಂಜಸ ಬಂಡವಾಳ ಹರಿದು ಬರಲಿದೆ ಎಂಬುದು ಕಂಪನಿಯ ಅಂದಾಜಾಗಿದೆ.

ಒಬ್ಬ ಗ್ರಾಹಕರ ಸರಾಸರಿ ಇಷ್ಟು ಪ್ರಮಾಣದ ಕರೆಗಳ ಬಳಕೆ ಮಾಡಿದರೆ ಕಂಪನಿ ಉಳಿವು ಹಾಗೂ ನೆಟ್​ವರ್ಕ್​​ ಹಾಗೂ ಸ್ಪೆಕ್ಟ್ರಮ್​​​​ಗಳಲ್ಲಿ ಗಣನೀಯ ಹೂಡಿಕೆ ಮಾಡಲು ಸಹಾಯಕವಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅಷ್ಟೇ ಅಲ್ಲ ಭಾರತದಲ್ಲಿ 5G ಅನ್ನು ಹೊರತರಲು ಏರ್‌ಟೆಲ್‌ ಬಲ ನೀಡುತ್ತದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದೆ.

26 ರಿಂದಲೇ ಹೊಸ ದರ ಜಾರಿ

ಇದೇ ತಿಂಗಳ 26 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ಪ್ರಸ್ತುತ 28 ದಿನಗಳ ಬಳಕೆಯ ₹ 79ರ ಪ್ಲಾನ್​​ನ​ ಹೊಸ ದರ ₹99 ಆಗಲಿದೆ.

₹ 149ರ ಪ್ಲಾನ್​​ಗೆ ₹ 179 ಕೊಡಬೇಕಿದೆ. ₹ 1,498ರ ಪ್ಲಾನ್​​ಗೆ ₹ 1,799, ಮತ್ತು ₹ 2,498 ಪ್ಲಾನ್​​ಗೆ​​ ₹ 2,999 ಖರ್ಚಾಗಲಿದೆ.

Last Updated : Nov 22, 2021, 3:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.