ETV Bharat / business

ಹಳೆ ವಾಹನಗಳಿಗೆ ಶೇ 10-15ರಷ್ಟು ಹಸಿರು ತೆರಿಗೆ ವಿಧಿಸುವ ಹೊಣೆ ರಾಜ್ಯಗಳ ಹೆಗಲಿಗೆ: ಗಡ್ಕರಿ - ಲೋಕಸಭೆಯಲ್ಲಿ ನಿತಿನ್ ಗಡ್ಕರಿ

ವಾಯುಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ 15 ವರ್ಷ ಹಳೆಯದಾದ ಖಾಸಗಿ ವಾಹನಗಳಿಗೆ ಶೇ 10-15ರಷ್ಟು ಹಸಿರು ತೆರಿಗೆ ವಿಧಿಸುವುದನ್ನು ಪ್ರಸ್ತಾಪಿಸಲಾಗಿದೆ. ಇದರ ಜತೆಗೆ 8 ವರ್ಷ ಹಳೆಯದಾದ ವಾಣಿಜ್ಯ ವಾಹನಗಳಿಗೂ ತೆರಿಗೆ ಹೇರುವುದನ್ನು ಸೇರಿಸಲಾಗಿದೆ. ತೆರಿಗೆ ವಿಧಿಸುವ ಅಧಿಕಾರವನ್ನು ನಾವು ರಾಜ್ಯಗಳಿಗೆ ನೀಡುಬೇಕು ಎಂದುಕೊಂಡಿದ್ದೇವೆ ಎಂದು ನಿತಿನ್ ಗಡ್ಕರಿ ಹೇಳಿದರು.

ಗಡ್ಕರಿ
ಗಡ್ಕರಿ
author img

By

Published : Mar 25, 2021, 12:45 PM IST

Updated : Mar 25, 2021, 1:25 PM IST

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟ ನಿಯಂತ್ರಿಸುವ ಉದ್ದೇಶದಿಂದ ಹಳೆಯ ಮಾಲಿನ್ಯಕಾರಕ ವಾಹನಗಳ ಮೇಲೆ ಹಸಿರು ತೆರಿಗೆ ವಿಧಿಸುವುದನ್ನು ಸರ್ಕಾರ ಪ್ರಸ್ತಾಪಿಸಿದೆ. ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳಿಗೆ ನೀಡುತ್ತೇವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು, ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಬನೆ ತಗ್ಗಿಸಿ ಪರ್ಯಾಯ ಇಂಧನದತ್ತ ಸರ್ಕಾರ ನಾನಾ ತಜ್ಞರು ಹಾಗೂ ಸಂಸ್ಥೆಗಳ ಜತೆ ಚರ್ಚಿಸುತ್ತಿದೆ. ಸಮುದ್ರದಿಂದ ಹೈಡ್ರೋಜನ್ ತೆಗೆಯುವ ಪ್ರಯೋಗದಲ್ಲಿ ಚೆನ್ನೈ ಐಐಟಿ ಯಶಸ್ವಿಯಾಗಿದೆ. ಅವರೊಂದಿಗೆ ಸಚಿವಾಲಯ ಮಾತುಕತೆ ನಡೆಸುತ್ತಿದೆ. ಶೀಘ್ರವೇ ಪರ್ಯಾದ ತೈಲಗಳು ದೇಶದಲ್ಲಿ ಲಭ್ಯವಾಗಲಿವೆ ಎಂದರು.

ವಾಯುಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ 15 ವರ್ಷ ಹಳೆಯದಾದ ಖಾಸಗಿ ವಾಹನಗಳಿಗೆ ಶೇ 10-15ರಷ್ಟು ಹಸಿರು ತೆರಿಗೆ ವಿಧಿಸುವುದನ್ನು ಪ್ರಸ್ತಾಪಿಸಲಾಗಿದೆ. ಇದರ ಜತೆಗೆ 8 ವರ್ಷ ಹಳೆಯದಾದ ವಾಣಿಜ್ಯ ವಾಹನಗಳಿಗೂ ತೆರಿಗೆ ಹೇರುವುದನ್ನು ಸೇರಿಸಲಾಗಿದೆ. ತೆರಿಗೆ ವಿಧಿಸುವ ಅಧಿಕಾರವನ್ನು ನಾವು ರಾಜ್ಯಗಳಿಗೆ ನೀಡುಬೇಕು ಎಂದು ಕೊಂಡಿದ್ದೇವೆ. ಅದನ್ನು ಹೇಗೆ ಕಾರ್ಯರೂಪಕ್ಕೆ ತರಬಹುದು ಎಂಬದನ್ನು ಚರ್ಚಿಸುವ ಜವಾಬ್ದಾರಿ ಸಲಹಾ ಸಮಿತಿಗೆ ವಹಿಸಲಾಗಿದೆ ಎಂದು ಹೇಳಿದರು.

ಲೋಕಸಭೆಯಲ್ಲಿ ಮಾತನಾಡಿದ ನಿತಿನ್ ಗಡ್ಕರಿ

ಇದನ್ನೂ ಓದಿ: ಕಡ್ಡಾಯವಾಗಿ ಸಾಫ್ಟ್‌ವೇರ್ ಪ್ರೋಗ್ರಾಂ ಬಳಸಿ ಆಡಿಟ್ ಮಾಡುವಂತೆ ಕಂಪನಿಗಳಿಗೆ ಆದೇಶ

ದೇಶದಲ್ಲಿ ಪರಿಸ್ಥಿ ಬಹುಗಂಭಿರವಾಗಿದೆ. ಒಂದು ಕಡೆ ವಾಯುಮಾಲಿನ್ಯ ಸಮಸ್ಯೆ ಇದ್ದರೇ ಮತ್ತೊಂದು ಕಡೆ ಬಡವರು ಈಗಾಗಲೇ ಸಾಕಷ್ಟು ಆರ್ಥಿಕ ಹೊರೆಯನ್ನು ಎದುರಿಸುತ್ತಿದ್ದಾರೆ. ಈ ಎರಡನ್ನೂ ಗಮನದಲ್ಲಿ ಇರಿಸಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಭಾರತದಲ್ಲಿ ಜನಸಂಖ್ಯೆ ಮತ್ತು ವಾಹನ ಸಂಖ್ಯೆ ಅತ್ಯಂಕ ವೇಗವಾಗಿ ಬೆಳೆಯುತ್ತಿದೆ. ಮನೆಯಲ್ಲಿ ಮೂರು ಜನ ಸದಸ್ಯರು ಇದ್ದರೇ ನಾಲ್ಕು ವಾಹನಗಳು ಇರುತ್ತವೆ. ಪಾರ್ಕಿಂಗ್​ಗೆ ಜಾಗವಿಲ್ಲದೆ ರಸ್ತೆಯಲ್ಲಿ ನಿಲ್ಲಿಸಬೇಕಾದ ಪರಿಸ್ಥಿತಿ ಇದೆ. ಜನರಿಗೆ ಸಾರ್ವಜನಿಕ ವಾಹನ ಬಳಸುವಂತೆ ಪ್ರೇರೇಪಿಸಬೇಕಿದೆ ಎಂದು ಹೇಳಿದರು.

Last Updated : Mar 25, 2021, 1:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.