ETV Bharat / business

ಇಂದಿನಿಂದ ಜೊಮಾಟೊ IPO ಆರಂಭ: ಅಧಿಕೃತ ಮಾಹಿತಿ ಪ್ರಕಟಿಸಿದ ಸಂಸ್ಥೆ

author img

By

Published : Jul 14, 2021, 1:28 PM IST

ವಹಿವಾಟಿನ ಗಾತ್ರವನ್ನು ಒಟ್ಟು 4,196.51 ಕೋಟಿ ರೂ.ಗೆ ಒಟ್ಟುಗೂಡಿಸಿ 552,173,505 ಈಕ್ವಿಟಿ ಷೇರುಗಳನ್ನು ಪ್ರತಿ 76 ರೂ.ಗಳಿಗೆ ಆ್ಯಂಕರ್ ಹೂಡಿಕೆದಾರರಿಗೆ ಹಂಚಿಕೆ ಮಾಡಲು ಕಂಪನಿ ನಿರ್ಧರಿಸಿದೆ ಎಂದು ಬಿಎಸ್‌ಇ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

Zomato
ಜೊಮಾಟೊ

ನವದೆಹಲಿ: ಆಹಾರ ವಿತರಣಾ ವೇದಿಕೆ ಜೊಮಾಟೊ ಮಂಗಳವಾರ ತನ್ನ ಆರಂಭಿಕ ಷೇರು ಮಾರಾಟದ ಮೂಲಕ 4,196 ಕೋಟಿ ರೂ.ಗಳನ್ನು ಸಂಗ್ರಹಿಸಲು ನಿರ್ಧರಿಸಿದೆ. ವಹಿವಾಟಿನ ಗಾತ್ರವನ್ನು ಒಟ್ಟು 4,196.51 ಕೋಟಿ ರೂ.ಗೆ ಒಟ್ಟುಗೂಡಿಸಿ 552,173,505 ಈಕ್ವಿಟಿ ಷೇರುಗಳನ್ನು ಪ್ರತಿ 76 ರೂ.ಗಳಿಗೆ ಆ್ಯಂಕರ್ ಹೂಡಿಕೆದಾರರಿಗೆ ಹಂಚಿಕೆ ಮಾಡಲು ಕಂಪನಿ ನಿರ್ಧರಿಸಿದೆ ಎಂದು ಬಿಎಸ್‌ಇ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಇನ್ನು ಷೇರು ಮಾರುಕಟ್ಟೆ ಹೂಡಿಕೆದಾರರು ಪ್ರತಿ 72-76 ರೂ.ಗಳಲ್ಲಿ ಷೇರುಗಳಿಗೆ ಚಂದಾದಾರರಾಗಲು ಆಫರ್​ನ ನೀಡಿದೆ. ಹೂಡಿಕೆದಾರರು ಜುಲೈ 14 ರಿಂದ 16 ರವರೆಗೆ ಜೊಮಾಟೊ ಐಪಿಒಗೆ ಚಂದಾದಾರರಾಗಲು ಬಿಡ್​ ಸಲ್ಲಿಕೆ ಮಾಡಬಹುದು.

ಬ್ಲ್ಯಾಕ್‌ರಾಕ್, ಟೈಗರ್ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಫಂಡ್, ಫಿಡೆಲಿಟಿ, ನ್ಯೂ ವರ್ಲ್ಡ್ ಫಂಡ್ ಇಂಕ್, ಜೆಪಿ ಮೋರ್ಗಾನ್, ಮೋರ್ಗನ್ ಸ್ಟಾನ್ಲಿ ಏಷ್ಯಾ (ಸಿಂಗಾಪುರ್) ಪಿಟಿ-ಒಡಿಐ, ಗೋಲ್ಡ್ಮನ್ ಸ್ಯಾಚ್ಸ್ (ಸಿಂಗಾಪುರ್) ಪಿಟಿ -ಒಡಿಐ, ಟಿ ರೋವ್, ಕೆನಡಾ ಪಿಂಚಣಿ ಯೋಜನೆ ಹೂಡಿಕೆ ಮಂಡಳಿ, ಸಿಂಗಾಪುರ್ ಸರ್ಕಾರ, ವಿತ್ತೀಯ ಸಿಂಗಾಪುರದ ಪ್ರಾಧಿಕಾರ ಮತ್ತು ಅಬುಧಾಬಿ ಹೂಡಿಕೆ ಪ್ರಾಧಿಕಾರವು ಆ್ಯಂಕರ್ ಹೂಡಿಕೆದಾರರಲ್ಲಿ ಸೇರಿವೆ.

ಆ್ಯಂಕರ್ ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ ದೇಶೀಯ ಹೂಡಿಕೆದಾರರಲ್ಲಿ ಕೊಟಕ್ ಮ್ಯೂಚುವಲ್ ಫಂಡ್ (ಎಂಎಫ್), ಆದಿತ್ಯ ಬಿರ್ಲಾ ಸನ್ ಲೈಫ್ ಎಮ್ಎಫ್, ಆಕ್ಸಿಸ್ ಎಂಎಫ್, ಎಸ್‌ಬಿಐ ಎಂಎಫ್, ಯುಟಿಐ ಎಂಎಫ್, ಎಚ್‌ಡಿಎಫ್‌ಸಿ ಎಮ್ಎಫ್, ಐಸಿಐಸಿಐ ಪ್ರುಡೆನ್ಶಿಯಲ್ ಎಂಎಫ್, ಐಡಿಎಫ್‌ಸಿ ಎಮ್ಎಫ್, ಸುಂದರಂ ಎಮ್ಎಫ್, ಎಡೆಲ್ವಿಸ್ ಎಂಎಫ್, ಐಸಿಐಸಿಐ ಪ್ರುಡೆನ್ಶಿಯಲ್ ಜೀವ ವಿಮಾ ಕಂಪನಿ ಮತ್ತು ಎಚ್‌ಡಿಎಫ್‌ಸಿ ಜೀವ ವಿಮಾ ಕಂಪನಿ ಸೇರಿವೆ.

ಇನ್ನು ಜೊಮಾಟೊ ಐಪಿಒ ಭಾರತೀಯ ಮಾರುಕಟ್ಟೆಯಲ್ಲಿ ಆರಂಭಿಕ ಷೇರು ಮಾರಾಟಕ್ಕೆ ಹೋಗಲು ಇತರ ಭಾರತೀಯ ಸ್ಟಾರ್ಟ್‌ ಅಪ್‌ಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಟ್ರೂ ಬೀಕಾನ್ ಮತ್ತು ಜೆರೋದಾದ ಸಹ ಸಂಸ್ಥಾಪಕ ಮತ್ತು ಸಿಐಒ ನಿಖಿಲ್ ಕಾಮತ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.