ETV Bharat / business

ಕೊರೊನಾ ವೈರಸ್ ಬಿಕ್ಕಟ್ಟು ಬೆನ್ನಲ್ಲಿ ತೈಲೋತ್ಪಾದನಾ ಕಡಿತಕ್ಕೆ ಐತಿಹಾಸಿಕ ಒಪ್ಪಂದ

COVID-19 ಸಾಂಕ್ರಾಮಿಕ ರೋಗದಿಂದಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಜನಸಂಖ್ಯೆಯನ್ನು ಲಾಕ್‌ಡೌನ್‌ಗೆ ಒಳಪಡಿಸಿರುವುದರಿಂದ ತೈಲ ಬೇಡಿಕೆ ಕಡಿಮೆಯಾಗಿದೆ. ಪರಿಣಾಮ ತೈಲೋತ್ಪಾದನಾ ಪ್ರಮುಖ ದೇಶಗಳಾದ ರಷ್ಯಾ ಮತ್ತು ಸೌದಿ ಅರೇಬಿಯಾಗಳು ಬೆಲೆ ಯುದ್ಧದಲ್ಲಿ ತೊಡಗಿದ್ದವು. ಮಾರುಕಟ್ಟೆ ಪಾಲನ್ನು ಹಿಡಿದಿಡಲು ಮತ್ತು ಯುಎಸ್ ಶೆಲ್ ತೈಲ ಉತ್ಪಾದಕರಿಗೆ ಕಡಿವಾಣ ಹಾಕುವ ಪ್ರಯತ್ನದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲಾಗಿತ್ತು.

author img

By

Published : Apr 13, 2020, 1:03 PM IST

Updated : Apr 13, 2020, 2:38 PM IST

ಕೊರೊನಾ ವೈರಸ್ ಬಿಕ್ಕಟ್ಟು
ಕೊರೊನಾ ವೈರಸ್ ಬಿಕ್ಕಟ್ಟು

ವಿಯೆನ್ನಾ(ಆಸ್ಟ್ರಿಯಾ): ಕೊರೊನಾದ ಲಾಕ್​ಡೌನ್​ ಬಿಕ್ಕಟ್ಟು ಮತ್ತು ರಷ್ಯಾ-ಸೌದಿಯ ಬೆಲೆ ಸಮರ ನಡುವೆ ತೈಲ ಉತ್ಪಾದಿಸುವ ರಾಷ್ಟ್ರಗಳು ಐತಿಹಾಸಿಕ ಉತ್ಪಾದನಾ ಕಡಿತಕ್ಕೆ ಒಪ್ಪಿಗೆ ಸೂಚಿಸಿವೆ. ಇಂದಿನಿಂದ ಈ ನಿಯಮ ಜಾರಿಗೆ ಬರಲಿದೆ.

ಸೌದಿ ಅರೇಬಿಯಾ ಪ್ರಾಬಲ್ಯವಿರುವ ಒಪೆಕ್‌ನ ತೈಲ ಉತ್ಪಾದಕರು ಮತ್ತು ರಷ್ಯಾ ನೇತೃತ್ವದ ಮಿತ್ರರಾಷ್ಟ್ರಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜಿ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದಲ್ಲಿ ಮೇ ತಿಂಗಳಿನಿಂದ ದಿನಕ್ಕೆ 9.7 ಮಿಲಿಯನ್ ಬ್ಯಾರೆಲ್‌ಗಳನ್ನು ತೈಲ ಉತ್ಪಾದನೆ ಕಡಿತಗೊಳಿಸಲು ಒಪ್ಪಿಕೊಂಡರು ಎಂದು ಮೆಕ್ಸಿಕನ್ ಇಂಧನ ಸಚಿವ ರೊಸಿಯೊ ನಹ್ಲೆ ಹೇಳಿದ್ದಾರೆ. ಒಪೆಕ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಬಾರ್ಕಿಂಡೋ ಈ ಕಡಿತವನ್ನು 'ಐತಿಹಾಸಿಕ' ಎಂದು ಕರೆದಿದ್ದು, 2 ವರ್ಷಗಳ ಕಾಲ ಜಾರಿಯಲ್ಲಿರಲಿದೆ.

ವಿಯೆನ್ನಾ ಮೂಲದ ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ ಮತ್ತು ಪಾಲುದಾರರ ನಡುವಿನ ಈ ಒಪ್ಪಂದದಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಹೆಚ್ಚು ಉತ್ಪಾದನಾ ಕಡಿತ ಮಾಡಲಾಗುತ್ತದೆ. ಏಪ್ರಿಲ್ 2022 ರವರೆಗೆ ಕಡಿತವನ್ನು ಕ್ರಮೇಣ ಕಡಿಮೆ ಮಾಡಲಾಗುತ್ತದೆ. ಈ ಒಪ್ಪಂದವು ಜಿ- 20 ಭಾಗವಹಿಸುವಿಕೆಯೊಂದಿಗೆ ಜಾಗತಿಕ ಮೈತ್ರಿಗೆ ದಾರಿ ಮಾಡಿಕೊಟ್ಟಿದೆ ಎಂದು ಬಾರ್ಕಿಂಡೋ ಹೇಳಿದ್ದಾರೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸೌದಿ ಇಂಧನ ಸಚಿವ ರಾಜಕುಮಾರ ಅಬ್ದುಲಜೀಜ್ ಬಿನ್ ಸಲ್ಮಾನ್, ರಷ್ಯಾದ ಮತ್ತು ಅಲ್ಜೀರಿಯಾದ ಸಹವರ್ತಿಗಳೊಂದಿಗೆ ಚರ್ಚೆಗಳು ಒಮ್ಮತದಿಂದ ಕೊನೆಗೊಂಡಿವೆ ಎಂದು ದೃಢಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಪ್ರತಿಕ್ರಿಯಿಸಿದ್ದು, ಎಲ್ಲರಿಗೂ ಇದೊಂದು ದೊಡ್ಡ ಡೀಲ್​ ಎಂದು ಟ್ವೀಟ್​ ಮಾಡಿದ್ದಾರೆ. ಯುನೈಟೆಡ್ ಸ್ಟೇಟ್ಸ್​ನಲ್ಲಿ ಇದು ಲಕ್ಷಾಂತರ ಇಂಧನ ಉದ್ಯೋಗಗಳನ್ನು ಉಳಿಸುತ್ತವೆ ಎಂದಿದ್ದಾರೆ.

