ನವದೆಹಲಿ: ಚೀನಾ ದೇಶದಲ್ಲಿ ಹುಟ್ಟಿದ ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಬೀಜಿಂಗ್ ತನ್ನ ನಿಬಂಧನೆಗಳನ್ನು ಗೌರವಿಸದಿದ್ದರೆ ಚೀನಾದೊಂದಿಗಿನ ವ್ಯಾಪಾರ ಒಪ್ಪಂದ ಕೊನೆಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಚೀನಾ ಮತ್ತು ಅಮೆರಿಕ ಜನವರಿಯಲ್ಲಿ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕೆ ಸಹಿ ಹಾಕಿದ್ದವು. ವಿಶ್ವದ ಎರಡು ಅತಿ ಬಲಿಷ್ಠ ಆರ್ಥಿಕ ರಾಷ್ಟ್ರಗಳು ಎರಡು ವರ್ಷಗಳ ಸುಂಕದ ಯುದ್ಧ ಕೊನೆಗೊಳಿಸಿ ಹೊಸ ಒಪ್ಪಂದಕ್ಕೆ ಮುಂದಾದವು. ಅದು ಮಾರುಕಟ್ಟೆಗಳನ್ನು ಚುರುಕುಗೊಳಿಸಿ ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರಿತ್ತು.
ಅಂದಿನ ಕರಾರಿನ ಅನ್ವಯ, ಚೀನಾ ಅಮೆರಿಕದಿಂದ 200 ಶತಕೋಟಿ ಡಾಲರ್ ಮೊತ್ತದ ಸರಕುಗಳನ್ನು ಖರೀದಿಸಬೇಕಿದೆ. ಅಮೆರಿಕ- ಚೀನಾ ಆರ್ಥಿಕ ಮತ್ತು ಭದ್ರತಾ ಮರುಪರಿಶೀಲನಾ ಆಯೋಗವು ಈ ಒಪ್ಪಂದದಲ್ಲಿ ಚೀನಾ ತಿದ್ದುಪಡಿ ಮಾಡಬಹುದು ಎಂದು ವರದಿಯಲ್ಲಿ ಹೇಳಿತ್ತು. ಇದರ ನೈಸರ್ಗಿಕ ವಿಕೋಪ ಅಥವಾ ಇನ್ಯಾವುದೇ ವಿಕೋಪದ ವೇಳೆ ಎರಡೂ ದೇಶಗಳ ನಡುವೆ ಹೊಸ ವ್ಯಾಪಾರ ಒಪ್ಪಂದ ಮಾಡಬಹುದಾಗಿದೆ.
ಒಂದು ವೇಳೆ ಅದು ಸಂಭವಿಸಿದಲ್ಲಿ ನಾವು ಒಪ್ಪಂದವನ್ನು ಮುಕ್ತಾಯ ಮಾಡುತ್ತೇವೆ. ನಾನು ಎಲ್ಲರಿಗಿಂತ ಉತ್ತಮವಾಗಿ ಏನು ಮಾಡಲು ಸಾಧ್ಯವೂ ಅದನ್ನು ನಾವು ಮಾಡುತ್ತೇವೆ ಎಂದು ಟ್ರಂಪ್ ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವ್ಯಾಪಾರ ಒಪ್ಪಂದದಲ್ಲಿ ಉಲ್ಲೇಖಿಸಲಾದ ನೈಸರ್ಗಿಕ ವಿಪತ್ತು ಷರತ್ತುಗಳಿಗೆ ಚೀನಿಯರನ್ನು ಆಹ್ವಾನಿಸಲು ಹೋಗುವುದಿಲ್ಲ. ನನಗಿಂತ ಚೀನಾದ ಮೇಲೆ ಯಾರೂ ಕಠಿಣವಾಗಿಲ್ಲ ಎಂದರು.
ಒಂದು ವರ್ಷದಲ್ಲಿ 200, 300, 400, 500 ಶತಕೋಟಿ ಡಾಲರ್, ಅವರು ಈ ರೀತಿ ಮಾಡಿದ್ದಾದರೂ ಯಾಕೆ? ಕಳೆದ ವರ್ಷವನ್ನೇ ನೋಡಿ ಖರ್ಚು ಕಡಿಮೆಯಾಗಿತ್ತು ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಚೀನಾ ವ್ಯಾಪಾರದಲ್ಲಿನ ಖರ್ಚು ಕಡಿಮೆ ಮಾಡುವಂತೆ ಒತ್ತಾಯಿಸಿ ಟ್ರಂಪ್ 2018ರಲ್ಲಿ ವ್ಯಾಪಾರ ಯುದ್ಧ ಆರಂಭಿಸಿದ್ದರು.