ETV Bharat / business

ನೀವು ಬದುಕಲು ಒದ್ದಾಡುತ್ತಿರುವಾಗ ಅದಾನಿ 12 ಲಕ್ಷ ಕೋಟಿ ರೂ. ಗಳಿಸಿದ್ದೇಗೆ?: ರಾಗಾ ಸವಾಲ್​

author img

By

Published : Mar 13, 2021, 7:23 PM IST

ಬ್ಲೂಮ್ ​ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಉದ್ಯಮಿ ಗೌತಮ್​ ಅದಾನಿ ಅವರ ನಿವ್ವಳ ಮೌಲ್ಯವು 2021ರಲ್ಲಿ 16.2 ಬಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿ 50 ಬಿಲಿಯನ್‌ ಡಾಲರ್​ಗೆ ಏರಿದೆ. ಇದು ಅವರನ್ನು ವರ್ಷದ ಅತಿಹೆಚ್ಚು ಸಂಪತ್ತು ಗಳಿಸಿದವರಲ್ಲಿ ಮೊದಲಿಗರನ್ನಾಗಿ ಮಾಡಿದೆ.

Rahul Gandhi
Rahul Gandhi

ನವದೆಹಲಿ: ಕೊರೊನಾ ಸಾಂಕ್ರಾಮಿಕ ನಡುವೆ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಸಂಪತ್ತಿನ ಗಳಿಕೆಯಲ್ಲಿ ಮೈಲಿಗಲ್ಲು ಸಾಧಿಸಿದ್ದು, ಬ್ಲೂಮ್​ಬರ್ಗ್​ ಬಿಲಿಯನೇರ್ ಸೂಚ್ಯಂಕದಲ್ಲಿ ವಿಶ್ವದಲ್ಲಿ ಅತ್ಯಧಿಕ ಸಂಪತ್ತಿನ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್​ ಗಾಂಧಿ, ಅದಾನಿ ಸಂಪತ್ತು ಶೇ 50ರಷ್ಟು ಹೆಚ್ಚಾಗಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ಬ್ಲೂಂಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಉದ್ಯಮಿ ಗೌತಮ್​ ಅದಾನಿ ಅವರ ನಿವ್ವಳ ಮೌಲ್ಯವು 2021ರಲ್ಲಿ 16.2 ಬಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿ 50 ಬಿಲಿಯನ್‌ ಡಾಲರ್​ಗೆ ಏರಿದೆ. ಇದು ಅವರನ್ನು ವರ್ಷದ ಅತಿಹೆಚ್ಚು ಸಂಪತ್ತು ಗಳಿಸಿದವರಲ್ಲಿ ಮೊದಲಿಗರನ್ನಾಗಿ ಮಾಡಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಉಳಿದವರೆಲ್ಲರೂ ಹೆಣಗಾಡುತ್ತಿರುವಾಗ ಉದ್ಯಮಿ ಗೌತಮ್ ಅದಾನಿ ತಮ್ಮ ಸಂಪತ್ತನ್ನು ಶೇ 50ರಷ್ಟು ಹೆಚ್ಚಿಸಿಕೊಳ್ಳಲು ತಮ್ಮ ಉದ್ಯಮ ಹೇಗೆ ನಿರ್ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ಟ್ವಿಟರ್​ನಲ್ಲಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಮೋದಿ, ಬೈಡನ್​, ಸ್ಕಾಟ್​ ಹೆಣೆದ ಲಸಿಕೆ ಬಲೆಯಲ್ಲಿ 'ಚೀನಾ' ವಿಲವಿಲ.. ಭಾರತದಿಂದ ಮಾತ್ರ ಸಾಧ್ಯವೆಂದ ಕ್ವಾಡ್​!

2020ರಲ್ಲಿ ನಿಮ್ಮ ಸಂಪತ್ತು ಎಷ್ಟು ಹೆಚ್ಚಾಗಿದೆ? ಶೂನ್ಯ. ನೀವು ಬದುಕಲು ಕಷ್ಟ ಪಡುತ್ತಿರುವಾಗ ಅವರು 12 ಲಕ್ಷ ಕೋಟಿ ರೂ. ಗಳಿಸಿ, ಅವರ ಸಂಪತ್ತು ಶೇ 50ರಷ್ಟು ಹೆಚ್ಚಾಗಿದೆ, ಏಕೆ ಎಂದು ಹೇಳಬಲ್ಲಿರಾ? ಎಂದು ರಾಹುಲ್​ ಟ್ವೀಟ್ ಮಾಡಿದ್ದಾರೆ.

Rahul Gandhi twit
ರಾಹುಲ್​ ಗಾಂಧಿ ಟ್ವೀಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.