ETV Bharat / business

2 ತಿಂಗಳಲ್ಲಿ ₹ 3,622 ಕೋಟಿ ಮೊತ್ತದ ಚುನಾವಣಾ ಬಾಂಡ್​ ಮಾರಿದ ಎಸ್​ಬಿಐ - undefined

ಮಾರ್ಚ್​ನಲ್ಲಿ ₹ 1,365 ಕೋಟಿ ಮೊತ್ತದ ಚುನಾವಣಾ ಬಾಂಡ್​ಗಳು ಮಾರಾಟವಾಗಿವೆ. ಏಪ್ರಿಲ್​ನಲ್ಲಿ ಇವುಗಳ ಮಾರಾಟ ಶೇ 65.21ರಷ್ಟು ಹೆಚ್ಚಳವಾಗಿದ್ದು, ₹ 2,256.37 ಕೋಟಿ ಮೊತ್ತದ ಬಾಂಡ್​ಗಳು ಮಾರಾಟವಾಗಿವೆ ಎಂದು ಎಸ್​ಬಿಐ ಮಾಹಿತಿ ನೀಡಿದೆ.

ಸಾಂದರ್ಭಿಕ ಚಿತ್ರ
author img

By

Published : May 11, 2019, 6:36 AM IST

ನವದೆಹಲಿ: ಭಾರತೀಯ ಸ್ಟೇಟ್​ ಬ್ಯಾಂಕ್ (ಎಸ್​ಬಿಐ) ಮಾರ್ಚ್​ ಮತ್ತು ಏಪ್ರಿಲ್ ತಿಂಗಳ ಅವಧಿಯಲ್ಲಿ ₹ 3,622 ಕೋಟಿ ಮೊತ್ತದ ಚುನಾವಣಾ ಬಾಂಡ್​ಗಳನ್ನು ಮಾರಾಟ ಮಾಡಿದೆ ಎಂಬುದು ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅಡಿ ಬಹಿರಂಗವಾಗಿದೆ.

ಪುಣೆಯ ವಿಹಾರ್ ದುರ್ವೆ ಎಂಬುವವರು ಆರ್​ಟಿಐ ಮೂಲಕ ಪಡೆದ ದಾಖಲೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಮಾರ್ಚ್​ನಲ್ಲಿ ₹ 1,365 ಕೋಟಿ ಮೊತ್ತದ ಚುನಾವಣೆ ಬಾಂಡ್​ಗಳು ಮಾರಾಟವಾಗಿವೆ. ಏಪ್ರಿಲ್​ನಲ್ಲಿ ಇವುಗಳ ಮಾರಾಟ ಶೇ 65.21ರಷ್ಟು ಹೆಚ್ಚಳವಾಗಿದ್ದು, ₹ 2,256.37 ಕೋಟಿ ಮೊತ್ತದ ಬಾಂಡ್​ಗಳು ಮಾರಾಟವಾಗಿವೆ ಎಂದು ಎಸ್​ಬಿಐ ಮಾಹಿತಿ ನೀಡಿದೆ.

ಏಪ್ರಿಲ್​ನಲ್ಲಿ ಹೆಚ್ಚಿನ ಬಾಂಡ್​ಗಳು ಮುಂಬೈನಲ್ಲಿ ಮಾರಾಟವಾಗಿವೆ. ಮುಂಬೈನಲ್ಲಿ ₹ 694 ಕೋಟಿ, ಕೋಲ್ಕತ್ತಾದಲ್ಲಿ ₹ 417.13 ಕೋಟಿ, ದೆಹಲಿಯಲ್ಲಿ ₹ 408.62 ಕೋಟಿ ಹಾಗೂ ₹ 338.07 ಕೋಟಿ ಮೊತ್ತದ ಬಾಂಡ್​ಗಳು ಹೈದರಾಬಾದ್ ಸೇರಿದಂತೆ ಇತರೆ ನಗರಗಳಲ್ಲಿ ಮಾರಾಟವಾಗಿವೆ.

ಚುನಾವಣೆ ಬಾಂಡ್​ ಯೋಜನೆ 2018ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಇದನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು. ಭಾರತದ ಪೌರರಿಗೆ ಮಾತ್ರವೇ ಈ ಬಾಂಡ್ ಖರೀದಿ ಮಾಡಲು ಅವಕಾಶವಿದೆ ಎಂದು ಕಳೆದ ವರ್ಷ ಕೇಂದ್ರ ಸರ್ಕಾರ ಮಾಹಿತಿ ನೀಡಿತು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.