ನವದೆಹಲಿ: ವಿಶ್ವವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ದೇಶದಲ್ಲಿ 23 ನಕಲಿ ವಿಶ್ವವಿದ್ಯಾನಿಲಯಗಳನ್ನು ಪಟ್ಟಿ ಮಾಡಿದ್ದು, ಈ ವಿವಿಗಳಲ್ಲಿ ಪ್ರವೇಶ ಪಡೆಯದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಸಿದೆ.
ಸ್ವಯಂ ಘೋಷಿತ ಮತ್ತು ಮಾನ್ಯತೆ ಪಡೆಯದ ವಿಶ್ವವಿದ್ಯಾನಿಲಯಗಳು ಇವಾಗಿದ್ದು, ಅತಿಹೆಚ್ಚು ವಿಶ್ವವಿದ್ಯಾನಿಲಯಗಳು ಉತ್ತರ ಪ್ರದೇಶ (8 ವಿವಿಗಳು) ಇವೆ.
ದೆಹಲಿಯಲ್ಲಿ ಏಳು, ಪಶ್ಚಿಮ ಬಂಗಾಳ ಮತ್ತು ಓಡಿಶಾದಲ್ಲಿ ತಲಾ ಎರಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಪುದುಚರಿಯಲ್ಲಿ ತಲಾ ಒಂದು ನಕಲಿ ವಿಶ್ವವಿದ್ಯಾನಿಲಯ ಇದೆ ಎಂದು ಯುಜಿಸಿ ಪಟ್ಟಿ ಮಾಡಿದೆ.
ಕರ್ನಾಟಕದ ಬೆಳಗಾವಿಯ ಜಿಲ್ಲೆಯ ಬಡಗಾನ್ವಿ ಸರ್ಕಾರ್ ವರ್ಲಡ್ ಓಪನ್ ಯುನಿವರ್ಸಿಟಿ ಎಜುಕೇಷನ್ ಸೊಸೈಟಿ ನಕಲಿ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿದೆ. ಸೇಂಟ್ ಜಾನ್ಸ್ ವಿಶ್ವವಿದ್ಯಾನಿಲಯ (ಕೇರಳ), ರಾಜ ಅರೇಬಿಕ್ ವಿಶ್ವವಿದ್ಯಾನಿಲಯ (ಮಹಾರಾಷ್ಟ್ರ) ಮತ್ತು ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಪುದುಚೇರಿ) ಕೂಡ ಈ ಪಟ್ಟಿಯಲ್ಲಿವೆ.
ಉತ್ತರ ಪ್ರದೇಶದಲ್ಲಿ ಗುರುತಿಸಲಾಗದ ವಿಶ್ವವಿದ್ಯಾನಿಲಯಗಳು; ವಾರಣೇಶ್ಯ ಸಂಸ್ಕೃತ ವಿಶ್ವವಿದ್ಯಾನಿಲಯ (ವಾರಣಾಸಿ), ಮಹಿಳಾ ಗ್ರಾಮ ವಿದ್ಯಾಪೀಠ / ವಿಶ್ವವಿದ್ಯಾನಿಲಯ (ಪ್ರಯಾಗರಾಜ್), ಗಾಂಧಿ ಹಿಂದಿ ವಿದ್ಯಾಪೀಠ (ವಾರಣಾಸಿ), ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ (ಕಾನ್ಪುರ್), ನೇತಾಜಿ ಸುಭಾಷ್ ಚಂದ್ರ ಬೋಸ್ ಓಪನ್ ವಿಶ್ವವಿದ್ಯಾನಿಲಯ (ಅಲಿಗರ್) ಉತ್ತರ ಪ್ರದೇಶ ವಿಶ್ವ ವಿದ್ಯಾನಿಲಯ (ಮಥುರಾ), ಮಹಾರಾಣ ಪಾರ್ಟಪ್ ಶಿಕ್ಷ ನಿಕೇತನ್ ವಿಶ್ವವಿದ್ಯಾಲಯ (ಪ್ರತಾಪಗರ್ ಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷತ್ (ನೋಯ್ಡಾ).
ದೆಹಲಿಯಲ್ಲಿಯ ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ವೊಕೇಶನಲ್ ಯೂನಿವರ್ಸಿಟಿ, ಎಡಿಆರ್- ಸೆಂಟ್ರಿಕ್ ಜುರಿಡಿಕಲ್ ಯೂನಿವರ್ಸಿಟಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಅಧ್ಯಾತ್ಮಿಕ ವಿಶ್ವವಿದ್ಯಾನಿಲಯ ಮತ್ತು ಸ್ವಯಂ ಉದ್ಯೋಗಕ್ಕಾಗಿ ವಿಶ್ವಕರ್ಮ ಮುಕ್ತ ವಿಶ್ವವಿದ್ಯಾನಿಲಯ ನಕಲಿ ವಿವಿಗಳ ಸಾಲಿನಲ್ಲಿವೆ ಎಂದು ಘೋಷಿಸಲಾಗಿದೆ.