ಹೈದರಾಬಾದ್ : ಕೆಲವು ತಿಂಗಳು ಮಂದಗತಿಯ ಮಾರಾಟದ ನಂತರ ಅಕ್ಟೋಬರ್‌ನಲ್ಲಿ ಪ್ರಯಾಣಿಕ ಮತ್ತು ದ್ವಿಚಕ್ರ ವಾಹನಗಳ ಮಾರಾಟವು ದಾಖಲೆಯ ಮಾಸಿಕ ಏರಿಕೆ ದಾಖಲಿಸಿದೆ.
ವಾಹನ ಮಾರಾಟದ ಮೂಲಕ ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಅಕ್ಟೋಬರ್‌ನಲ್ಲಿ 1.63 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ ಎಂದು ಹೇಳಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ವಾಹನ ತಯಾರಕರು 1.39 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದ್ದರು.
ಭಾರತದ ಎರಡನೇ ಅತಿದೊಡ್ಡ ಕಾರು ತಯಾರಕ ಹ್ಯುಂಡೈ ಕೂಡ ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ದೇಶೀಯ ಮಾರಾಟ ದಾಖಲಿಸಿದ್ದು, 56,605 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಂಪನಿಯು ಈ ಹಿಂದೆ ಅತಿ ಹೆಚ್ಚು ಮಾಸಿಕ ಮಾರಾಟ 2018ರ ಅಕ್ಟೋಬರ್ ತಿಂಗಳಲ್ಲಿ ಸುಮಾರು 52,000 ಕಾರುಗಳನ್ನು ಮಾಡಿತ್ತು.
ಕಂಪನಿಗಳು ದಾಖಲೆಯ ಏರಿಕೆ ಸಂಖ್ಯೆ ಮಾರಾಟ ಮಾಡಿದರೂ 2019ರ ಅಂಕಿ ಅಂಶಗಳಿಗೆ ಹೋಲಿಸಿದರೆ ಚಿಲ್ಲರೆ ವಾಹನ ಮಾರಾಟ ಇನ್ನೂ ದುರ್ಬಲವಾಗಿ ಸಾಗುತ್ತಿವೆ ಎಂದು ಆಟೊಮೊಬೈಲ್ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿದ್ದಾರೆ.
ಈಟಿವಿ ಭಾರತ ಜತೆ ಮಾತನಾಡಿದ ಅವರು, ಅಕ್ಟೋಬರ್ ಮಾಸಿಕದ ನವರಾತ್ರಿಯ ಒಂಬತ್ತು ದಿನಗಳಲ್ಲಿ ವಾಹನಗಳಿಗೆ ಬೇಡಿಕೆ ಕಂಡು ಬಂದಿತ್ತು. ನನಗೆ ನಿಖರವಾದ ಸಂಖ್ಯೆಗಳನ್ನು ನೀಡಲು ಸಾಧ್ಯವಾಗದಿದ್ದರೂ ವರ್ಷದ ಹಿಂದಿನ ಮಟ್ಟಗಳಿಗೆ ಹೋಲಿಸಿದರೆ ಒಟ್ಟಾರೆ ಪ್ರಯಾಣಿಕ ಮಾರಾಟವು ಕಡಿಮೆ ಅಂಕಿಯ ಕುಸಿತ ಕಾಣುತ್ತಿದೆ ಎಂದರು.
ವಾಹನ ಕಂಪನಿಗಳು ಘೋಷಿಸಿದ ಮಾರಾಟ ಸಂಖ್ಯೆಗಳ ಸಗಟು ಅಂಕಿ ಅಂಶಗಳು ಕಾರ್ಖಾನೆಗಳಿಂದ ವಿತರಕರಿಗೆ ರವಾನೆಯಾಗುವ ವಾಹನಗಳ ಸಂಖ್ಯೆಯನ್ನು ಸೂಚಿಸುತ್ತವೆ. ಪ್ರತಿ ತಿಂಗಳು ಎಫ್‌ಎಡಿಎ ಘೋಷಿಸುವ ಚಿಲ್ಲರೆ ಮಾರಾಟ ಸಂಖ್ಯೆಗಳನ್ನು ಸರ್ಕಾರದ ವಾಹನ ನೋಂದಣಿ ದತ್ತಾಂಶದಿಂದ ಪಡೆಯಲಾಗುತ್ತದೆ. ಸಂಘಟನೆಯು ಇನ್ನೂ ಅಕ್ಟೋಬರ್ ತಿಂಗಳ ಅಂಕಿ ಅಂಶ ಪ್ರಕಟಿಸಿಲ್ಲ.
ಕಳೆದ ವರ್ಷ ನವರಾತ್ರಿ ಮತ್ತು ದೀಪಾವಳಿಯ ಎರಡೂ ಒಂದೇ ತಿಂಗಳಲ್ಲಿ ಬಂದಿದ್ದವು. ಈ ವರ್ಷ ನವರಾತ್ರಿ ಅಕ್ಟೋಬರ್‌ನಲ್ಲಿದ್ದರೆ ದೀಪಾವಳಿ ನವೆಂಬರ್‌ಗೆ ಬಂದಿದೆ. ಆದ್ದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಬೇಡಿಕೆ ಏರಿಕೆ ಆಗಿದೆ ಎಂದರು.