ಮುಂಬೈ: ಅವಧಿ ಸಾಲಗಳ ಮೇಲಿನ ಇಎಂಐ ಮರುಪಾವತಿ ಕಾಲಾವಕಾಶ ಅವಧಿಯು ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದ್ದು, ಅರ್ಹ ಸಾಲಗಾರರಿಗೆ ಸಾಲದ ಪುನರ್ರಚನೆಯನ್ನು ಪರಿಗಣಿಸಲಾಗುವುದು ಎಂದು ಎಸ್ಬಿಐ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಖರಾ ತಿಳಿಸಿದ್ದಾರೆ.
ಡನ್ ಮತ್ತು ಬ್ರಾಡ್‌ಸ್ಟ್ರೀಟ್ ಆಯೋಜಿಸಿದ ಸಮ್ಮೇಳನದಲ್ಲಿ ಮಾತನಾಡಿದ ಖರಾ, ಸಾಲಗಳ ಮೇಲಿನ ಅವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಲಿದ್ದು, ಅರ್ಹ ಸಾಲಗಳು ಈ ತಿಂಗಳ ನಂತರದಲ್ಲಿ ಪುನರ್ರಚನೆಯಾಗಲಿವೆ ಎಂದು ಹೇಳಿದ್ದಾರೆ.
ಎಸ್‌ಬಿಐನ ಜಾಗತಿಕ ಮಾರುಕಟ್ಟೆಗಳು ಮತ್ತು ಅಂಗಸಂಸ್ಥೆಗಳ ಜವಾಬ್ದಾರಿ ವಹಿಸಿಕೊಂಡಿರುವ ದಿನೇಶ್ ಖರಾ, ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಡಲು ದೇಶಕ್ಕೆ ಹಾಗೂ ಜನರಿಗೆ ಸಹಾಯ ಮಾಡುವಲ್ಲಿ ಸರ್ಕಾರವು ಅಳವಡಿಸಿಕೊಂಡ ಕಾರ್ಯತಂತ್ರವನ್ನು ಬ್ಯಾಂಕ್ನಲ್ಲಿ ಸಾಲ ಪಡೆದುಕೊಂಡವರು ಅನುಸರಿಸಿದ್ದಾರೆ. ಆದರೆ ಕಾರ್ಪೊರೇಟ್ ವಲಯಗಳು ಅವಧಿ ಸಾಲಗಳ ಮೇಲಿನ ಇಎಂಐ ಗಳಲ್ಲಿ ನಗದು ಸಂರಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಡಿಜಿಟಲ್ ಬ್ಯಾಂಕಿಂಗ್ ಪರಿಕರಗಳು ವರದಾನವಾಗಿದೆ, ಬ್ಯಾಂಕ್ ಮೂಲಕ ವಿತರಿಸಿದ ವೈಯಕ್ತಿಕ ಸಾಲಗಳ ಪೈಕಿ ಶೇ.38 ರಷ್ಟು ಸಾಲವನ್ನು ಎಸ್ಬಿಐ ಯೊನೊ ಆ್ಯಪ್ ಮೂಲಕ ಕಾರ್ಯಗತಗೊಳಿಸಲಾಗಿದೆ ಎಂದು ದಿನೇಶ್ ಖರಾ ತಿಳಿಸಿದ್ದಾರೆ.
ಕೆಲವು ರಾಜ್ಯಗಳು ಈಗಾಗಲೇ ಆತ್ಮನಿರ್ಭರ್ ಭಾರತದ ಅಗತ್ಯತೆಗಳನ್ನು ಅಳವಡಿಸಿಕೊಂಡಿದ್ದು, ಸ್ವಾವಲಂಬನೆಯತ್ತ ಗಮನ ಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.