ಮುಂಬೈ: ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ ಧನಾತ್ಮಕತೆ ಮತ್ತು ಹೆಚ್ಚಿದ ವಿದೇಶಿ ಬಂಡವಾಳದ ಒಳಹರಿವು ಇವೇ ಮೊದಲಾದ ಕಾರಣಗಳಿಗೆ ಮುಂಬೈ ಷೇರು ಪೇಟೆ ಶುಕ್ರವಾರದ ಅಂತ್ಯದ ವಹಿವಾಟಿನಲ್ಲಿ 127 ಅಂಕಗಳ ಜಿಗಿತ ದಾಖಲಿಸಿದೆ.
ದಿನದಾಂತ್ಯಕ್ಕೆ ಸೆನ್ಸೆಕ್ಸ್ 127.19 ಅಂಕಗಳ ಮುನ್ನಡೆ ಕಾಯ್ದುಕೊಂಡು 38,672 ಅಂಕಗಳ ಮಟ್ಟದಲ್ಲೂ, ನಿಫ್ಟಿ 53.90 ಅಂಕಗಳ ಮುನ್ನಡೆಯನ್ನು ಉಳಿಸಿಕೊಂಡು 11,623 ಅಂಕಗಳ ಮಟ್ಟದಲ್ಲೂ ವ್ಯವಹಾರವನ್ನು ಆಶಾದಾಯಕವಾಗಿ ಮುಕ್ತಾಯಗೊಳಿಸಿತು.
ಡಾಲರ್ ಎದುರು ರೂಪಾಯಿ ಇಂದಿನ ವಹಿವಾಟಿನಲ್ಲಿ 12 ಪೈಸೆಗಳ ಏರಿಕೆ ದಾಖಲಿಸಿ ₹ 69.21 ಮಟ್ಟದಲ್ಲಿ ವ್ಯವಹಾರ ನಡೆಸಿತು.
ಇಂದಿನ ವಹಿವಾಟಿನಲ್ಲಿ ಎಟಿಪಿಸಿ, ಟಿಸಿಎಸ್, ಇನ್ಫಿ, ವೆದಲ್, ಒಎನ್ಜಿಸಿ, ಟಾಟಾ ಸ್ಟೀಲ್, ಹಿಂದೂಯೂನಿಲಿವರ್, ಎಲ್ಟಿ, ರಿಲಯನ್ಸ್, ಟಾಟಾ ಮೋಟಾರ್ಸ್, ಎಚ್ಸಿಎಲ್ ಟೆಕ್, ಎಚ್ಡಿಎಫ್ಸಿ ಷೇರುಗಳು ಕ್ರಿಯಾಶೀಲವಾಗಿದ್ದರೆ, ಬಜಾಜ್ ಆಟೋ, ಐಸಿಐಸಿಐ ಬ್ಯಾಂಕ್, ಹೀರೋ ಮೋಟಾರ್ ಕಾರ್ಪ್, ಕೋಲ್ ಇಂಡಿಯಾ ಷೇರುಗಳ ಮೌಲ್ಯ ಕ್ಷೀಣಿಸಿದವು.