ETV Bharat / business

ಷೇರುಪೇಟೆಯಲ್ಲಿ ಕರಡಿ ಕುಣಿತ: ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 303 ಅಂಕ ಕುಸಿತ - foreign fund outflow.

ಮುಂಬೈ ಷೇರುಪೇಟೆ (Mumbai Share Market)ಯಲ್ಲಿ ಇಂದೂ ಸಹ ಕರಡಿ ಕುಣಿತ ಮುಂದುವರೆದಿದ್ದು, ದಿನದ ಆರಂಭದಲ್ಲೇ ಸೆನ್ಸೆಕ್ಸ್‌ 300ಕ್ಕೂ ಹೆಚ್ಚು ಅಂಕಗಳ ಕುಸಿತವಾಗಿದೆ. ನಿಫ್ಟಿ ಕೂಡ 102.60 ಅಂಕಗಳ ಕುಸಿತದೊಂದಿಗೆ ವಹಿವಾಟು ಆರಂಭಿಸಿವೆ.

sensex-dropped-303-points-in-early-trade
ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 303 ಅಂಕ ಕುಸಿತ
author img

By

Published : Nov 11, 2021, 12:02 PM IST

ಮುಂಬೈ: ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ 300ಕ್ಕೂ ಹೆಚ್ಚು ಅಂಕಗಳ ಕುಸಿತದೊಂದಿಗೆ ದಿನದ ವಹಿವಾಟು ಆರಂಭಿಸಿದೆ. ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ (Equity Benchmark Sensex) 300 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದಿದೆ.

ವಿದೇಶಿ ವಿನಿಮಯದ ನಿರಂತರ ಹೊರಹರಿವಿಕೆಯಿಂದಾಗಿ (Foreign Fund Outflow) ಹೆಚ್​​ಡಿಎಫ್​ಸಿ, ಐಸಿಐಸಿಐ ಬ್ಯಾಂಕ್ ಮತ್ತು ಇನ್ಫೋಸಿಸ್​​ ಷೇರು (Infosys Share) ಹೆಚ್ಚಿನ ನಷ್ಟ ಅನುಭವಿಸಿವೆ. ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೂಚ್ಯಂಕವು 303.07 ಅಥವಾ ಶೇ.0.50 ರಷ್ಟು ಕುಸಿತ ಕಂಡು 60,049.75 ಅಂಕಗೊಳೊಂದಿಗೆ ವಹಿವಾಟು ನಡೆಸುತ್ತಿದೆ. ಜೊತೆಗೆ ನಿಫ್ಟಿ (Nifty) 102.60 ಅಂಕ ಅಥವಾ ಶೇ.0.57ರಷ್ಟು ಕುಸಿತ ಕಂಡು 17,914.60ರಷ್ಟಕ್ಕೆ ತಲುಪಿದೆ.

ವಹಿವಾಟು ಆರಂಭದಲ್ಲಿ ಮಹಿಂದ್ರ ಷೇರು (Mahindra Share) ಅತೀ ಹೆಚ್ಚಿನ ನಷ್ಟ ಅನುಭವಿಸಿದೆ. ಸುಮಾರು ಶೇ.2ರಷ್ಟು ಒಟ್ಟಾರೆ ನಷ್ಟದಲ್ಲಿ ಭಾಗಿಯಾಗಿದೆ. ಇದಾದ ಬಳಿಕ ನಷ್ಟದ ಸಾಲಿನಲ್ಲಿ ಹೆಚ್​​ಡಿಎಫ್​ಸಿ, ಎಸ್​​ಬಿಐ, ಸೆಸ್ಟ್ಲೆ ಇಂಡಿಯಾ, ಆ್ಯಕ್ಸಿಸ್ ಬ್ಯಾಂಕ್, ಹೆಚ್​ಸಿಎಲ್​ ಟೆಕ್ ಮತ್ತು ಐಸಿಐಸಿಐ ಬ್ಯಾಂಕ್ ಇವೆ.

ಆದರೆ, ಕೆಲ ಸಂಸ್ಥೆಗಳು ಉತ್ತಮ ಆರಂಭ ಪಡೆದಿವೆ, ಮುಖ್ಯವಾಗಿ ಟೈಟನ್, ಟಾಟಾ ಸ್ಟೀಲ್, ಎಲ್​​&ಟಿ, ಭಾರತಿ ಏರ್​ಟೆಲ್​ ಮತ್ತು ಮಾರುತಿ ಸಂಸ್ಥೆ ಲಾಭದತ್ತ ಮುಖಮಾಡಿದ್ದವು. ಕಳೆದ ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್​ 80.63 ಅಂಕಗಳ ಕುಸಿತ ಹಾಗೂ ನಿಫ್ಟಿ 27.05 ಅಂಕಗಳ ಕುಸಿತದೊಂದಿಗೆ ಕ್ರಮವಾಗಿ, 60,352.82 ಮತ್ತು 8,017.20 ರಲ್ಲಿ ಮಾರುಕಟ್ಟೆ ಅಂತ್ಯವಾಗಿತ್ತು.

ಏಷ್ಯಾದ ಇತರೆಡೆ ಮುಖ್ಯವಾಗಿ ಹಾಂಕಾಂಗ್ ಮತ್ತು ಸಿಯೋಲ್‌ನ ಷೇರುಗಳು ಮಿಡ್-ಸೆಷನ್ ಡೀಲ್‌ಗಳಲ್ಲಿ ನಷ್ಟದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಶಾಂಘೈ ಮತ್ತು ಟೋಕಿಯೊ ಷೇರುಪೇಟೆಗಳು ಸಕಾರಾತ್ಮಕವಾಗಿವೆ. ವಾಲ್ ಸ್ಟ್ರೀಟ್‌ನಲ್ಲಿನ ಪ್ರಮುಖ ಸೂಚ್ಯಂಕಗಳು ರಾತ್ರಿಯ ವಹಿವಾಟು ನಷ್ಟದಿಂದ ಅಂತ್ಯಗೊಂಡಿತ್ತು.

ಇನ್ನೊಂದೆಡೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು (Crude Oil) ಪ್ರತಿ ಬ್ಯಾರೆಲ್‌ಗೆ ಶೇ.0.23ರಷ್ಟು ಏರಿಕೆಯಾಗಿ 82.83 ಯುಎಸ್​ ಡಾಲರ್​​​ಗೆ ತಲುಪಿದೆ.

ಇದನ್ನೂ ಓದಿ: today Gold rate: ಆಭರಣ ಪ್ರಿಯರಿಗೆ ಕಹಿ ಸುದ್ದಿ, ಚಿನ್ನಾಭರಣ ಬೆಲೆ ಏರಿಕೆ.. ಬೆಂಗಳೂರಿನಲ್ಲಿ ಬಂಗಾರದ ಬೆಲೆ ಎಷ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.