ETV Bharat / business

ಕೇಂದ್ರ ಕಂದಾಯ ಇಲಾಖೆಗೆ ತರುಣ್, ಆರ್ಥಿಕ ಇಲಾಖೆಗೆ ಅಜಯ್ ಸೇಠ್ ಕಾರ್ಯದರ್ಶಿ

ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ತನ್ನ ಆದೇಶದಲ್ಲಿ ತರುಣ್​​ ಬಜಾಜ್ ಅವರನ್ನು ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲು ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದಸಿದೆ ಎಂದು ತಿಳಿಸಿದೆ..

Tarun Bajaj takes charge of revenue, BMRC's Ajay Seth joins economic affairs
ಕೇಂದ್ರ ಕಂದಾಯ ಇಲಾಖೆಗೆ ತರುಣ್, ಆರ್ಥಿಕ ಇಲಾಖೆಗೆ ಅಜಯ್ ಸೇಠ್ ಕಾರ್ಯದರ್ಶಿ
author img

By

Published : Apr 6, 2021, 10:58 PM IST

ನವದೆಹಲಿ: ಪ್ರಮುಖ ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ. ಹಾಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಅವರನ್ನು ಹೊಸ ಕಂದಾಯ ಕಾರ್ಯದರ್ಶಿಯಾಗಿ ಮಂಗಳವಾರ ನೇಮಕ ಮಾಡಲಾಗಿದೆ.

ತರುಣ್ ಬಜಾಜ್ ಬದಲಿಗೆ ಅಜಯ್ ಸೇಠ್ ಹೊಸ ಆರ್ಥಿಕ ಕಾರ್ಯದರ್ಶಿಯಾಗಲಿದ್ದಾರೆ. 1987ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಸೇಠ್ ಪ್ರಸ್ತುತ ತಮ್ಮ ಕೇಡರ್ ರಾಜ್ಯ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಹರಿಯಾಣ ಕೇಡರ್ ಅಧಿಕಾರಿಯಾಗಿದ್ದ ತರುಣ್ ಬಜಾಜ್ ಅವರು ಅಜಯ್ ಭೂಷಣ್ ಪಾಂಡೆ ಅವರ ನಿವೃತ್ತಿಯ ನಂತರ ಆರ್ಥಿಕ ಕಾರ್ಯದರ್ಶಿಯಾಗಿ ಹೆಚ್ಚುವರಿ ಉಸ್ತುವಾರಿ ವಹಿಸಿದ್ದರು.

ಇದನ್ನೂ ಓದಿ: ರಾಜ್ಯಾದ್ಯಂತ ನಾಲ್ಕು ಸಾರಿಗೆ ನಿಗಮಗಳ ಬಸ್​​ ಸ್ಥಗಿತ: ನಾಳೆ ನಿಲ್ದಾಣಕ್ಕೆ ಬರೋ ಮುನ್ನ ಎಚ್ಚರ.. ಎಚ್ಚರ!

ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ತನ್ನ ಆದೇಶದಲ್ಲಿ ತರುಣ್​​ ಬಜಾಜ್ ಅವರನ್ನು ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲು ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದಸಿದೆ ಎಂದು ತಿಳಿಸಿದೆ.

ಇನ್ನು, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವಿಶೇಷ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ ಅಲಿ ರಾಜಾ ರಿಜ್ವಿ ಸಾರ್ವಜನಿಕ ಉದ್ಯಮಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.