ಕೊರೊನಾ ವೈರಸ್ ಬಿಕ್ಕಟ್ಟು
ಪ್ರಾತಿನಿಧಿಕ ಚಿತ್ರ

ಪುಟಿನ್ ಮತ್ತು ಟ್ರಂಪ್ ಈ ಒಪ್ಪಂದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ಒಪ್ಪಿಕೊಂಡಿದ್ದಾರೆ."ಇದು ಒಳ್ಳೆಯದು" ಎಂದು ಕೆನಡಾದ ನೈಸರ್ಗಿಕ ಸಂಪನ್ಮೂಲ ಸಚಿವ ಸೀಮಸ್ ಒರೆಗನ್ ಟ್ವೀಟ್ ಮಾಡಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಗಳಿಗೆ ಸ್ಥಿರತೆಯನ್ನು ತರುವ ಯಾವುದೇ ವಿಷಯವನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.

COVID-19 ಸಾಂಕ್ರಾಮಿಕ ರೋಗದಿಂದಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಜನಸಂಖ್ಯೆಯನ್ನು ಲಾಕ್‌ಡೌನ್‌ಗೆ ಒಳಪಡಿಸಿರುವುದರಿಂದ ತೈಲ ಬೇಡಿಕೆ ಕಡಿಮೆಯಾಗಿದೆ. ಪರಿಣಾಮ ತೈಲೋತ್ಪಾದನಾ ಪ್ರಮುಖ ದೇಶಗಳಾದ ರಷ್ಯಾ ಮತ್ತು ಸೌದಿ ಅರೇಬಿಯಾಗಳು ಬೆಲೆ ಯುದ್ಧದಲ್ಲಿ ತೊಡಗಿದ್ದವು. ಮಾರುಕಟ್ಟೆ ಪಾಲನ್ನು ಹಿಡಿದಿಡಲು ಮತ್ತು ಯುಎಸ್ ಶೆಲ್ ತೈಲ ಉತ್ಪಾದಕರಿಗೆ ಕಡಿವಾಣ ಹಾಕುವ ಪ್ರಯತ್ನದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲಾಗಿತ್ತು.

ರಿಸ್ಟಾಡ್ ಎನರ್ಜಿ ವಿಶ್ಲೇಷಕ ಪರ್ ಮ್ಯಾಗ್ನಸ್ ನೈಸ್ವೀನ್ ಪ್ರತಿಕ್ರಿಯಿಸಿದ್ದು, ಭಾನುವಾರದ ಒಪ್ಪಂದವು ತಾತ್ಕಾಲಿಕ ಪರಿಹಾರವನ್ನು ಒದಗಿಸಿದೆ. ಏಕೆಂದರೆ ಇಂಧನ ಬಳಕೆ ಜಾಗತಿಕವಾಗಿ ಏಪ್ರಿಲ್‌ನಲ್ಲಿ ದಿನಕ್ಕೆ 27 ಮಿಲಿಯನ್ ಬ್ಯಾರೆಲ್‌ಗಳು ಮತ್ತು ಮೇ ತಿಂಗಳಲ್ಲಿ ದಿನಕ್ಕೆ 20 ಮಿಲಿಯನ್ ಬ್ಯಾರೆಲ್‌ಗಳು ಇಳಿಯುವ ನಿರೀಕ್ಷೆಯಿದೆ ಎಂದಿದ್ದಾರೆ.

ಮೆಕ್ಸಿಕೊದೊಂದಿಗಿನ ನಿಲುವನ್ನು ಕೊನೆಗೊಳಿಸಲು ಟ್ರಂಪ್ ಅವರ ಮಧ್ಯಸ್ಥಿಕೆಯ ಪ್ರಯತ್ನಗಳ ಹೊರತಾಗಿಯೂ, ಜಿ-20 ಇಂಧನ ಸಚಿವರು ಶುಕ್ರವಾರ ನಡೆಸಿದ ಶೃಂಗಸಭೆಯಲ್ಲಿ ಉತ್ಪಾದನಾ ಕಡಿತವನ್ನು ಅಂತಿಮಗೊಳಿಸಲು ಉನ್ನತ ತೈಲ ಉತ್ಪಾದಕರು ಹೆಣಗಾಡಿದರು.

Last Updated : Apr 13, 2020, 2:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.