ETV Bharat / business

ಆರಂಭದಲ್ಲೇ 200 ಅಂಶ ಕುಸಿತ ಕಂಡ  ಸೆನ್ಸೆಕ್ಸ್​: ಹೂಡಿಕೆದಾರರಲ್ಲಿ ಆತಂಕ

ಮುಂಬೈ ಷೇರು ಮಾರುಕಟ್ಟೆ ಆರಂಭಿಕ ನಷ್ಟ ಅನುಭವಿಸಿದೆ. ಪೇಟೆ ಆರಂಭವಾಗುತ್ತಿದಂತೆ ಸುಮಾರು 200 ಅಂಕಗಳ ಇಳಿಕೆ ಕಂಡು ಆತಂಕಕ್ಕೆ ಕಾರಣವಾಯ್ತು.

BSE index
ಬಿಎಸ್‌ಇ ಸೂಚ್ಯಂಕ
author img

By

Published : Nov 19, 2020, 12:31 PM IST

ಮುಂಬೈ: ಷೇರುಪೇಟೆ ಗುರುವಾರ ಆರಂಭಿಕ ನಷ್ಟ ಅನುಭವಿಸಿ, ಹೂಡಿಕೆದಾರರಿಗೆ ನಷ್ಟವನ್ನುಂಟು ಮಾಡಿತು. ಬೆಳಗಿನ ವಹಿವಾಟಿನಲ್ಲಿ 200 ಪಾಯಿಂಟ್‌ಗಳಷ್ಟು ಕುಸಿದಿದ್ದು, ಜಾಗತಿಕ ಮಾರುಕಟ್ಟೆಗಳ ಋಣಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಈ ಇಳಿಕೆ ಕಂಡು ಬಂತು. ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ಮತ್ತು ಇನ್ಫೋಸಿಸ್ ಷೇರುಗಳ ಬೆಲೆಯಲ್ಲಿ ಬೆಳಗಿನ ವ್ಯವಹಾರದಲ್ಲಿ ಇಳಿಕೆ ಕಂಡು ಬಂತು.

ಪ್ರಮುಖ 30 ಷೇರುಗಳ ಬೆಲೆಯಲ್ಲಿ 240.96 ಅಂಕಗಳ ಕುಸಿತವಾಯಿತು. ಈ ಮೂಲಕ 43,939.09 ಕ್ಕೆ ತಲುಪಿತು. ಇನ್ನು ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 62.80 ಅಂಶಗಳ ಕುಸಿತ ದಾಖಲಿಸಿತು. ಆಕ್ಸಿಸ್, ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕ್​​, ಏಷ್ಯನ್ ಪೇಂಟ್ಸ್ ಮತ್ತು ಭಾರತೀಯ ಏರ್‌ಟೆಲ್ ಷೇರುಗಳು ಕುಸಿತ ಕಂಡು ಬಂತು. ಈ ಮಧ್ಯೆ, ಬಜಾಜ್ ಫಿನ್ಸರ್ವ್, ಎಲ್ ಅಂಡ್ ಟಿ, ಟಾಟಾ ಸ್ಟೀಲ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಲಾಭ ಮಾಡಿಕೊಂಡವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.