ETV Bharat / business

ಸ್ಪಷ್ಟೀಕರಣ ನೀಡುವ ಮುನ್ನವೇ ಗೂಗಲ್ ಪ್ಲೇ, ಆ್ಯಪಲ್ ಆ್ಯಪ್ ಸ್ಟೋರ್​ನಿಂದ ಟಿಕ್​ಟಾಕ್​ ಡಿಲೀಟ್​

ಟಿಕ್​ಟಾಕ್ ಬ್ಯಾನ್​ ಆದೇಶದ ಕುರಿತು ಪ್ರತಿಕ್ರಿಯೆ ಹಾಗೂ ಸ್ಪಷ್ಟೀಕರಣ ನೀಡುವಂತೆ ಸರ್ಕಾರ ಸೂಚಿಸಿರುವುದಾಗಿ ಟಿಕ್‌ಟಾಕ್ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ಹೇಳಿದ್ದಾರೆ. ಇದಕ್ಕೂ ಮುನ್ನವೇ ಗೂಗಲ್ ಪ್ಲೇ, ಆ್ಯಪಲ್ ಆ್ಯಪ್ ಸ್ಟೋರ್​ನಿಂದ ಟಿಕ್​ಟಾಕ್​ ಅನ್ನು ಡಿಲೀಟ್​ ಮಾಡಲಾಗಿದೆ.

TikTok
ಟಿಕ್​ಟಾಕ್
author img

By

Published : Jun 30, 2020, 12:30 PM IST

ನವದೆಹಲಿ: "ಭಾರತೀಯ ಕಾನೂನಿನಡಿಯಲ್ಲಿ ಡೇಟಾಗಳ ಗೌಪ್ಯತೆ ಮತ್ತು ಭದ್ರತಾ ನಿಯಮಗಳನ್ನು ಅನುಸರಿಸಿಕೊಂಡು ಬಂದಿದ್ದೇವೆ. ಭಾರತದ ಬಳಕೆದಾರರ ಯಾವುದೇ ಮಾಹಿತಿಯನ್ನು ಚೀನಾ ಸರ್ಕಾರ ಸೇರಿದಂತೆ ಯಾವುದೇ ವಿದೇಶಿ ಸರ್ಕಾರದೊಂದಿಗೆ ಹಂಚಿಕೊಂಡಿಲ್ಲ" ಎಂದು ಟಿಕ್​ಟಾಕ್​​ ಹೇಳಿದೆ.

ಪೂರ್ವ ಲಡಾಖ್​ನ ಗಾಲ್ವಾನ್​ ಗಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 22 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವಂತೆ ದೇಶದೆಲ್ಲೆಡೆ ಕೂಗು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ರಾಷ್ಟ್ರೀಯ ಭದ್ರತೆ ಮತ್ತು ಗೌಪ್ಯತೆ ದೃಷ್ಟಿಯಿಂದ ಭಾರತ ಸರ್ಕಾರ ಸೋಮವಾರ ಟಿಕ್​ಟಾಕ್, ಯುಸಿ ಬ್ರೌಸರ್​​​ ಸೇರಿದಂತೆ ಚೀನಾದ 59 ಆ್ಯಪ್​ಗಳನ್ನು​ ಬ್ಯಾನ್​ ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ಪ್ರತಿಕ್ರಿಯೆ ಹಾಗೂ ಸ್ಪಷ್ಟೀಕರಣ ನೀಡುವಂತೆ ಸರ್ಕಾರ ಸೂಚಿಸಿರುವುದಾಗಿ ಟಿಕ್‌ಟಾಕ್ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ಹೇಳಿದ್ದಾರೆ.

ನಾವು ಬಳಕೆದಾರರ ಮಾಹಿತಿಯ ಗೌಪ್ಯತೆ ಮತ್ತು ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಭವಿಷ್ಯದಲ್ಲಿ ಇದನ್ನು ಮುಂದುವರೆಸಿಕೊಂಡು ಹೋಗಲು ಸಿದ್ಧರಿದ್ದೇವೆ ಎಂದು ನಿಖಿಲ್ ಗಾಂಧಿ ತಿಳಿಸಿದ್ದಾರೆ.

TikTok
ಗೂಗಲ್ ಪ್ಲೇ ಸ್ಟೋರ್‌ನಿಂದ ಡಿಲೀಟ್​ಟಿಕ್​ಟಾಕ್

ಗೂಗಲ್ ಪ್ಲೇ, ಆ್ಯಪಲ್ ಆ್ಯಪ್ ಸ್ಟೋರ್​ನಿಂದ ಟಿಕ್​ಟಾಕ್​ ಡಿಲೀಟ್​:

ಚೀನಾದ 59 ಆ್ಯಪ್​ಗಳನ್ನು​ ಬ್ಯಾನ್​ ಮಾಡಿ ಭಾರತ ಸರ್ಕಾರದ ಆದೇಶ ನೀಡಿದ ಮರುದಿನವೇ ಟಿಕ್​ಟಾಕ್​ ಅನ್ನು ಭಾರತದ ಗೂಗಲ್ ಪ್ಲೇ, ಆ್ಯಪಲ್ ಆ್ಯಪ್ ಸ್ಟೋರ್​ನಿಂದ ತೆಗೆದುಹಾಕಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನೀವೀಗ ಟಿಕ್​ಟಾಕ್ ಆ್ಯಪ್​ ಹುಡುಕಿದರೆ 'ಈ ಐಟಂ ನಿಮ್ಮ ದೇಶದಲ್ಲಿ ಲಭ್ಯವಿಲ್ಲ' ಎಂಬ ಸಂದೇಶ ಬರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.