ಹೈದರಾಬಾದ್ : ರಷ್ಯಾದ ಕೋವಿಡ್-19 ಲಸಿಕೆ 'ಸ್ಪುಟ್ನಿಕ್ ವಿ'ನ 30 ಲಕ್ಷ ಡೋಸ್‌ಗಳನ್ನು ಹೊತ್ತ ವಿಮಾನ ಮಂಗಳವಾರ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ರಷ್ಯಾದಿಂದ ವಿಶೇಷ ಚಾರ್ಟರ್ಡ್ ಸರಕು ಸಾಗಣೆ ಆರ್‌ಯು-9450 ವಿಮಾನ ಲಸಿಕೆಗಳನ್ನು ಹೊತ್ತು ತಂದಿದೆ. ಇದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 03.43 ಗಂಟೆಗೆ ತಲುಪಿತು ಎಂದು ಜಿಎಂಆರ್ ಹೈದರಾಬಾದ್ ಏರ್ ಕಾರ್ಗೋ (ಜಿಎಚ್‌ಎಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ಜಿಹೆಚ್‌ಎಸಿ ಈಗಾಗಲೇ ಹಲವು ಲಸಿಕೆಗಳ ಆಮದು ಸಾಗಣೆ ನಿಭಾಯಿಸಿದ್ದರೂ, ಇಂದಿನ ದಿನಗಳಲ್ಲಿ 56.6 ಟನ್ ಲಸಿಕೆಗಳನ್ನು ರವಾನಿಸುವುದು ಭಾರತದಲ್ಲಿ ಈವರೆಗೆ ನಿರ್ವಹಿಸಲಾದ ಕೋವಿಡ್-19 ಲಸಿಕೆಗಳ ಏಕೈಕ ಅತಿದೊಡ್ಡ ಆಮದು ಸಾಗಣೆಯಾಗಿದೆ. ಈ ಸಾಗಣೆಯು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, 90 ನಿಮಿಷಗಳಲ್ಲಿ ತ್ವರಿತವಾಗಿ ವಿಲೇವಾರಿ ಮಾಡಲಾಯಿತು ಎಂದು ಹೇಳಿದೆ.
ಇದನ್ನೂ ಓದಿ: ಮೇ ತಿಂಗಳಲ್ಲಿ ಮಾರುತಿ ಸುಜುಕಿ ವಾಹನ ಮಾರಾಟ ಶೇ 71ರಷ್ಟು ಇಳಿಕೆ!
ಸ್ಪುಟ್ನಿಕ್ ವಿ ಲಸಿಕೆಗೆ ವಿಶೇಷ ನಿರ್ವಹಣೆ ಮತ್ತು ಸಂಗ್ರಹಣೆಯ ಅಗತ್ಯವಿದೆ. ಇದನ್ನು ಮೈನಸ್ 20 ಡಿಗ್ರಿ ತಾಪಮಾನದಲ್ಲಿ ಇಡಬೇಕಾಗುತ್ತದೆ. ಸುಗಮ ನಿರ್ವಹಣೆಗಾಗಿ ಏರ್ ಕಾರ್ಗೋ ಟರ್ಮಿನಲ್‌ನಲ್ಲಿ ಲಸಿಕೆ ಸಾಗಾಟಕ್ಕೆ ಅಗತ್ಯ ಮೂಲಸೌಕರ್ಯ ಮತ್ತು ನಿರ್ವಹಣಾ ಪ್ರಕ್ರಿಯೆಗಳು ಸಂಪೂರ್ಣ ಜಾರಿಯಲ್ಲಿವೆ.
ಇದನ್ನು ಖಚಿತಪಡಿಸಿಕೊಳ್ಳಲು ಜಿಹೆಚ್‌ಎಸಿ ಗ್ರಾಹಕರ ಪೂರೈಕೆ ಸರಪಳಿ ತಂಡದ ತಜ್ಞರು, ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದೆ.
ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ ಭಾರತದಲ್ಲಿ ಸ್ಪುಟ್ನಿಕ್ ವಿ ಮೊದಲ 125 ಮಿಲಿಯನ್ ಪ್ರಮಾಣವನ್ನು (250 ಮಿಲಿಯನ್ ಬಾಟಲುಗಳು) ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದೆ.
ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಸ್ಪುಟ್ನಿಕ್ ವಿ ತುರ್ತು ಬಳಕೆಗಾಗಿ ಭಾರತೀಯ ಔಷಧ ನಿಯಂತ್ರಕದಿಂದ ಅನುಮೋದನೆ ಪಡೆದಿದೆ.