ನವದೆಹಲಿ: 2021ರ ಕೇಂದ್ರ ಬಜೆಟ್ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ್ದು, ಕೊರೊನಾ ಕಾಟದಿಂದ ಸಂಕಷ್ಟಕ್ಕೊಳಗಾದ ಹಲವು ಕ್ಷೇತ್ರಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಮಧ್ಯೆ ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವ ಸಚಿವರು, ಕಳೆದ ಬಾರಿಯಂತೆಯೇ ಈ ವರ್ಷವೂ ಮುಂದುವರಿಯಲಿದೆ ಎಂದಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಸಹ 2.5 ಲಕ್ಷ ರೂ. ಆದಾಯದವರೆಗೆ ತೆರಿಗೆ ವಿನಾಯತಿ ನೀಡಲಾಗಿದ್ದು, 2.5 ರಿಂದ 5 ಲಕ್ಷದ ವರೆಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ, 5 ರಿಂದ 7.5 ಲಕ್ಷ ರೂ.ಗೆ ಶೇ.10ರಷ್ಟು ತೆರಿಗೆ, 7.5 ರಿಂದ10 ಲಕ್ಷ ಆದಾಯಕ್ಕೆ ಶೇ.15ರಷ್ಟು, 10 ರಿಂದ12.5 ಲಕ್ಷ ರೂ.ಗೆ ಶೇ. 20ರಷ್ಟು ಹಾಗೂ 15 ಲಕ್ಷಕ್ಕೂ ಅಧಿಕ ಆದಾಯಕ್ಕೆ ಶೇ. 30ರಷ್ಟು ತೆರಿಗೆ ಸ್ಲ್ಯಾಬ್ ವಿಧಿಸಲಾಗಿದೆ.
ತೆರಿಗೆ ದರ ಎಷ್ಟೆಷ್ಟು?
- 2.5 ಲಕ್ಷ ರೂಪಾಯಿ - ತೆರಿಗೆ ಇಲ್ಲ
- 2.5 - 5 ಲಕ್ಷ ರೂಪಾಯಿ - 5%
- 5 -7.5 ಲಕ್ಷ ರೂಪಾಯಿ - 10%
- 10 - 12.5 ಲಕ್ಷ ರೂಪಾಯಿ - 20%
- 12.5 - 15 ಲಕ್ಷ ರೂಪಾಯಿ - 25%