ETV Bharat / business

ಯೆಸ್​ ಬ್ಯಾಂಕ್​ ಹಗರಣ.. ಕಾಕ್ಸ್​ & ಕಿಂಗ್ಸ್​​​​ನ​​ 5 ಮನೆಗಳ ಮೇಲೆ 'ಇಡಿ' ದಾಳಿ.. - Cox and Kings

ಕಾಕ್ಸ್ ಮತ್ತು ಕಿಂಗ್ಸ್ ಬ್ಯಾಂಕಿನಲ್ಲಿ ಹೆಚ್ಚು ಸಾಲ ಪಡೆದವರಲ್ಲಿ ಒಬ್ಬರು. ಅವರು ₹ 2,260 ಕೋಟಿಗೂ ಅಧಿಕ ಹಣ ಪಡೆದಿದ್ದಾರೆ ಎಂಬುದನ್ನು ಯೆಸ್ ಬ್ಯಾಂಕ್​​​ ಬಹಿರಂಗಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2019ರ ಅಕ್ಟೋಬರ್​​​ನಲ್ಲಿ ಕಾಕ್ಸ್​ ಮತ್ತು ಕಿಂಗ್ಸ್​ ಅವರ ವಿರುದ್ಧ ತನಿಖೆಗೆ ಮುಂಬೈನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಆದೇಶಿಸಿತ್ತು.

Yes Bank case: ED raids five premises of Cox and Kings in Mumbai
ಯೆಸ್​ ಬ್ಯಾಂಕ್​ ಹಗರಣ
author img

By

Published : Jun 8, 2020, 5:43 PM IST

ಮುಂಬೈ: ಯೆಸ್ ಬ್ಯಾಂಕ್ ಅಕ್ರಮ ಹಣ ವರ್ಗಾವಣೆ ತನಿಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಗ್ಲೋಬಲ್​ ಟೂರ್ಸ್​​ ಅಂಡ್​​ ಟ್ರಾವೆಲ್​ ಕಂಪನಿಯ ಕಾಕ್ಸ್ ಮತ್ತು ಕಿಂಗ್ಸ್‌ ಅವರ ಐದು ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ಸೋಮವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸಂಸ್ಥೆಯ ತಂಡಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮತ್ತು ಈ ಪ್ರಕರಣದಲ್ಲಿ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ಶೋಧ ನಡೆಸಲಾಗಿದೆ ಎಂದು ಅವರು ಹೇಳಿದರು.

ಕಾಕ್ಸ್ ಮತ್ತು ಕಿಂಗ್ಸ್ ಬ್ಯಾಂಕಿನಲ್ಲಿ ಹೆಚ್ಚು ಸಾಲ ಪಡೆದವರಲ್ಲಿ ಒಬ್ಬರು. ಅವರು ₹ 2,260 ಕೋಟಿಗೂ ಅಧಿಕ ಹಣ ಪಡೆದಿದ್ದಾರೆ ಎಂಬುದನ್ನು ಯೆಸ್ ಬ್ಯಾಂಕ್​​​ ಬಹಿರಂಗಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2019ರ ಅಕ್ಟೋಬರ್​​​ನಲ್ಲಿ ಕಾಕ್ಸ್​ ಮತ್ತು ಕಿಂಗ್ಸ್​ ಅವರ ವಿರುದ್ಧ ತನಿಖೆಗೆ ಮುಂಬೈನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಆದೇಶಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಪಡೆಯಲು ಮಾರ್ಚ್​​​​ನಲ್ಲಿ ಕಾಕ್ಸ್ ಮತ್ತು ಕಿಂಗ್ಸ್​​​ನ ಇಡಿ ಕರೆಸಿಕೊಂಡಿತ್ತು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಯೆಸ್ ಬ್ಯಾಂಕ್ ಮತ್ತು ಹಲವಾರು ದೊಡ್ಡ ಕಾರ್ಪೊರೇಟ್ ಗುಂಪುಗಳನ್ನು ತನಿಖೆ ನಡೆಸುತ್ತಿದೆ. ಅಲ್ಲಿ ಬ್ಯಾಂಕ್ ನೀಡಿದ ದೊಡ್ಡ ಮೊತ್ತದ ಸಾಲಗಳು, ಈಗ ವಸೂಲಾಗದ ಸಾಲಗಳಾಗಿ (ಎನ್‌ಪಿಎ) ಮಾರ್ಪಟ್ಟಿವೆ.

ಈ ವರ್ಷದ ಮಾರ್ಚ್‌ನಲ್ಲಿ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಬಂಧಿಸಿತ್ತು. ಮತ್ತು ಇತ್ತೀಚೆಗೆ ಈ ಪ್ರಕರಣದ ಮೊದಲ ಚಾರ್ಜ್‌ಶೀಟ್‌ನ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಇಡಿ ಸಲ್ಲಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.