ETV Bharat / business

ಬೃಹತ್ ಟ್ಯಾಕ್ಸ್​ ಕೇಸ್​ಗಳು ಬಯಲು : 187 ಜನ ಬಂಧನ, ಕೋಟಿ ಕೋಟಿ ಹಣ ಲೂಟಿ!

ನಾವು 1.20 ಕೋಟಿ ತೆರಿಗೆ ಪಾವತಿದಾರರ ಪೈಕಿ 7,000 ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ನಮ್ಮ ಯಶಸ್ಸಿನ ಪ್ರಮಾಣ ಹೆಚ್ಚಾಗಿದೆ. ಏಪ್ರಿಲ್ 1 ರಿಂದ 5 ಕೋಟಿ ರೂ. ವಹಿವಾಟು ಹೊಂದಿರುವ ವ್ಯವಹಾರಗಳಿಂದ ಇ-ಇನ್‌ವಾಯ್ಸ್ ಕಡ್ಡಾಯಗೊಳಿಸಲಾಗುವುದು..

GST evaders
ತೆರಿಗೆ ವಂಚನೆ
author img

By

Published : Jan 4, 2021, 6:48 PM IST

ನವದೆಹಲಿ : ತೆರಿಗೆ ಅಧಿಕಾರಿಗಳು 2020ರ ಡಿಸೆಂಬರ್‌ನಲ್ಲಿ 7,000 ಘಟಕಗಳ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲಿಸಿಕೊಂಡು 187 ಆರೋಪಿತರನ್ನು ಬಂಧಿಸಿದ್ದಾರೆ ಎಂದು ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.

ಬಂಧನಕ್ಕೊಳಗಾದ 187 ಜನರಲ್ಲಿ ಐವರು ಚಾರ್ಟರ್ಡ್ ಅಕೌಂಟೆಂಟ್‌ ಮತ್ತು ಒಬ್ಬ ಕಂಪನಿಯ ಕಾರ್ಯದರ್ಶಿ ಆಗಿದ್ದಾರೆ. ನಕಲಿ ಇನ್​ವಾಯ್ಸ್​ ದಂಧೆಯಲ್ಲಿ ಸಿಲುಕಿರುವ ದೊಡ್ಡ ಕಂಪನಿಗಳು ಕೂಡ ಸೇರಿವೆ. ಆ ಮೂಲಕ ಜಿಎಸ್​ಟಿ ಮತ್ತು ಆದಾಯ ತೆರಿಗೆ ಪಾವತಿಯಲ್ಲಿ ಮೋಸ ಎಸಗುತ್ತಿದ್ದಾರೆ ಎಂದು ಹಣಕಾಸು ಕಾರ್ಯದರ್ಶಿ ಬಹಿರಂಗಪಡಿಸಿದ್ದಾರೆ.

ಕೆಲವು ವ್ಯವಸ್ಥಾಪಕ ನಿರ್ದೇಶಕರು ಸೇರಿ ಹಲವರು ಕಳೆದ 40-50 ದಿನಗಳಿಂದ ಜೈಲಿನಲ್ಲಿದ್ದಾರೆ. ಕೆಲ ದೊಡ್ಡ ಕಂಪನಿಗಳು ನಕಲಿ ಬಿಲ್ ಪ್ರಕರಣಗಳಲ್ಲಿ ತೊಡಗಿಸಿಕೊಂಡಿವೆ. ಇದರಿಂದ ಜಿಎಸ್‌ಟಿ ಮತ್ತು ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರ ಮೇಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: ಝೀ ಗ್ರೂಪ್​ ಸಂಸ್ಥೆ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ, ಕಡತಗಳ ಶೋಧನೆ

ಆದಾಯ ತೆರಿಗೆ ಇಲಾಖೆ, ಕಸ್ಟಮ್ಸ್ ಘಟಕ, ಎಫ್‌ಐಯು, ಜಿಎಸ್‌ಟಿ ಇಲಾಖೆ ಮತ್ತು ಬ್ಯಾಂಕ್​ಗಳಿಂದ ಪಡೆದ ಮಾಹಿತಿಯಿಂದ ತೆರಿಗೆ ವಂಚಕರನ್ನು ಬಂಧಿಸಲು ಸಾಧ್ಯವಾಯಿತು. ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಏಜೆನ್ಸಿ ಹಿಂದೆ ಸರಿಯುವುದಿಲ್ಲ. ಅನೇಕ ತೆರಿಗೆ ವಂಚನೆ ಎಸಗುವವರು ಮಾಹಿತಿಯನ್ನು ಏಜೆನ್ಸಿಗಳಿಂದ ಕಲೆ ಹಾಕಲಾಗುತ್ತಿದೆ ಎಂದು ಪಾಂಡೆ ಹೇಳಿದರು.

ನಾವು 1.20 ಕೋಟಿ ತೆರಿಗೆ ಪಾವತಿದಾರರ ಪೈಕಿ 7,000 ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ನಮ್ಮ ಯಶಸ್ಸಿನ ಪ್ರಮಾಣ ಹೆಚ್ಚಾಗಿದೆ. ಏಪ್ರಿಲ್ 1 ರಿಂದ 5 ಕೋಟಿ ರೂ. ವಹಿವಾಟು ಹೊಂದಿರುವ ವ್ಯವಹಾರಗಳಿಂದ ಇ-ಇನ್‌ವಾಯ್ಸ್ ಕಡ್ಡಾಯಗೊಳಿಸಲಾಗುವುದು ಎಂದು ಕಂದಾಯ ಕಾರ್ಯದರ್ಶಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.