ಮುಂಬೈ: ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಮೋಡಕವಿದ ವಾತಾವರಣ ಕಂಡುಬಂದಿದೆ. ರಾಷ್ಟ್ರೀಯ ಷೇರು ವಿನಿಮಯ ಪೇಟೆಯಲ್ಲೂ ಶುಕ್ರವಾರ ವಹಿವಾಟು ಡಲ್ ಹೊಡೆದಿದೆ. ನಿಫ್ಟಿ ಬೆಳಗಿನ ವ್ಯವಹಾರದಲ್ಲಿ 1 ಅಂಕಗಳ ಏರಿಕೆ ಕಂಡು 12,987 ಅಂಕದಲ್ಲಿ ವಹಿವಾಟು ನಡೆಸುತ್ತಿದೆ. 2;30 ರ ವೇಳೆಗೆ ಬಿಎಸ್ಸಿ 60 ಅಂಕಗಳ ಕುಸಿತ ಕಂಡು ವ್ಯವಹಾರ ನಡೆಸುತ್ತಿತ್ತು.
30 ಷೇರುಗಳ ಬಿಎಸ್‌ಇ ಸೂಚ್ಯಂಕವು 25.74 ಪಾಯಿಂಟ್‌ಗಳು ಅಥವಾ 0.06 ರಷ್ಟು ಹೆಚ್ಚಳವಾಗಿ 44,285.48ಕ್ಕೆ ವಹಿವಾಟು ನಡೆಸುತ್ತಿದೆ.ಅದೇ ರೀತಿ ಎನ್‌ಎಸ್‌ಇ ನಿಫ್ಟಿ 17.60 ಪಾಯಿಂಟ್ ಅಥವಾ 0.14 ರಷ್ಟು ಕುಸಿದು 13,004.60ಕ್ಕೆ ತಲುಪಿದೆ.
ಎನ್‌ಟಿಪಿಸಿ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಶೇ.2 ರಷ್ಟು ಏರಿಕೆ ಕಂಡಿದ್ದು, ನಂತರದ ಸ್ಥಾನದಲ್ಲಿ ಬಜಾಜ್ ಆಟೋ, ಮಾರುತಿ, ಟೆಕ್ ಮಹೀಂದ್ರಾ, ಎಲ್ ಆಂಡ್ ಟಿ, ಏಷ್ಯನ್ ಪೇಂಟ್ಸ್ ಮತ್ತು ಬಜಾಜ್ ಫೈನಾನ್ಸ್ ಸೇರಿವೆ. ಮತ್ತೊಂದೆಡೆ, ಪವರ್‌ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಿಸಿಎಸ್ ಹಿಂದುಳಿದವು.
ಹಿಂದಿನ ಅಧಿವೇಶನದಲ್ಲಿ ಸೆನ್ಸೆಕ್ಸ್ 431.64 ಪಾಯಿಂಟ್ ಅಥವಾ 0.98 ರಷ್ಟು ಹೆಚ್ಚಳವಾಗಿ 44,259.74ಕ್ಕೆ ತಲುಪಿತ್ತು. ನಿಫ್ಟಿ 128.60 ಪಾಯಿಂಟ್ ಅಥವಾ ಶೇ.1ಕ್ಕೆ ಏರಿಕೆ ಕಂಡು 12,987ಕ್ಕೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಏರಿಳಿತ ಉಂಟಾದ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಪ್ರಭಾವ ಬೀರಿದೆ. ಆದರೆ ಒಟ್ಟಾರೆ ಮಾರುಕಟ್ಟೆ ಪರಿಸ್ಥಿತಿ ಗಮನಿಸಿದರೆ ಆತಂಕ ಪಡಬೇಕಾಗಿಲ್ಲ, ದಿನಕಳೆದಂತೆ ಇದು ಕುದುರಿಕೊಳ್ಳಬಹುದು ಎಂದು ಷೇರುಪೇಟೆ ತಜ್ಞರು ವಿಶ್ಲೇಷಿಸಿದ್ದಾರೆ.