ನವದೆಹಲಿ: ಆರು ತಿಂಗಳ ಲಾಕ್ಡೌನ್ ಅವಧಿಯಲ್ಲಿ ಸಾಲ ಮರುಪಾವತಿ ಅವಧಿ ವಿಸ್ತರಿಸುವ ಮತ್ತು ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮತ್ತೆ ಮುಂದೂಡಿದೆ.
ಲಾಕ್ಡೌನ್ ವೇಳೆ ಆರ್‌ಬಿಐ ಸಾಲದ ನಿಷೇಧಾಜ್ಞೆ ಯೋಜನೆ ಪಡೆದ ಸಾಲಗಾರರು ಪಾವತಿಸದ ಇಎಂಐಗಳ ಮೇಲೆ ಬ್ಯಾಂಕ್ಗಳು ವಿಧಿಸಿದ್ದ ಚಕ್ರ ಬಡ್ಡಿಯ ಸಂಬಂಧಿಸಿದ ಮನವಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನವೆಂಬರ್ 19ರಂದು ಕೈಗೆತ್ತಿಕೊಳ್ಳಲಿದೆ ಎಂದು ನ್ಯಾಯಪೀಠ ತಿಳಿಸಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಅಪೆಕ್ಸ್ ಕೋರ್ಟ್ನ ನ್ಯಾಯಪೀಠವು ವಿಚಾರಣೆ ನಾಳೆಗೆ ಮುಂದೂಡಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಹಾರವಾಗಿ ನೀಡಲಾಗುವ ಸಾಲ ನಿಷೇಧದ ಚಕ್ರ ಬಡ್ಡಿ ಮತ್ತು ಇತರ ಸೂಕ್ತ ನಿರ್ದೇಶನಗಳ ಮೇಲಿನ ಬಡ್ಡಿ ಮನ್ನಾ ಮಾಡಲು ಅರ್ಜಿದಾರರು ಕೋರಿದ್ದರು.
ಕೇಂದ್ರ ಸರ್ಕಾರ ಅಕ್ಟೋಬರ್ 25ರಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 2020ರ ಮಾರ್ಚ್ 1ರಿಂದ ಆಗಸ್ಟ್ 31ರವರೆಗೆ ನಿರ್ದಿಷ್ಟ ಸಾಲ ಖಾತೆಗಳಲ್ಲಿ ಸಾಲಗಾರರಿಂದ ಬಡ್ಡಿ ಮನ್ನಾ ಯೋಜನೆ ಪಡೆಯಬಹುದು ಎಂದು ತಿಳಿಸಿತ್ತು.
ಈ ನಿರ್ಧಾರವನ್ನು ಹಣಕಾಸು ಸಚಿವಾಲಯ ತೆಗೆದುಕೊಂಡಿದ್ದು, ಅಕ್ಟೋಬರ್ 21ರಂದು ನಡೆದ ಸಭೆಯಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿತ್ತು.