ETV Bharat / business

Tips to Home Loan Management: ಗೃಹಸಾಲದ ಇಎಂಐ ಹೊರೆಯನ್ನು ಇಳಿಸಿಕೊಳ್ಳಲು ಇಲ್ಲಿವೆ ಟಿಪ್ಸ್​​​ - ಮನೆಗಾಗಿ ಸಾಲ ಮಾಡಿದ್ದರೆ ಪಾಲಿಸಬೇಕಾದ ನಿಯಮಗಳು

ಈಗಿನ ದಿನಮಾನಗಳಲ್ಲಿ ಗೃಹ ಸಾಲ ನೀಡಲು ಬ್ಯಾಂಕ್​ಗಳು ಪೈಪೋಟಿ ನಡೆಸುತ್ತಿರುವುದು ಸಾಮಾನ್ಯ. ಸ್ವಂತ ಮನೆಯನ್ನು ಹೊಂದುವ ಕನಸು ಹೊಂದಿವವರು ಬ್ಯಾಂಕ್​ನಿಂದ ಕಡಿಮ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಾರೆ. ಮನೆ ಮಾಲೀಕನಿಗೆ ಇಎಂಐ ಕಟ್ಟುವ ಚಿಂತೆ ಎದುರಾಗುತ್ತೆ. ಈ ಗೃಹಸಾಲದ ಇಎಂಐ ಹೊರೆಯನ್ನು ಯಾವರೀತಿ ಇಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಕೆಲ ಟಿಪ್ಸ್​ಗಳು ಇಲ್ಲಿವೆ ನೋಡಿ...

Tips to reduce the burden of home loan EMIs
ನೀವು ಗೃಹ ಸಾಲ ಪಡೆದಿದ್ದೀರಾ?: ಇಎಂಐ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಇಲ್ಲಿವೆ ಟಿಪ್ಸ್​​​
author img

By

Published : Dec 4, 2021, 8:54 AM IST

ಹೈದರಾಬಾದ್: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಮನೆ ನಿರ್ಮಾಣದಲ್ಲಿರುವ ಅಥವಾ ಮದುವೆ ಮಾಡಿಕೊಳ್ಳುವುದರಲ್ಲಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಸಾಮಾನ್ಯವಾಗಿ ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸಾಗಿದ್ದು, ಅದನ್ನು ನನಸಾಗಿಸಲು ಅವರು ಗೃಹ ಸಾಲವನ್ನು ತೆಗೆದುಕೊಳ್ಳುತ್ತಾರೆ.

ಗೃಹ ಸಾಲ ನೀಡಲು ಬ್ಯಾಂಕ್​ಗಳು ಪೈಪೋಟಿ ನಡೆಸುತ್ತಿದ್ದು, ಸ್ವಂತ ಮನೆಯನ್ನು ಹೊಂದುವ ಕನಸು ಹೊಂದಿರುವವರಿಗಾಗಿ ಕಡಿಮ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡುತ್ತವೆ. ಆದರೆ ಸಾಲ ಪಡೆದವರು ಪ್ರತಿ ತಿಂಗಳು ಬ್ಯಾಂಕ್​ಗೆ ಕಟ್ಟಬೇಕಾದ ಹಣದ ಹೊರೆಯನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿದುಕೊಂಡಿರಬೇಕು.

ನೀವು ಸಾಲದ ಹಣದಲ್ಲಿ ಮನೆ ನಿರ್ಮಿಸಲು ಅಥವಾ ಮನೆ ಖರೀದಿಗೆ ನಿರ್ಧರಿಸಿದ ನಂತರ ಸರಿಯಾದ ಯೋಜನೆಯನ್ನು ರೂಪಿಸಬೇಕಾಗುತ್ತದೆ. ಮನೆಯ ಪ್ರತಿ ತಿಂಗಳ ಕಂತು ಹಣಕ್ಕಾಗಿ (EMI) ಶೇಕಡಾ 40ರಷ್ಟು ಹಣವನ್ನು ಮೀಸಲಿಡುವುದರ ಜೊತೆಗೆ ಉಳಿದ ಹಣದಲ್ಲಿ ಇತರ ವೆಚ್ಚಗಳು ಮತ್ತು ಉಳಿತಾಯಗಳನ್ನು ಹೇಗೆ ನಿರ್ವಹಿಸಬೇಕು ಎಂದು ಲೆಕ್ಕಾಚಾರ ಮಾಡಬೇಕಾಗುತ್ತದೆ.

ಹೆಚ್ಚುವರಿ ಕಂತು: ಮನೆ ವಾರಸುದಾರ ಸಾಮಾನ್ಯವಾಗಿ ವರ್ಷಕ್ಕೆ 12 ಕಂತುಗಳನ್ನು ಪಾವತಿಸುತ್ತಾನೆ. ಆದರೆ ಅವನು ಸಾಲವನ್ನು ಆದಷ್ಟು ಬೇಗ ಮರುಪಾವತಿ ಮಾಡಲು ಅಲ್ಪ ಸ್ವಲ್ಪ ಉಳಿತಾಯದ ಹಣವನ್ನು ಒಟ್ಟುಗೂಡಿಸಿ, ಹೆಚ್ಚುವರಿ ಕಂತುಗಳಾಗಿ ಹಣವನ್ನು ಪಾವತಿಸಬಹುದಾಗಿದೆ. ಈ ಮೂಲಕ ಸಾಲದ ಮೊತ್ತ ಕಡಿಮೆಯಾಗಿ, ನಿಗದಿತ ಸಮಯಕ್ಕಿಂತ ಬೇಗ ಸಾಲವನ್ನು ಮರುಪಾವತಿ ಮಾಡಬಹುದಾಗಿದೆ.

