ETV Bharat / business

ಆಕ್ಸಿಜನ್ ಸಾಂದ್ರಕಗಳಿಗೆ IGST: ದೆಹಲಿ ನ್ಯಾಯಾಲಯದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

author img

By

Published : Jun 1, 2021, 3:15 PM IST

ವೈಯಕ್ತಿಕ ಬಳಕೆಗಾಗಿ ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳಲು ಐಜಿಎಸ್​ಟಿ ಹೇರುವುದು 'ಅಸಂವಿಧಾನಿಕ' ಎಂದು ದೆಹಲಿ ಹೈಕೋರ್ಟ್​ನ ನ್ಯಾಯಮೂರ್ತಿಗಳಾದ ರಾಜೀವ್ ಶೇಖರ್ ಮತ್ತು ತಲ್ವಂತ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಹೇಳಿತ್ತು.

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ವೈಯಕ್ತಿಕ ಬಳಕೆಗಾಗಿ ಉಡುಗೊರೆಯಾಗಿ ಆಮ್ಲಜನಕ ಸಾಂದ್ರತೆ ಆಮದು ಮಾಡಿಕೊಳ್ಳುವಲ್ಲಿ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ಹೇರುವುದು ಅಸಂವಿಧಾನಿಕ ಎಂದು ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಮಂಗಳವಾರ ತಡೆ ಹಿಡಿದಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರಿದ್ದ ನ್ಯಾಯಪೀಠ ತಡೆಯೊಡ್ಡಿದೆ. ನಾವು ನೋಟಿಸ್ ನೀಡುತ್ತೇವೆ ಮತ್ತು ಮುಂದಿನ ವಿಚಾರಣೆಯ ದಿನಾಂಕದವರೆಗೆ ದೆಹಲಿ ಹೈಕೋರ್ಟ್‌ನ ಮೇ 21ರ ಆದೇಶ ತಡೆಹಿಡಿಯಲಾಗುವುದು ಎಂದು ಹೇಳಿತು.

ಹಣಕಾಸು ಸಚಿವಾಲಯ ಪ್ರತಿನಿಧಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು, ಸರ್ಕಾರವು ತೆರಿಗೆ ಸ್ಲ್ಯಾಬ್ ಅನ್ನು ಶೇ 28ರಿಂದ ತೆಗೆದುಹಾಕಿ ಶೇ 12ಕ್ಕೆ ತಂದಿತು. ಆದರೆ, ಇನ್ನು ಅವರು ಆರ್ಟಿಕಲ್ 21 ಅನ್ನು ಉಲ್ಲಂಘಿಸಲಾಗಿದೆ ಎನ್ನುತ್ತಿದ್ದಾರೆ ಎಂದರು.

ಹೈಕೋರ್ಟ್ ಆದೇಶ ಬಳಸಿಕೊಂಡು ಇಂತಹ ನೂರಾರು ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುವುದು ಎಂದು ಎಜಿ ವಾದಿಸಿದರು. ಜಿಎಸ್​ಟಿ ಮಂಡಳಿಯು ಜೂನ್ 8ರಂದು ಸಭೆ ನಡೆಸುತ್ತಿದೆ. ಈ ವಿಷಯದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಎಜಿ ಮನವಿ ಸಲ್ಲಿಸಿದರು.

ಇದನ್ನೂ ಓದಿ: ಇ - ವಾಹನಗಳು: ನೋಂದಣಿ, ನವೀಕರಣ ಶುಲ್ಕ ವಿನಾಯಿತಿಗೆ ಪ್ರಸ್ತಾಪಿಸಿದ ಸರ್ಕಾರ

ಮೇ 28ರಂದು ನಡೆದ 43ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ, ಕೋವಿಡ್ ಸಂಬಂಧಿತ ವಸ್ತುಗಳಿಗೆ ಹೆಚ್ಚಿನ ಪರಿಹಾರ ನೀಡಲು ಸಚಿವರ ಸಮಿತಿ ರಚಿಸಲು ತೀರ್ಮಾನಿಸಲಾಯಿತು ಎಂದು ಉನ್ನತ ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಆಮ್ಲಜನಕ ಸಾಂದ್ರಕಗಳ ಆಮದಿನಲ್ಲಿ ರಾಜ್ಯ ಮತ್ತು ಅದರ ಏಜೆನ್ಸಿಗಳಿಗೆ ವಿನಾಯಿತಿ ನೀಡುವ ಮೂಲಕ ಹೈಕೋರ್ಟ್ ಶುದ್ಧ ನೀತಿಯ ಕ್ಷೇತ್ರಕ್ಕೆ ಪ್ರವೇಶಿಸಿದೆ ಎಂದು ಕೇಂದ್ರವು ಸರ್ಜಿ ಸಲ್ಲಿಸಿದೆ ಎಂದು ಸುಪ್ರೀಂಕೋರ್ಟ್​ ಹೇಳಿದೆ.

ಸಂಕ್ಷಿಪ್ತ ವಿಚಾರಣೆಯ ನಂತರ, ಹೈಕೋರ್ಟ್ ಆದೇಶ ಪ್ರಶ್ನಿಸಿ ಹಣಕಾಸು ಸಚಿವಾಲಯ ಸಲ್ಲಿಸಿದ್ದ ಮನವಿಯ ಕುರಿತು ಉನ್ನತ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತು. ಮುಂದಿನ ದಿನಾಂಕದವರೆಗೆ ಹೈಕೋರ್ಟ್ ತೀರ್ಪನ್ನು ತಡೆ ಹಿಡಿಯಿತು.

ವೈಯಕ್ತಿಕ ಬಳಕೆಗಾಗಿ ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳಲು ಐಜಿಎಸ್​ಟಿ ಹೇರುವುದು 'ಅಸಂವಿಧಾನಿಕ' ಎಂದು ದೆಹಲಿ ಹೈಕೋರ್ಟ್​ನ ನ್ಯಾಯಮೂರ್ತಿಗಳಾದ ರಾಜೀವ್ ಶೇಖರ್ ಮತ್ತು ತಲ್ವಂತ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಹೇಳಿತ್ತು.

ಆಮದು ಮಾಡಿದ ಆಮ್ಲಜನಕ ಸಾಂದ್ರಕಗಳ ಮೇಲೆ ಶೇ 12ರಷ್ಟು ಐಜಿಎಸ್‌ಟಿ ವಿಧಿಸುವ ಮೇ 1ರ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿತು.

ಆಮ್ಲಜನಕ ಸಾಂದ್ರೀಕರಣವನ್ನು ಆಮದು ಮಾಡಿಕೊಳ್ಳುವವರು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಪತ್ರವೊಂದನ್ನು ನೀಡಬೇಕಾಗುತ್ತದೆ. ಸಾಧನವು ವೈಯಕ್ತಿಕ ಬಳಕೆಗಾಗಿ ಮತ್ತು ವಾಣಿಜ್ಯ ಬಳಕೆಗಾಗಿ ಅಲ್ಲ ಎಂದು ಘೋಷಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.