ನವದೆಹಲಿ: ಇಂಡೋ- ಪೆಸಿಫಿಕ್ ಹಿತಾಸಕ್ತಿಗಳನ್ನು ಪುನರುಜ್ಜೀವನಗೊಳಿಸುವ ಚೀನಾ ಕ್ರಮಗಳ ಪರಿಶೀಲನೆಯಲ್ಲಿ ಅಮೆರಿಕ -ಭಾರತ ಸಂಬಂಧಗಳು ನಿರ್ಣಾಯಕವಾಗುತ್ತವೆ ಎಂದು ಅಮೆರಿಕದ ವಿದೇಶಾಂಗ ಉಪಕಾರ್ಯದರ್ಶಿ ಜಾನ್ ಸುಲ್ಲಿವಾನ್ ಹೇಳಿದರು.
ವಾಷಿಂಗ್ಟ್ನಲ್ಲಿ ವಿದೇಶಾಂಗ ಉಪಕಾರ್ಯದರ್ಶಿ ಜಾನ್ ಸುಲ್ಲಿವಾನ್ ಅವರು, ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಭೇಟಿಯಾಗಿ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ, ಪ್ರಾದೇಶಿಕ ಭದ್ರತೆ, ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು.
ಇಂಡೋ- ಪೆಸಿಫಿಕ್ನ ಭದ್ರತೆ ಹಾಗೂ ಚೀನಾದ ದಕ್ಷಿಣ ಸಮುದ್ರ ವ್ಯಾಪ್ತಿಯಲ್ಲಿ 2+2 ಸಂವಾದ ಬೆಳೆಸುವುದು ಪ್ರಮುಖವಾಗಿದೆ. ಭಯೋತ್ಪಾದನೆಯ ಸವಾಲುಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ. ದಕ್ಷಿಣ ಚೀನಾ ಸಮುದ್ರದಲ್ಲಿ ಸಂಚಾರದ ಮುಕ್ತತೆ ಕಾಪಾಡಲು ಸಹಕರಿಸುತ್ತೇವೆ ಎಂದು ಚೀನಾದ ದಕ್ಷಿಣ ಸಮುದ್ರ ವ್ಯಾಪ್ತಿಯಲ್ಲಿನ ಹಸ್ತಕ್ಷೇಪವನ್ನು ಪರೋಕ್ಷವಾಗಿ ಖಂಡಿಸಿದರು.
ಯುಎಸ್- ಇಂಡಿಯಾ ಸೌಹಾರ್ದ ವೃದ್ಧಿಯು ಅಂತಿಮವಾಗಿ ಚೀನಾದ ಬೆಳವಣೆಗೆ ಮೇಲೆ ಪ್ರಭಾವ ಬೀರುತ್ತದೆಯೇ ಎಂಬುದನ್ನು ಪರೀಕ್ಷಿಸಲು ಸಹಾಯಕವಾಗುತ್ತದೆ. ಚೀನಾವು ನಿಯಮ ಆಧಾರಿತ ಕ್ರಮಗಳಡಿ ಹಲವು ದಶಕಗಳಿಂದ ಸ್ಪರ್ಧಿಸುತ್ತಿದೆ. ಅದೇ ರೀತಿ ನಾವು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಅಮೆರಿಕ- ಭಾರತದ ಪಾಲುದಾರಿಕೆಯ ಸುಧಾರಣೆ ಏಷ್ಯಾವನ್ನು ಮರು ರೂಪಿಸುವಲ್ಲಿ ಸಹಾಯಕವಾಗುತ್ತದೆ. ಏಷ್ಯಾದ ಬಲಿಷ್ಠತೆ ಈ ಉಭಯ ರಾಷ್ಟ್ರಗಳ ನಿರ್ಧಾರದ ಮೇಲೆ ನಿಂತಿದೆ ಎಂದು ಸುಲ್ಲಿವಾನ್ ಪ್ರತಿಪಾದಿಸಿದರು.