ಗೃಹ ಸಾಲ ನೀಡುವ ಬ್ಯಾಂಕ್​ಗಳು ಸಾಮಾನ್ಯವಾಗಿ ಹೆಚ್ಚುವರಿ ಕಂತು ಕಟ್ಟುವ ಹಣಕ್ಕೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕವನ್ನು ಪಡೆಯುವುದಿಲ್ಲ. ಅಷ್ಟೇ ಅಲ್ಲದೇ ಮುಂಚಿತವಾಗಿ ಸಾಲ ಮರುಪಾವತಿ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡಾ ಹೆಚ್ಚಾಗುತ್ತದೆ.

ವೆಚ್ಚ ಹೆಚ್ಚಾದರೆ: ನೀವು ಬ್ಯಾಂಕ್ ಸಾಲ ಕಟ್ಟುವುದಕ್ಕಾಗಿಯೇ ಪೂರ್ತಿ ಹಣವನ್ನು ವಿನಿಯೋಗಿಸುವ ಸ್ಥಿತಿಯಲ್ಲಿದ್ದರೆ, ಇತರ ವೆಚ್ಚಗಳಿಗೆ ಹಣ ಸಾಲದೇ ಹೋದರೆ ಯಾವುದೇ ರೀತಿಯಲ್ಲಿ ಕಡಿಮೆ ಬಡ್ಡಿ ದರದ ಇಎಂಐಗಳು ಕೂಡಾ ಇರುತ್ತವೆ. ಅವುಗಳನ್ನು ನೀವು ಬ್ಯಾಂಕ್​ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ. ಬ್ಯಾಂಕ್​ನವರು ಪರಿಶೀಲನೆ ನಂತರ ಇಎಂಐ ಅನ್ನು ಕಡಿಮೆ ಮಾಡಿ, ಸಾಲದ ಮರುಪಾವತಿ ಅವಧಿಯನ್ನು ಹೆಚ್ಚಿಸುತ್ತಾರೆ. ಇದು ಆರ್ಥಿಕ ಜಂಜಡಗಳಿಲ್ಲದ ಜೀವನಕ್ಕೆ ಉತ್ತಮ ಮಾರ್ಗವಾಗಿದೆ.

ಇಎಂಐ ಕಡಿಮೆಯಾದಾಗ ನೀವು ಯಾವುದೇ ಸಮಸ್ಯೆಯಿಲ್ಲದೆ ತನ್ನ ಮನೆಯ ಖರ್ಚುಗಳನ್ನು ನೋಡಿಕೊಳ್ಳಬಹುದಾಗಿದೆ. ಒಂದು ವೇಳೆ ಗಳಿಕೆಯಲ್ಲಿ ಹೆಚ್ಚಳ ಕಂಡುಬಂದರೆ, ಐಎಂಐ ಅನ್ನು ಗಳಿಕೆಗೆ ಅನುಗುಣವಾಗಿ ಹೆಚ್ಚಿಸುವ ಕೆಲಸವನ್ನು ಮಾಡಬೇಕಾಗುತ್ತದೆ.

ಈಗ ಸದ್ಯಕ್ಕೆ ಅತ್ಯಂತ ಕಡಿಮೆ ಬಡ್ಡಿ ದರಗಳಲ್ಲಿ ಗೃಹ ಸಾಲವನ್ನು ನೀಡಲಾಗುತ್ತಿದೆ. ನೀವು ಸಾಲದ ಮೇಲೆ ಹೆಚ್ಚಿನ ಬಡ್ಡಿಯನ್ನು ಪಾವತಿ ಮಾಡುವಂತಿದ್ದರೆ, ಒಮ್ಮೆ ಆಲೋಚಿಸಬೇಕಿದೆ. ಅದಕ್ಕೂ ಮುನ್ನ ಎಲ್ಲಾ ಶುಲ್ಕಗಳನ್ನು ಒಮ್ಮೆ ಪರಿಶೀಲನೆ ನಡೆಸಿ, ಗೃಹ ಸಾಲ ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂಬ ನಿರ್ಧಾರಕ್ಕೆ ನೀವು ಬರಬೇಕಾಗುತ್ತದೆ. ಗಳಿಕೆ ಶೇಕಡಾ 40ಕ್ಕಿಂತ ಹೆಚ್ಚು ಇಎಂಐ ಮೀರಿದರೆ ಬದುಕು ದುಸ್ತರವಾಗುತ್ತದೆ ಎಂಬ ಅರಿವಿರಬೇಕು.

ಇದನ್ನೂ ಓದಿ: ದೇಶದಲ್ಲಿ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ರಚಿಸುವ ಪ್ರಸ್ತಾಪವಿದೆ: ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.