ಮುಂಬೈ: ಕೊರೊನಾ ವೈರಸ್ ಸೃಷ್ಟಿಸಿದ ಅನಿಶ್ಚಿತತೆಯ ಆರ್ಥಿಕ ಪರಿಣಾಮದಿಂದಾಗಿ ಸೆನ್ಸೆಕ್ಸ್ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ 400 ಅಂಕಗಳ ಕುಸಿತ ಕಂಡಿದೆ.
30 ಷೇರುಗಳ BSE ಬಾರೋಮೀಟರ್ 375.34 ಅಂಕ ಕುಸಿತ ಕಂಡು 27,889.97ರಲ್ಲಿ ವಹಿವಾಟು ನಡೆಸುತ್ತಿದೆ. ಅಂತೆಯೇ, NSE ನಿಫ್ಟಿ 105.35 ಅಂಕಗಳು ಕುಸಿದು 8,148.45 ಕ್ಕೆ ಬಂದು ತಲುಪಿದೆ.
ಸೆನ್ಸೆಕ್ಸ್ ನಷ್ಟದಲ್ಲಿ ಕೋಟಕ್ ಬ್ಯಾಂಕ್ ಅಗ್ರಸ್ಥಾನದಲ್ಲಿದ್ದು, ಶೇ. 7 ರಷ್ಟು ಕುಸಿತ ಕಂಡಿದೆ. ನಂತರದ ಸ್ಥಾನದಲ್ಲಿ ಇಂಡಸ್ಇಂಡ್ ಬ್ಯಾಂಕ್, ಹೀರೋ ಮೊಟೊಕಾರ್ಪ್, ಏಷ್ಯನ್ ಪೇಂಟ್ಸ್, ಟೈಟಾನ್ ಮತ್ತು ಐಸಿಐಸಿಐ ಬ್ಯಾಂಕ್ ನಂತರದ ಸ್ಥಾನಗಳಲ್ಲಿವೆ.
ರೂಪಾಯಿ ಮೌಲ್ಯದಲ್ಲೂ ಇಳಿಕೆ:
ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 48 ಪೈಸೆ ಕುಸಿದು 76.08 ಕ್ಕೆ ತಲುಪಿದೆ. ಕಳೆದ ಮಂಗಳವಾರ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 75.60 ಕ್ಕೆ ಇಳಿದಿತ್ತು.