ಮುಂಬೈ: ಕೋವಿಡ್ ನಡುವೆಯೂ ಭಾರತೀಯ ಮ್ಯೂಚುವಲ್ ಫಂಡ್ ತನ್ನ ವಿಸ್ತಾರತೆಯನ್ನು ಹೆಚ್ಚಿಸಿಕೊಂಡಿದೆ. ಸಣ್ಣ ಹೂಡಿಕೆ ಸಂಸ್ಥೆಗಳು ಈ ವರ್ಷ ತಮ್ಮ ನಿರ್ವಹಣೆಯಲ್ಲಿರುವ ಸ್ವತ್ತುಗಳಲ್ಲಿ (AUM) ಶೇಕಡಾ 8 ರಿಂದ 16 ರಷ್ಟು ಹೆಚ್ಚಳ ಕಂಡಿವೆ .
ಎಸ್‌ಬಿಐ ಮ್ಯೂಚುವಲ್ ಫಂಡ್‌ನ ಎಯುಎಂ, ಜುಲೈ ಅಂತ್ಯದ ವೇಳೆಗೆ ಶೇಕಡಾ 15 ರಷ್ಟು ಅಂದರೆ, 5.53 ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ. ಅಂತೆಯೇ ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್ನಲ್ಲಿ ಶೇಕಡಾ 8.5, ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್ ಶೇಕಡಾ 9.4 , ಕೋಟಕ್ ಮಹೀಂದ್ರಾ ಮ್ಯೂಚುವಲ್ ಫಂಡ್ ಶೇಕಡಾ 13.4, ನಿಪ್ಪಾನ್ ಇಂಡಿಯಾ ಮ್ಯೂಚುವಲ್ ಫಂಡ್‌ನ ಎಯುಎಮ್‌ಗಳು ಶೇಕಡಾ 16.3 ರಷ್ಟು ಹೆಚ್ಚಾಗಿವೆ.
ಈಕ್ವಿಟಿ ಮಾರುಕಟ್ಟೆಯಲ್ಲಿನ ಏರಿಕೆಯೊಂದಿಗೆ ಸಣ್ಣ ಹೂಡಿಕೆದಾರರು ಹೆಚ್ಚು ಲಾಭ ಗಳಿಸಿದ್ದಾರೆ. ಕ್ವಾಂಟ್ ಮ್ಯೂಚುವಲ್ ಫಂಡ್, ಐಟಿಐ ಮ್ಯೂಚುವಲ್ ಫಂಡ್ ಮತ್ತು ಪಿಪಿಎಫ್ಎಎಸ್ ಮ್ಯೂಚುವಲ್ ಫಂಡ್ನಂತಹ ಫಂಡ್ ಹೌಸ್ಗಳ ಈಕ್ವಿಟಿ ಯೋಜನೆಗಳು ಅತ್ಯುತ್ತಮ ಪ್ರದರ್ಶನ ನೀಡಿವೆ.
ಕ್ವಾಂಟ್‌ನ ನಿರ್ವಹಣೆಯಲ್ಲಿರುವ ಕಂಪನಿಗಳು ಜನವರಿಯಿಂದ 2021 ರ ಜುಲೈ ಅವಧಿಯಲ್ಲಿ ಐದು ಪಟ್ಟು ಏರಿಕೆ ಕಂಡಿವೆ. ಇದರ AUM ಡಿಸೆಂಬರ್ 2020 ರಲ್ಲಿ 521 ಕೋಟಿ ರೂಪಾಯಿಯಷ್ಟಿತ್ತು. ಜುಲೈ ಅಂತ್ಯದ ವೇಳೆಗೆ ಅದು 2,842 ಕೋಟಿ ರೂ.ಗೆ ತಲುಪಿದೆ ಎಂದು Primemfdatabase.com ನ ಅಂಕಿ ಅಂಶಗಳಿಂದ ಬಹಿರಂಗಗೊಂಡಿದೆ.
ಐಟಿಐ ಮ್ಯೂಚುವಲ್ ಫಂಡ್‌ನ ಎಯುಎಂ ಶೇಕಡಾ 100 ರಷ್ಟು ಏರಿಕೆಯಾಗಿ 1,879 ಕೋಟಿ ರೂಗಳಿಗೆ ಹೆಚ್ಚಾಗಿದೆ. ಪಿಪಿಎಫ್‌ಎಎಸ್ ಮ್ಯೂಚುವಲ್ ಫಂಡ್‌ನ ಎಯುಎಂ ಕೂಡ ಸುಮಾರು 14,318 ಕೋಟಿ ರೂ.ಗಳಷ್ಟು ದ್ವಿಗುಣಗೊಂಡಿದೆ.
ಸಣ್ಣ ಫಂಡ್ ಹೌಸ್ಗಳ ವಿಶೇಷ ಕೊಡುಗೆಗಳನ್ನು ಗುರುತಿಸುವುದರಿಂದ ಅವುಗಳು ಎಯುಎಮ್ ಹೆಚ್ಚಾಗುತ್ತದೆ ಎಂದು ಪ್ರೈಮ್ ಡೇಟಾಬೇಸ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಣವ್ ಹಲ್ಡಿಯಾ ಹೇಳಿದ್ದಾರೆ.
ಇದನ್ನೂ ಓದಿ: ನೀವು ಹೀಗೆ ಮಾಡಿದ್ರೆ ಪೆಟ್ರೋಲ್-ಡೀಸೆಲ್ ಮೇಲೆ ಹಣ ಉಳಿಸಬಹುದು..
ಈ ಮ್ಯೂಚುವಲ್ ಫಂಡ್‌ಗಳ ಕಾರ್ಯಕ್ಷಮತೆಯು ಪ್ರಸ್ತುತ ದೈತ್ಯ ಸಂಸ್ಥೆಗಳೊಂದಿಗೆ ಸದೃಢವಾಗಿ ಮುಂದುವರಿಯುತ್ತದೆ. ಐದು ವರ್ಷಗಳಲ್ಲಿ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ನೋಡಿದ AUM ಬೆಳವಣಿಗೆಯ ಪ್ರಕಾರ, AUM ಈಗ ಸುಮಾರು 35 ರಿಂದ 36 ಲಕ್ಷ ಕೋಟಿ ರೂ.ಗಳಷ್ಟಿದೆ. ಆದ್ದರಿಂದ, ಈ ಸಣ್ಣ ಹೂಡಿಕೆದಾರರ ಬೆಳವಣಿಗೆಯು ನ್ಯಾಯಯುತ ಪಾಲನ್ನು ಪಡೆಯುತ್ತದೆ ಎಂದು ಪ್ರಣವ್ ಹೇಳಿದರು.