ನವದೆಹಲಿ: ಸಾಮಾನ್ಯ ದಿನಗಳಲ್ಲಿ ಆಲ್ಕೋಹಾಲ್ ಉತ್ಪನ್ನಗಳು ನಕಲಿ ಬೆದರಿಕೆಯಿಂದ ಹೊರತಾಗಿಲ್ಲ. ಕೋವಿಡ್-19 ಲಾಕ್‌ಡೌನ್ ವೇಳೆ ಬೇಡಿಕೆ ಮತ್ತು ಪೂರೈಕೆಯ ಅಂತರದಿಂದಾಗಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಕಳೆದ ಒಂದು ತಿಂಗಳಲ್ಲಿ ಕಳ್ಳಸಾಗಣೆ, ಅಕ್ರಮ ಮದ್ಯ ಮಾರಾಟ ಯಥೇಚ್ಛವಾಗಿ ನಡೆಯುತ್ತಿದೆ ಎಂಬುದು ವರದಿಯಾಗಿದೆ.
ನಕಲಿ, ಗುಣಮಟ್ಟದ ಬ್ರಾಂಡ್ ಉತ್ಪನ್ನಗಳ ಪ್ಯಾಕೇಜ್ ಅನ್ನು ನಕಲು ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಾರೆ. ನಿಜವಾದ ಮದ್ಯದ ಉತ್ಪನ್ನಗಳನ್ನು ಗುರುತಿಸುವ ಸರಳ ಮಾರ್ಗಗಳಿವೆ. ದೃಢೀಕರಣ ಪರಿಹಾರ ಪೂರೈಕೆದಾರರ ಸಂಘದ (ಎಎಸ್‌ಪಿಎ) ಕಾರ್ಯದರ್ಶಿ ಚಂದರ್ ಎಸ್ ಜೀನಾ ಅವರು ಅಸಲಿ- ನಕಲಿ ಮದ್ಯ ಪತ್ತೆಹಚ್ಚುವ ವಿಧಾನಗಳಲ್ಲಿ ಪಟ್ಟಿ ಮಾಡಿದ್ದಾರೆ.
ಅಧಿಕೃತ ಮಾರಾಟಗಾರರನ್ನು ಆರಿಸಿ
ಅಧಿಕೃತ ಮಾರಾಟಗಾರರ (ಚಿಲ್ಲರೆ) ಅಂಗಡಿಯಿಂದ ಮಾತ್ರ ಖರೀದಿಸಲು ಪ್ರಯತ್ನಿಸಿ. ಆಲ್ಕೋಹಾಲ್ ಜಾಹೀರಾತುಗಳ ಆನ್‌ಲೈನ್ ವಿತರಣೆಗೆ ಬಲಿಯಾಗಬೇಡಿ. ಖರೀದಿಗೆ ತಕ್ಕಂತ ಬಿಲ್ ಪಡೆಯಿರಿ. ಆನ್‌ಲೈನ್ ವಿತರಣಾ ವ್ಯವಸ್ಥೆ ಇದ್ದರೆ ರಾಜ್ಯ ಅಬಕಾರಿ ವೆಬ್‌ಸೈಟ್‌ನಿಂದ ಮರು ಪರಿಶೀಲಿಸಿ.
ಪ್ಯಾಕೇಜ್ ಹತ್ತಿರದಿಂದ ಗಮನಿಸಿ
ಯಾವಾಗಲೂ ಪ್ಯಾಕೇಜ್ ಬಗ್ಗೆ ಹೆಚ್ಚು ಗಮನ ಹರಿಸಿ. ನಕಲಿ ಮಾಡುವವರು ನಿಕಟ ನಕಲು ತಯಾರಿಸಬಹುದು. ಅವರು ಎಷ್ಟೇ ಪ್ರಯತ್ನಿಸಿದ್ದರೂ ಮೂಲದಂತೆ ಪರಿಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ಪ್ಯಾಕೇಜಿಂಗ್‌ನಲ್ಲಿ ಬಳಸುವ ಗಾತ್ರ, ಲೋಗೊ ಮತ್ತು ಬಣ್ಣಗಳ ಗೋಚರದಲ್ಲಿ ವ್ಯತ್ಯಾಸಗಳಿವೆ. ಈ ವ್ಯತ್ಯಾಸ ಪಠ್ಯದಷ್ಟು ಚಿಕ್ಕದಾಗಿರಬಹುದು. ಲೋಗೋದಲ್ಲಿ ಸ್ವಲ್ಪ ಬದಲಾವಣೆ ಆಗಬಹುದು.
ಉದಾಹರಣೆಗೆ: ಜಾನಿ ವಾಕರ್ ಹೆಸರನ್ನು 'ie' ಮತ್ತು 'noty' ಜೊತೆ ಇರಬಾರದು. ಚಿವಾಸ್ ರೀಗಲ್ ಇದ್ದಕ್ಕಿದ್ದಂತೆ ಚಿವಾಸ್ ರಿಗಲ್ ಆಗಿ ಬದಲಾಗುತ್ತೆ.
ಸರ್ಕಾರಿ ತೆರಿಗೆ ಚಿಹ್ನೆಗಳನ್ನು ಪರಿಶೀಲಿಸಿ: ಸರ್ಕಾರದ ದೃಢೀಕರಣ ವೈಶಿಷ್ಟ್ಯಗಳನ್ನು ಪರಿಶೀಲಿಸಿ. ಬಹುತೇಕ ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ತೆರಿಗೆ ಅಂಚೆಚೀಟಿಗಳು ಹೊಂದಿರುತ್ತವೆ. ಇದು ನಕಲಿ ವಿರೋಧಿ ವೈಶಿಷ್ಟ್ಯ ಹೊಂದಿವೆ (ಉದಾ: ಸೆಕ್ಯುರಿಟಿ ಹೊಲೊಗ್ರಾಮ್/ ಕ್ಯೂಆರ್ ಕೋಡ್ ಪೇಪರ್ ಲೇಬಲ್).
ಉತ್ಪಾದನೆ, ಕೊನೆಯ ದಿನಾಂಕ ಪರಿಶೀಲಿಸಿ: ನಕಲಿ ಮದ್ಯದ ಬಗ್ಗೆ ಭಯಾನಕ ಕಾರ್ಯವೆಂದರೇ ಮಾರಾಟಗಾರರು ಬಾರ್ ಮತ್ತು ಕ್ಲಬ್‌ಗಳಿಂದ ಖಾಲಿ ಬಾಟಲಿಗಳನ್ನು ಮರಳಿ ಖರೀದಿಸುತ್ತಾರೆ. ನಂತರ ಆ ಬಾಟಲಿಗಳಲ್ಲಿ ನಿಷಿದ್ಧ ದ್ರವ ತುಂಬುತ್ತಾರೆ. ದಿನಾಂಕವು ಬಹಳ ಹಿಂದಿನದ್ದು, ಆಗಿದ್ದರೇ ಅದು ಮರುಬಳಕೆಯ ಬಾಟಲಿ ಆಗಿರಬಹುದು.