ಮುಂಬೈ: ಇಂದು ಸೆನ್ಸೆಕ್ಸ್ 500 ಕ್ಕೂ ಅಧಿಕ ಅಂಕ ಕುಸಿತ ಕಂಡು, 50,161.57 ವಹಿವಾಟು ನಡೆಸುತ್ತಿದೆ. ನಿಫ್ಟಿ ಸಹ 160ಕ್ಕೂ ಹೆಚ್ಚು ಅಂಕ ಇಳಿಕೆ ಕಾಣುವ ಮೂಲಕ 14,846.80 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಎಸ್‌ಬಿಐ ಅಗ್ರ ನಷ್ಟ ಅನುಭವಿಸಿದ್ದು, ಶೇಕಡಾ 2 ರಷ್ಟು ನಷ್ಟವಾಗಿದೆ. ಎಂ & ಎಂ, ಡಾ.ರೆಡ್ಡಿ ಲ್ಯಾಬ್, ಬಜಾಜ್ ಆಟೋ, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಕೊಟಾಕ್ ಬ್ಯಾಂಕ್ ನಂತರದ ಸ್ಥಾನದಲ್ಲಿದೆ.
ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 600 ಪಾಯಿಂಟ್‌ಗಳಷ್ಟು ಕುಸಿದಿದ್ದು, ವಿದೇಶಿ ನಿಧಿಯ ಹೊರಹರಿವಿನ ಮಧ್ಯೆ ಹಣಕಾಸು ಷೇರುಗಳಲ್ಲಿನ ನಷ್ಟವನ್ನು ಹೆಚ್ಚು ಮಾಡಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕವು 630.51 ಪಾಯಿಂಟ್‌ಗಳು ಅಥವಾ 1.24 ಶೇಕಡಾ ಕಡಿಮೆ 50,161.57 ಕ್ಕೆ ವಹಿವಾಟು ನಡೆಸುತ್ತಿದೆ. ಎನ್‌ಎಸ್‌ಇ ನಿಫ್ಟಿ 165.15 ಅಂಕಗಳನ್ನು ಅಥವಾ 1.23 ರಷ್ಟು ಇಳಿಕೆ 14,846.80 ಕ್ಕೆ ತಲುಪಿದೆ. ಮತ್ತೊಂದೆಡೆ, ಟೆಕ್ ಮಹೀಂದ್ರಾ ಮತ್ತು ಪವರ್ ಗ್ರಿಡ್ ಲಾಭಗಳಿಸಿವೆ.
ಇದನ್ನೂ ಓದಿ: ಬೆಂಗಳೂರು: ಭಾರತದ ಮೊದಲ ಕ್ಷಿಪ್ರ ಸರಕು ಸಾಗಣೆ ಕಾರ್ಗೋ ಟರ್ಮಿನಲ್ ಉದ್ಘಾಟನೆ
ಹಿಂದಿನ ಶುಕ್ರವಾರದ ವಹಿವಾಟಿನಲ್ಲಿ, ಸೆನ್ಸೆಕ್ಸ್ 487.43 ಪಾಯಿಂಟ್ ಅಥವಾ 0.95 ಶೇಕಡಾ ಕಡಿಮೆಯಾಗಿ 50,792.08 ಕ್ಕೆ ತಲುಪಿತ್ತು. 143.85 ಪಾಯಿಂಟ್ ಅಥವಾ 0.95 ರಷ್ಟು ಕುಸಿದು 15,030.95 ಕ್ಕೆ ಕೊನೆಗೊಂಡಿತ್ತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದರು, ಅವರು ವಿನಿಮಯ ದತ್ತಾಂಶದ ಪ್ರಕಾರ 42,942.60 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು.