ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಕಂಡು ಬಂದ ನಷ್ಟದ ವ್ಯವಹಾರ ಮುಂಬೈ ಷೇರು ಮಾರುಕಟ್ಟೆ ಮೇಲೆಯೂ ಆಗಿದೆ. ಪರಿಣಾಮ ಮುಂಬೈ ಷೇರುಮಾರುಕಟ್ಟೆ ಸೆನ್ಸೆಕ್ಸ್ ಆರಂಭಿಕ ವ್ಯವಹಾರದಲ್ಲಿ 300 ಅಂಕಗಳನ್ನ ಕಳೆದುಕೊಂಡು ನಷ್ಟದಿಂದಲೇ ದಿನದ ವಹಿವಾಟು ಆರಂಭಿಸಿತು.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 307.31 ಪಾಯಿಂಟ್ ಇಳಿಕೆ ಕಂಡು 37,833.16ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 83.10 ಪಾಯಿಂಟ್‌ಗಳು ನಷ್ಟ ಹೊಂದುವ ಮೂಲಕ 11,132.35ಕ್ಕೆ ತಲುಪಿತ್ತು. ಮಧ್ಯಾಹ್ನ 1 ಗಂಟೆ ವೇಳೆಯಲ್ಲೂ ಸೆನ್ಸೆಕ್ಸ್ 244 ಅಂಕ ಕಳೆದುಕೊಂಡು, 37,899.71 ಅಂಕಗಳೊಂದಿಗೆ ವ್ಯವಹಾರ ಮುಂದುವರೆಸಿತ್ತು.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಎಚ್‌ಡಿಎಫ್‌ಸಿ ಅಗ್ರಸ್ಥಾನದಲ್ಲಿದ್ದು, ಆಕ್ಸಿಸ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಕೊಟಾಕ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ನಂತರದ ಸ್ಥಾನದಲ್ಲಿದೆ.
ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್, ಟೆಕ್ ಮಹೀಂದ್ರಾ ಮತ್ತು ಇನ್ಫೋಸಿಸ್ ಷೇರುಗಳು ಲಾಭ ಗಳಿಸಿವೆ.