ಮುಂಬೈ: ವಿಮಾನ ಪ್ರಯಾಣಿಕರನ್ನು ಸೆಳೆಯುವ ದೃಷ್ಟಿಯಿಂದ ಏರ್ ಇಂಡಿಯಾ 'ಮಾನ್ಸೂನ್ ಬೊನಾಂಜಾ ಆಫರ್'ನಡಿ ಅಂತಾರಾಷ್ಟ್ರೀಯ ವಿಮಾನಯಾನ ಟಿಕೆಟ್ಗಳಲ್ಲಿ ಆಯ್ದ ಸ್ಥಳಗಳಿಗೆ ರಿಯಾಯಿತಿ ಘೋಷಿಸಿದೆ.
ಎಕಾನಮಿ ಮತ್ತು ಬ್ಯುಸಿನಸ್ ಶ್ರೇಣಿಯಲ್ಲಿ ಪ್ರಯಾಣಿಸಲು ಬಯಸುವ ಪ್ರಯಾಣಿಕರಿಗೆ ಆಗಸ್ಟ್ 10ರವರೆಗೆ ಈ ರಿಯಾಯಿತಿ ಕೊಡುಗೆ ಲಭ್ಯವಿದೆ. ಪ್ರತಿ ಟಿಕೆಟ್ ಮೇಲೆ ಶೇ 10ರಷ್ಟು ಆಫರ್ ನೀಡಲಾಗಿದೆ. ಇಂಗ್ಲೆಂಡ್, ಯುರೋಪ್ ಮತ್ತು ಇಸ್ರೇಲ್‌ನ ಆಯ್ದ ನಗರಗಳಿಗೆ ಪ್ರಯಾಣಿಸಲು ಈ ರಿಯಾಯಿತಿ ದರಗಳು ಲಭ್ಯವಿದೆ ಎಂದು ವೆಬ್ಸೈಟ್ನಲ್ಲಿ ತಿಳಿಸಿದೆ.
ಲಂಡನ್, ಬರ್ಮಿಂಗ್ಹ್ಯಾಮ್, ಕೋಪನ್ಹ್ಯಾಗನ್, ಫ್ರಾಂಕ್‌ಫರ್ಟ್, ಮ್ಯಾಡ್ರಿಡ್, ಪ್ಯಾರಿಸ್, ರೋಮ್, ಮಿಲನ್, ಸ್ಟಾಕ್‌ಹೋಮ್, ವಿಯೆನ್ನಾ ಮತ್ತು ಟೆಲ್ ಅವೀವ್‌ಗಳಿಗೆ ಪ್ರಯಾಣಿಸಲು ಏರ್ ಇಂಡಿಯಾದ ಕೊಡುಗೆ ಅನ್ವಯವಾಗಲಿದೆ.
-
#FlyAI : Introducing new flight to #Toronto from #Delhi. For attractive fares login https://t.co/T1SVjRluZv pic.twitter.com/3f8M9yb4qy
— Air India (@airindiain) July 11, 2019 " class="align-text-top noRightClick twitterSection" data="
">#FlyAI : Introducing new flight to #Toronto from #Delhi. For attractive fares login https://t.co/T1SVjRluZv pic.twitter.com/3f8M9yb4qy
— Air India (@airindiain) July 11, 2019#FlyAI : Introducing new flight to #Toronto from #Delhi. For attractive fares login https://t.co/T1SVjRluZv pic.twitter.com/3f8M9yb4qy
— Air India (@airindiain) July 11, 2019
ಇಂದೋರ್ ಮತ್ತು ಕೋಲ್ಕತ್ತಾದಿಂದ ದುಬೈಗೆ ತಡೆರಹಿತ ವಿಮಾನಯಾನಗಳನ್ನು ಏರ್ ಇಂಡಿಯಾ ಪ್ರಕಟಿಸಿದ್ದು, ಜುಲೈ 15ರಿಂದ ಈ ವಿಮಾನಗಳು ಕಾರ್ಯನಿರ್ವಹಿಸಲಿವೆ. ಸೆಪ್ಟೆಂಬರ್ 27ರಿಂದ ದೆಹಲಿ ಮತ್ತು ಟೊರೊಂಟೋ ನಡುವೆ ವಾರದಲ್ಲಿ ಮೂರು ವಿಮಾನಗಳು ತಡೆರಹಿತ ಹಾರಟ ನಡೆಸಲಿವೆ ಎಂದು ಮಾಹಿತಿ ನೀಡಿದೆ.